ಮಂದಿರಕ್ಕೆ ಬರುವ ಯಾತ್ರಿಗಳಿಗೆ ಇಸ್ಕಾನ್ ಬೆಂಗಳೂರು ಉಚಿತವಾಗಿ ಮಧ್ಯಾಹ್ನದ ಭೋಜನ ಪ್ರಸಾದವನ್ನು ನೀಡುತ್ತಿದೆ. ಪ್ರಸಾದವನ್ನು ಪ್ರತಿ ದಿನ ಬೆಳಗ್ಗೆ ೧೧.೩೦ರಿಂದ ಮಧ್ಯಾಹ್ನ ೨.೦೦ ಗಂಟೆವರೆಗೆ ಕೊಡಲಾಗುತ್ತಿದೆ. ಪ್ರಮುಖ ಕಾರ್ಯಕ್ರಮಗಳಲ್ಲಿ ಪ್ರಸಾದ ವಿತರಣೆಯೂ ಒಂದು ಎಂದು ಇಸ್ಕಾನ್ ಸಂಸ್ಥಾಪನಾಚಾರ್ಯರಾದ ಶ್ರೀಲ ಪ್ರಭುಪಾದರು ಜಗತ್ತಿನಾದ್ಯಂತ ಇಸ್ಕಾನ್ ಮಂದಿರಗಳಲ್ಲಿ ಅದನ್ನು ಆರಂಭಿಸಿದರು. ಅವರ ಹೆಜ್ಜೆಗಳನ್ನು ಅನುಸರಿಸಿ ಇಸ್ಕಾನ್ ಬೆಂಗಳೂರು ಪ್ರಸಾದ ವಿತರಣೆಯನ್ನು ಕೈಗೊಂಡಿದೆ. ಭಗವಂತನಿಗೆ ಅರ್ಪಿಸಿದ ನೈವೇದ್ಯಕ್ಕೆ ವಿಶೇಷವಾದ ಆಧ್ಯಾತ್ಮಿಕ ವೈಶಿಷ್ಟ್ಯವಿದೆ ಮತ್ತು ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಕೊಂಡಾಡಲಾಗಿದೆ.

ಪ್ರಸ್ತುತದಲ್ಲಿ ಮಂದಿರದ ಅನ್ನಕೂಟ ಉಪಾಹಾರ ಕೇಂದ್ರ ಇರುವ ಸ್ಥಳದಲ್ಲಿಯೇ ಅನ್ನದಾನ ಮಾಡಲಾಗುತ್ತಿದೆ. ಅನ್ನಕೂಟವನ್ನು ಮಧ್ಯಾಹ್ನದ ವೇಳೆ ಮುಚ್ಚುವುದರಿಂದ ಇದು ಸಾಧ್ಯವಾಗಿದೆ. ಅನ್ನಕೂಟ ಭವನದಲ್ಲಿ ಕೇವಲ ೩೦೦ ಜನರಿಗೆ ಮಾತ್ರ ಆಸನ ವ್ಯವಸ್ಥೆ ಇರುವುದರಿಂದ ಮತ್ತು ದಿನೇ ದಿನೇ ಹೆಚ್ಚುತ್ತಿರುವ ಜನರ ಭೇಟಿಯಿಂದಾಗಿ ಅಲ್ಲಿ ಸ್ಥಳಾಭಾವ ಉಂಟಾಗುತ್ತಿದೆ. ಆದುದರಿಂದ ಸಾವಿರಾರು ಯಾತ್ರಿಗಳಿಗೆ ಪ್ರಸಾದವನ್ನು ವಿತರಿಸಲು ಬಯಲು ರಂಗ ಮಂದಿರದ ಮೇಲೆ ಹೊಸ ಅನ್ನದಾನ ಭವನವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅನೇಕ ಭಕ್ತರು ಬೆಂಗಳೂರಿನ ಹೊರಗಿನಿಂದಲೂ ಮಂದಿರಕ್ಕೆ ಭೇಟಿ ನೀಡುತ್ತಾರೆ. ಮುಖ್ಯವಾಗಿ ಈ ಯಾತ್ರಿಗಳು ಉಚಿತ ಅನ್ನದಾನ ಸೌಲಭ್ಯವನ್ನು ತುಂಬ ಶ್ಲಾಘಿಸುತ್ತಾರೆ.

ಈ ಧಾರ್ಮಿಕ ಕಾರ್ಯದ ಯೋಜನೆಗೆ ನಿಮ್ಮ ಉದಾರವಾದ ನೆರವಿಗೆ ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ನಿಮ್ಮ ಹೃದಯಪೂರ್ವಕ ಬೆಂಬಲದಿಂದ ನಾವು ಸೇವೆಯಲ್ಲಿ ಇನ್ನೂ ಹೆಚ್ಚು ಮೇಲೆ ಏರಲು ಮತ್ತು ಯಶಸ್ವಿಯಾಗಲು ನೆರವಾಗುತ್ತದೆ.