ಬೆಳಗಿನ ಪೂಜೆ
ಬೆಳಗ್ಗೆ 4.15 : ಮಂಗಳ ಆರತಿ
ಬೆಳಗ್ಗೆ 3.45 ಗಂಟೆಗೆ ದೇವರಿಗೆ ಜಾಗರಣ ಸೇವೆಯನ್ನು ಅರ್ಪಿಸಲಾಗುತ್ತದೆ (ದೇವರನ್ನು ಎಚ್ಚರಗೊಳಿಸುವುದು). ಅದರ ಅನಂತರ ಬಾಲ್ಯ ಭೋಗವನ್ನು ಅರ್ಪಿಸುವುದು. ಅದಾದ ಮೇಲೆ ದಿನದ ಮೊದಲ ಆರತಿ, ಮಂಗಳ ಆರತಿಯನ್ನು ಸ್ವೀಕರಿಸಲು ಪ್ರಭುವು ಸಿದ್ಧನಾಗುತ್ತಾನೆ. ಭಗವಂತನ ಪ್ರಥಮ ದರ್ಶನಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಗರ್ಭಗುಡಿಯನ್ನು ತೆರೆಯಲಾಗುತ್ತಿದೆಯೆಂದು ಪ್ರಕಟಿಸಲು ಬೆಳಗ್ಗೆ 4.15 ಗಂಟೆಗೆ ಶಂಖವನ್ನು ಊದಲಾಗುವುದು. ಧೂಪ, ದೀಪ, ಜಲ, ಅರ್ಘ್ಯ, ಪುಷ್ಪ, ಚಾಮರ ಮತ್ತು ವ್ಯಜನಗಳನ್ನು (ನವಿಲು ಗರಿಗಳಿಂದ ಮಾಡಿದ ಬೀಸಣಿಗೆ) ಭಗವಂತನಿಗೆ ಅರ್ಪಿಸಿ ಭವ್ಯವಾದ ಆರತಿಯನ್ನು ಮಾಡಲಾಗುವುದು. ಆಧ್ಯಾತ್ಮಿಕ ಗುರುಗಳನ್ನು ಕೊಂಡಾಡಿ ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರರು ರಚಿಸಿರುವ ಗುರು ಅಷ್ಟಕವನ್ನು ಭಕ್ತರು ಹಾಡುವರು.
ಬೆಳಗ್ಗೆ 4.35 – ಶ್ರೀ ತುಳಸಿ ಪೂಜೆ ಮತ್ತು ನರಸಿಂಹ ಕೀರ್ತನೆ
ಪ್ರತಿ ದಿನ ಬೆಳಗ್ಗೆ 4.35 ಮತ್ತು ಸಂಜೆ 6.45 ಗಂಟೆಗೆ ಮಂದಿರದಲ್ಲಿ ತುಳಸಿ ಪೂಜೆಯನ್ನು ನೆರವೇರಿಸಲಾಗುವುದು. ತುಳಸಿ ಪೂಜೆಯಲ್ಲಿ ಮೂರು ಪ್ರಮುಖ ಅಂಶಗಳಿವೆ.
1. ತುಳಸಿ ಪ್ರಣಾಮ : ಭಕ್ತರು ತುಳಸಿ ಪ್ರಣಾಮ ಮಂತ್ರವನ್ನು ಮೂರು ಬಾರಿ ಜಪಿಸಿ ತುಳಸಿಗೆ ನಮಸ್ಕರಿಸುವರು.
2. ತುಳಸಿ ಆರತಿ : ಭಕ್ತರು ತುಳಸಿ ಕೀರ್ತನೆಯನ್ನು ಹಾಡುತ್ತಿರುವಂತೆಯೇ ತುಳಸಿ ದೇವಿಗೆ ಧೂಪ, ದೀಪ ಮತ್ತು ಪುಷ್ಪಗಳನ್ನು ಅರ್ಪಿಸಲಾಗುವುದು.
3. ತುಳಸಿ ಪ್ರದಕ್ಷಿಣೆ : ಭಕ್ತರು ಪ್ರದಕ್ಷಿಣೆ ಮಂತ್ರವನ್ನು ಜಪಿಸುತ್ತ ತುಳಸಿ ದೇವಿಯ ಪ್ರದಕ್ಷಿಣೆಯನ್ನು ಮಾಡುವರು. ತುಳಸಿ ದೇವಿಗೆ ಪ್ರದಕ್ಷಿಣೆ ಕೈಗೊಂಡಾಗ ವ್ಯಕ್ತಿಯು ಮಾಡಿರಬಹುದಾದ ಪಾಪ-ಕರ್ಮಗಳು ಪ್ರತಿ ಹೆಜ್ಜೆಯಲ್ಲಿಯೂ ನಾಶವಾಗುತ್ತವೆ. ಭಕ್ತರು ಪುನಃ ತುಳಸಿ ಪ್ರಣಾಮ ಮಂತ್ರವನ್ನು ಜಪಿಸುತ್ತ ಗೌರವವನ್ನು ಸಲ್ಲಿಸುವರು.
ಬೆಳಗ್ಗೆ 5.00 ಗಂಟೆಗೆ – ಷೋಡಶ ಉಪಚಾರ ಪೂಜೆ ಮತ್ತು ಜಪ ಧ್ಯಾನ
ಭಕ್ತರು ಮುಖ್ಯ ಮಂದಿರದಲ್ಲಿ ಸೇರುವರು ಮತ್ತು ಹರೇ ಕೃಷ್ಣ ಮಹಾ ಮಂತ್ರದ ಜಪ ಮಾಡುವರು. ಗರ್ಭಗುಡಿಯ ಮುಚ್ಚಿದ ಬಾಗಿಲ ಒಳಗಡೆ ದೇವರಿಗೆ ಷೋಡಶೋಪಚಾರ ಸೇವೆ ಸಲ್ಲಿಸಲಾಗುತ್ತದೆ. (16 ಉಪಚಾರಗಳಿಂದ ವಿಗ್ರಹಗಳನ್ನು ಪೂಜಿಸುವುದು.) ಷೋಡಶೋಪಚಾರ ಸೇವೆಯ ಭಾಗವಾಗಿ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ ಮಾಡಲಾಗುವುದು ಮತ್ತು ವೈಭವದ ಉಡುಗೆಗಳಿಂದ ಅತ್ಯಂತ ಆಕರ್ಷಿತವಾಗಿ ಅಲಂಕರಿಸಲಾಗುವುದು.
ಬೆಳಗ್ಗೆ ೭:೧೫ – ಶೃಂಗಾರ ದರ್ಶನ ಆರತಿ
ಬೆಳಗ್ಗೆ 7.40 – ಗುರು ಪೂಜೆ
ಬೆಳಗ್ಗೆ 8.00- ಭಾಗವತ ಉಪನ್ಯಾಸ
ಸಾಯಂಕಾಲದ ಪೂಜೆ
ಸಂಜೆಯ ದರ್ಶನವು 4.15 ಗಂಟೆಗೆ ಆರಂಭವಾಗುತ್ತದೆ ಮತ್ತು ರಾತ್ರಿ 8.30 ಕ್ಕೆ ಅಂತ್ಯಗೊಳ್ಳುತ್ತದೆ.
ಮಂದಿರದ ವೇಳಾ ಪಟ್ಟಿ
ಸಮಯ ಕಾರ್ಯಕ್ರಮ
ಬೆಳಗ್ಗೆ 4.15 ರಿಂದ 4.30 ಮಂಗಳ ಆರತಿ
ಬೆಳಗ್ಗೆ 4.35 ರಿಂದ 5.00 ತುಳಸಿ ಪೂಜೆ (ಈ ಸಮಯದಲ್ಲಿ ಗರ್ಭಗುಡಿ ಮುಚ್ಚಿರುತ್ತದೆ.)
ಬೆಳಗ್ಗೆ 5.00 ರಿಂದ 7.15 ಹರೇ ಕೃಷ್ಣ ಮಹಾ ಮಂತ್ರ ಧ್ಯಾನ (ಈ ಸಮಯದಲ್ಲಿ ಗರ್ಭಗುಡಿ ಮುಚ್ಚಿರುತ್ತದೆ.)
ಬೆಳಗ್ಗೆ 7.15 ರಿಂದ 7.40 ಶೃಂಗಾರ ಆರತಿ.
ಬೆಳಗ್ಗೆ 7.40 ರಿಂದ 8.00 ಗುರು ಪೂಜೆ ಮತ್ತು ಹರೇ ಕೃಷ್ಣ ಸಂಕೀರ್ತನೆ
ಬೆಳಗ್ಗೆ 8.15 ರಿಂದ 8.30 ಭೋಗ ಅರ್ಪಣೆ (ಈ ಸಮಯದಲ್ಲಿ ಗರ್ಭಗುಡಿ ಮುಚ್ಚಿರುತ್ತದೆ.)
ಬೆಳಗ್ಗೆ 8.00 ರಿಂದ 8.45 ಶ್ರೀಮದ್ ಭಾಗವತ ತರಗತಿ
ಮಧ್ಯಾಹ್ನ 12.00 ರಿಂದ 12.20 ರಾಜಭೋಗ ಅರ್ಪಣೆ (ಈ ಸಮಯದಲ್ಲಿ ಗರ್ಭಗುಡಿ ಮುಚ್ಚಿರುತ್ತದೆ.)
ಮಧ್ಯಾಹ್ನ 12.30 ರಿಂದ 12.50 ರಾಜಭೋಗ ಆರತಿ
ಮಧ್ಯಾಹ್ನ 1.00 ರಿಂದ ಸಂಜೆ 4.15 ಮಂದಿರವು ಮುಚ್ಚಿರುತ್ತದೆ.
ಸಂಜೆ 4.15 ರಿಂದ 4.30 ಧೂಪ ಆರತಿ
ಸಂಜೆ 5.30 ರಿಂದ 5.45 ಭೋಗ ಅರ್ಪಣೆ
ಸಂಜೆ 6.45 ರಿಂದ 6.55 ತುಳಸಿ ಪೂಜೆ
ಸಂಜೆ 7.00 ರಿಂದ 7.20 ಸಂಧ್ಯಾ ಆರತಿ
ರಾತ್ರಿ 8.00 ರಿಂದ 8.15 ಭೋಗ ಅರ್ಪಣೆ (ಈ ಸಮಯದಲ್ಲಿ ಗರ್ಭಗುಡಿ ಮುಚ್ಚಿರುತ್ತದೆ)
ರಾತ್ರಿ 8.15 ರಿಂದ 8.30 ಧೂಪ ಆರತಿ
ರಾತ್ರಿ 8.30 ಮಂದಿರವನ್ನು ಮುಚ್ಚಲಾಗುತ್ತದೆ.