srila prabhupada books

ಖಾಸಗಿ ಭೇಟಿಯ ಸಂದರ್ಭ ಶ್ರೀಲ ಪ್ರಭುಪಾದರು ತಮ್ಮ ಗುರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರನ್ನು ಒಮ್ಮೆ ಕಂಡಾಗ, ಗುರುಗಳು ಹೇಳಿದರು, “ಕೆಲವು ಪುಸ್ತಕಗಳನ್ನು ಮುದ್ರಿಸಬೇಕೆಂಬ ಅಪೇಕ್ಷೆ ನನಗಿದೆ. ನಿನಗೆ ಯಾವಾಗಲಾದರೂ ಸಾಕಷ್ಟು ಹಣ ಲಭಿಸಿದರೆ, ಪುಸ್ತಕಗಳನ್ನು ಪ್ರಕಟಿಸು.”

ಶ್ರೀಲ ಪ್ರಭುಪಾದರು ತಮ್ಮ ಗುರುಗಳ ಈ ಆದೇಶಕ್ಕೆ ಸದಾ ಒತ್ತುಕೊಡುತ್ತಿದ್ದರು ಮತ್ತು ತಮ್ಮ ಶಿಷ್ಯರ ನೆರವಿನಿಂದ ಅವರು ಇಂಗ್ಲಿಷ್‌ನಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಅವುಗಳಲ್ಲಿ ಪ್ರಾಚೀನ ಶ್ರೇಷ್ಠ ಕೃತಿಗಳಾದ ಭಗವದ್ಗೀತೆ, ಶ್ರೀಮದ್ ಭಾಗವತ ಮತ್ತು ಚೈತನ್ಯ ಚರಿತಾಮೃತ ಸೇರಿವೆ.

ತಮ್ಮ ಎಲ್ಲ ಕೊಡುಗೆಗಳಲ್ಲಿ ಪುಸ್ತಕಗಳು ಅತ್ಯಂತ ಪ್ರಾಮುಖ್ಯವಾದುದು ಎಂದು ಅವರು ಪರಿಗಣಿಸಿದ್ದರು. ತಮ್ಮ ಶಿಷ್ಯರು ಈ ಪುಸ್ತಕಗಳನ್ನು ಓದಬೇಕು, ತಮ್ಮಲ್ಲೇ ಚರ್ಚಿಸಬೇಕು, ಅದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಪ್ರಾಯೋಗಿಕವಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳುತ್ತಿದ್ದರು. ಈ ಪುಸ್ತಕಗಳು ಕೃಷ್ಣ ಪ್ರಜ್ಞೆ ಆಂದೋಲನಕ್ಕೆ ಮೂಲಾಧಾರ ಎಂದು ಪರಿಗಣಿಸಿದ್ದ ಅವರು ಈ ಪುಸ್ತಕಗಳ ವಿತರಣೆಯು ಅತ್ಯಂತ ಉತ್ತಮವಾದ ಬೋಧನಾ ಚಟುವಟಿಕೆ ಎಂದು ಭಾವಿಸಿದ್ದರು.

ಶ್ರೀಲ ಪ್ರಭುಪಾದರು 1972 ರಲ್ಲಿ ಭಕ್ತಿ ವೇದಾಂತ ಬುಕ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಇಂದು ಅದು ವಿಶ್ವದಲ್ಲಿಯೇ ವೈದಿಕ ಸಾಹಿತ್ಯವನ್ನು ಪ್ರಕಟಿಸುವ ಅತಿ ದೊಡ್ಡ ಪ್ರಕಾಶನ ಸಂಸ್ಥೆಯಾಗಿದೆ. ತಮ್ಮ ಪುಸ್ತಕಗಳು ವಿಶ್ವದ ಎಲ್ಲ ಭಾಷೆಗಳಲ್ಲಿಯೂ ಭಾಷಾಂತರಗೊಳ್ಳಬೇಕೆಂದು ಶ್ರೀಲ ಪ್ರಭುಪಾದರು ಆಶಿಸಿದ್ದರು. ಈಗ ಅವು 80 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯ.

ಕೃಷ್ಣಪ್ರಜ್ಞೆ ಆಂದೋಲನವು ಶ್ರೀಲ ಪ್ರಭುಪಾದರ ಪುಸ್ತಕಗಳಲ್ಲಿ ಕಾಣುವ ನಿರ್ಣಾಯಕ ಸತ್ಯದ ಮೇಲೆ ಆಧಾರಿತವಾಗಿದೆ. ವೈದಿಕ ಸಾಹಿತ್ಯದ ಸಾರವನ್ನು ಒಳಗೊಂಡಿರುವ ಮೂರು ಪ್ರಮುಖ ಗ್ರಂಥಗಳೆಂದರೆ ಭಗವದ್ಗೀತಾ ಯಥಾ ರೂಪ, ಶ್ರೀಮದ್ ಭಾಗವತ ಹಾಗೂ ಶ್ರೀ ಚೈತನ್ಯ ಚರಿತಾಮೃತ.

ಶ್ರೀಲ ಪ್ರಭುಪಾದರು 108 ಉಷನಿಷತ್‌ಗಳಲ್ಲಿ ಅತ್ಯಂತ ಪ್ರಮುಖವಾದ ಶ್ರೀ ಈಶೋಪನಿಷತ್ ಕುರಿತಂತೆ ಕೂಡ ವ್ಯಾಖ್ಯಾನವನ್ನು ಬರೆದಿದ್ದಾರೆ. ಶ್ರೀಲ ರೂಪ ಗೋಸ್ವಾಮಿ ಅವರ ಭಕ್ತಿ ರಸಾಮೃತ ಸಿಂಧುವಿನ ಅಧ್ಯಯನದ ಒಂದು ಸಂಗ್ರಹ ರೂಪವನ್ನು ಅವರು ಬರೆದರು. ಅಲ್ಲದೆ, ಕೃಷ್ಣಪ್ರಜ್ಞೆ ಆರಂಭಿಕರಿಗೆ ಮಾರ್ಗದರ್ಶನ ನೀಡಲು ಶ್ರೀಲ ರೂಪ ಗೋಸ್ವಾಮಿ ಅವರು ಬರೆದ 11 ಶ್ಲೋಕಗಳ ಉಪದೇಶಾಮೃತಕ್ಕೆ ಭಾವಾರ್ಥವನ್ನೂ ಶ್ರೀಲ ಪ್ರಭುಪಾದರು ಬರೆದರು.

ಇತರ ಲೋಕಗಳಿಗೆ ಸುಗಮ ಪ್ರಯಾಣ, ಭಗವತ್ ಸಂದೇಶ, ವೇದಾಂತ ದರ್ಶನ ದಂತಹ ಇತರ ಅನೇಕ ಸಣ್ಣ ಪುಸ್ತಕಗಳನ್ನೂ ಶ್ರೀಲ ಪ್ರಭುಪಾದರು ಬರೆದರು. ಆತ್ಮ ಸಾಕ್ಷಾತ್ಕಾರ ವಿಜ್ಞಾನ, ಆತ್ಮಾನ್ವೇಷಣೆಯ ಪಯಣ, ಜ್ಞಾನ ಯೋಗ-ದಿವ್ಯ ಜ್ಞಾನದ ಅನ್ವೇಷಣೆ, ವಿವೇಕದಿಂದ ವಿರಕ್ತಿ ಮುಂತಾದವು ಅವರ ಲೇಖನಗಳು, ಉಪನ್ಯಾಸ ಮತ್ತು ಸಂವಾದಗಳ ಸಂಗ್ರಹ ಆಧಾರಿತ ಪುಸ್ತಕಗಳು. ಶ್ರೀಲ ಪ್ರಭುಪಾದರ ಸಂವಾದಗಳಿಂದ ಹೊರಹೊಮ್ಮಿದ ಇತರ ಆಸಕ್ತಿದಾಯಕ ಸಂಗ್ರಹಗಳೆಂದರೆ ಪರಿಪೂರ್ಣ ಪ್ರಶ್ನೆ ಪರಿಪೂರ್ಣ ಉತ್ತರ, ಸನಾತನ ಧರ್ಮ ಎಕೆ? ಏನು?, ಭಕ್ತಿ ತತ್ತ್ವ ಮೀಮಾಂಸೆ, ಜೀವದ ಮೂಲ ಜೀವ, ಮುಂತಾದವು.

srila prabhupada booksಭಗವದ್ಗೀತೆಯನ್ನು ಕುರಿತ ಶ್ರೀಲ ಪ್ರಭುಪಾದರ ಉಪನ್ಯಾಸಗಳ ಆಧಾರದ ಮೇಲೆ ಬಿಬಿಟಿಯು ಜನನ ಮರಣಗಳಾಚೆ, ರಾಜ ವಿದ್ಯಾ, ಪರಿಪೂರ್ಣತೆಯ ಪಥ, ಯೋಗದ ಪರಿಪೂರ್ಣತೆ, ಶ್ರೇಷ್ಠತಮ ಯೋಗ ಪದ್ಧತಿ, ಕೃಷ್ಣಪ್ರಜ್ಞೆ ಅನುಪಮ ಕೊಡುಗೆ, ಕೃಷ್ಣಪ್ರಜ್ಞೆಗೆ ಆರೋಹಣ, ಕೃಷ್ಣನನ್ನು ಅರಸುತ್ತಾ . . . ಮುಂತಾದ ಪುಸ್ತಕಗಳನ್ನು ಪ್ರಕಟಿಸಿದೆ.

ಶ್ರೀಲ ಪ್ರಭುಪಾದರು ಭಾಗವತವನ್ನು ಕುರಿತಂತೆ ನೀಡಿದ ಉಪನ್ಯಾಸಗಳನ್ನು ಆಧರಿಸಿ ಬಿಬಿಟಿಯು ಸಾಂಖ್ಯಯೋಗ, ಕಾವನಾರು ಕೃಷ್ಣನಲ್ಲದೆ, ಪ್ರಹ್ಲಾದ ಮಹಾರಾಜನ ಪಾರಮಾರ್ಥಿಕ ಬೋಧನೆಗಳು, ಹರಿನಾಮವ ನೆನೆದರೆ, ಧರ್ಮ ಏಕೆ? ಏನು? ಮುಂತಾದ ಪುಸ್ತಕಗಳನ್ನು ಪ್ರಕಟಿಸಿದೆ.

 

ಹಲವು ವರ್ಷಗಳಿಂದ ಅವರ ಪುಸ್ತಕಗಳನ್ನು ಓದಿರುವ ನೂರಾರು ವಿದ್ವಾಂಸರು ಮಾನವಿಯತೆಗೆ ಅವರ ಬೋಧನೆ ಸಲ್ಲಿಸಿರುವ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಶ್ರೀಲ ಪ್ರಭುಪಾದರ ಪುಸ್ತಕಗಳ ಬಗ್ಗೆ ಗಣ್ಯರ ಪ್ರಶಂಸೆ