.

1.  ಸಮಾಜದಲ್ಲಿ ವ್ಯವಸ್ಥಿತವಾಗಿ ಆಧ್ಯಾತ್ಮಿಕ ಜ್ಞಾನವನ್ನು ಬಿತ್ತುವುದು, ಮತ್ತು  ಮೌಲ್ಯಗಳ ಅಸಮತೋಲನವನ್ನು ನಿವಾರಿಸಲು ಹಾಗೂ ಜಾಗತಿಕವಾಗಿ ನೈಜ ಏಕತೆ, ಸೌಹಾರ್ದಗಳನ್ನು ಸಾಧಿಸುವ ಸಲುವಾಗಿ ಆಧ್ಯಾತ್ಮಿಕ ಜೀವನದ ಕಾರ್‍ಯವಿಧಾನಗಳ ಬಗ್ಗೆ ಎಲ್ಲ ಜನರನ್ನೂ ತರಬೇತುಗೊಳಿಸುವುದು.

2.  ಭಗವದ್ಗೀತೆ ಮತ್ತು ಭಾಗವತಗಳಲ್ಲಿ ಸಾರಿರುವಂತೆ ಕೃಷ್ಣಪ್ರಜ್ಞೆಯನ್ನು ಪ್ರಚಾರ ಮಾಡುವುದು.

3.  ಸಂಘದ ಪ್ರತಿಯೊಬ್ಬ ಸದಸ್ಯರನ್ನೂ ಪರಸ್ಪರ ಹಾಗೂ ಶ್ರೀಕೃಷ್ಣನಿಗೆ ಹತ್ತಿರವಾಗಿಸುವುದು; ಆ ಮೂಲಕ ಸಂಘದಲ್ಲಿ ಮತ್ತು ಸಮಾಜದಲ್ಲಿ – ಪ್ರತಿಯೊಂದು ಆತ್ಮವೂ ಪರಮ ಪ್ರಭುವಿನ (ಕೃಷ್ಣನ) ಅಂಶ ಎಂಬ ಅರಿವನ್ನು ಮೂಡಿಸುವುದು.

4.  ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆಗಳಲ್ಲಿ ಹೇಳಿರುವ ಹಾಗೆ ಸಂಕೀರ್ತನ ಚಳುವಳಿಯನ್ನು ಬೋಧಿಸುವುದು ಮತ್ತು ಪ್ರೋತ್ಸಾಹಿಸುವುದು.

5.  ಸಂಘದ ಸದಸ್ಯರಿಗಾಗಿ ಮತ್ತು ಸಮಾಜದ ಜನರಿಗಾಗಿ ಶ್ರೀಕೃಷ್ಣನ ಪಾರಮಾರ್ಥಿಕ ಲೀಲೆಗಳನ್ನು ನಿರೂಪಿಸುವ ಕಟ್ಟಡಗಳನ್ನು ನಿರ್ಮಿಸುವುದು.

6.  ಸರಳ ಹಾಗೂ ಸಹಜ ಜೀವನ ವಿಧಾನವನ್ನು ಬೋಧಿಸುವ ಸಲುವಾಗಿ ಸದಸ್ಯರನ್ನು ಒಟ್ಟಾಗಿಸುವುದು.

7.  ಮೇಲೆ ಹೇಳಿದ ಉದ್ದೇಶಗಳ ಈಡೇರಿಕೆಗಾಗಿ ಕಾಲಕಾಲಕ್ಕೆ ಪತ್ರಿಕೆಗಳು, ಪುಸ್ತಕಗಳು ಮತ್ತಿತರ ಲೇಖನಗಳ ಪ್ರಕಟಣೆ ಮತ್ತು ವಿತರಣೆ.