1896
ಕೋಲ್ಕತ್ತದಲ್ಲಿ ಶ್ರೀಲ ಪ್ರಭುಪಾದರ ಜನನ. ಗೌಡೀಯ ವೈಷ್ಣವ ತತ್ತ್ವವನ್ನು ಕುರಿತ ಮೊದಲ ಪುಸ್ತಕವನ್ನು ಶ್ರೀಲ ಭಕ್ತಿವಿನೋದ ಠಾಕುರ ಅವರು ಪಶ್ಚಿಮಕ್ಕೆ ಕಳುಹಿಸುತ್ತಾರೆ.
1901
ಶ್ರೀಲ ಪ್ರಭುಪಾದರಿಂದ ಗೆಳೆಯರ ಜೊತೆ ರಥ ಯಾತ್ರೆ ಉತ್ಸವದ ಆರಂಭ.
1902
ಶ್ರೀಲ ಪ್ರಭುಪಾದರಿಂದ ರಾಧಾ-ಕೃಷ್ಣ ಆರಾಧನೆ ಆರಂಭ.
1916
ಸ್ಕಾಟಿಶ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿದ್ಯಾರ್ಥಿ.
1918
ಗೃಹಸ್ಥ ಆಶ್ರಮ ಪ್ರವೇಶ
1921
ಬೋಸ್ ಪ್ರಯೋಗಾಲಯದಲ್ಲಿ ಸಹಾಯಕನಾಗಿ ನೇಮಕ.
ಗಾಂಧೀ ಆಂದೋಲನ.
1922
ಗುರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರೊಂದಿಗೆ ಭೇಟಿ. ಪಶ್ಚಿಮದಲ್ಲಿ, ಇಂಗ್ಲಿಶ್‌ನಲ್ಲಿ ಬೋಧಿಸಲು ಗುರುಗಳಿಂದ ಆದೇಶ.
1932
ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರಿಂದ ದೀಕ್ಷೆ.
1935
ಪುಸ್ತಕ ಪ್ರಕಟಣೆ ಮತ್ತು ಮಂದಿರ ನಿರ್ಮಾಣ ಕುರಿತು ಆಧ್ಯಾತ್ಮಿಕ ಗುರುಗಳಿಂದ ಆದೇಶ.
1944
ಬ್ಯಾಕ್ ಟು ಗಾಡ್‌ಹೆಡ್ ಪತ್ರಿಕೆ ಆರಂಭ.
1953
ಝಾನ್ಸಿಯಲ್ಲಿ ಲೀಗ್ ಆಫ್ ಡಿವೋಟಿಸ್ ಪ್ರಾರಂಭ.
1954
ವಾನಪ್ರಸ್ಥ ಜೀವನ ಪದ್ಧತಿಯನ್ನು ಸ್ವೀಕರಿಸಿ ಕೌಟುಂಬಿಕ ಜೀವನದಿಂದ ನಿವೃತ್ತಿ.
1959
ಸಂನ್ಯಾಸಾಶ್ರಮ ಸ್ವೀಕಾರ.
1962
ಶ್ರೀಮದ್ ಭಾಗವತದ ಮೊದಲ ಸ್ಕಂಧ ಪ್ರಕಟಣೆ.
1965
ಗುರುಗಳ ಆದೇಶ ಪಾಲಿಸಲು ಅಮೆರಿಕಕ್ಕೆ ಪಯಣ.
1966
ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞೆ ಸಂಘದ ಸ್ಥಾಪನೆ.
1972
ತಮ್ಮ ಪುಸ್ತಕಗಳ ಪ್ರಕಟಣೆಗಾಗಿ ಭಕ್ತಿವೇದಾಂತ ಬುಕ್ ಟ್ರಸ್ಟ್ ಸ್ಥಾಪನೆ.
1977
ಈ ಲೌಕಿಕ ಲೋಕದಿಂದ ತಿರೋಭಾವ.
ಆದರೆ ಅವರು ಇಂದಿಗೂ, ಎಂದೆಂದಿಗೂ ನಮ್ಮ ‘ಹಿತಾಕಾಂಕ್ಷಿ’ಗಳಾಗಿ ನಮಗೆ ಮಾರ್ಗದರ್ಶನ ನೀಡುತ್ತಾರೆ.
ಶ್ರೀಲ ಪ್ರಭುಪಾದರಿಗೆ ಜಯವಾಗಲಿ!