ಗೋವರ್ಧನ ಪೂಜೆ 2018
ಇಸ್ಕಾನ್ ಬೆಂಗಳೂರು ನವೆಂಬರ್ 8, 2018 ರಂದು ಗೋವರ್ಧನ ಪೂಜೆಯನ್ನು ಸಂಭ್ರಮದಿಂದ ಆಚರಿಸಿತು. ಪ್ರಭು ಶ್ರೀ ಕೃಷ್ಣನು ಐದು ಸಾವಿರ ವರ್ಷಗಳ ಹಿಂದೆ ಗೋವರ್ಧನ ಬೆಟ್ಟವನ್ನು ಎತ್ತಿ ಹಿಡಿದು ವ್ರಜ ನಿವಾಸಿಗಳನ್ನು ಭಯಂಕರ ಮಳೆಯಿಂದ ರಕ್ಷಿಸಿದ್ದನು. ಶ್ರೀ ಕೃಷ್ಣನ ಈ ಲೀಲೆಯನ್ನು ಸ್ಮರಿಸಲೆಂದೇ ಪ್ರತಿ ವರ್ಷ ಕಾರ್ತೀಕ ಕೃಷ್ಣ ಪಾಡ್ಯದ ದಿನ ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ.
ಇಂದ್ರನಿಗೆ ಮೀಸಲಿಟ್ಟಿದ್ದ ನೈವೇದ್ಯವನ್ನು ಕೃಷ್ಣನು ಗೋವರ್ಧನ ಗಿರಿಗೆ ಅರ್ಪಿಸಲು ಆದೇಶಿಸಿದನು. ಅದೇ ಪದ್ಧತಿಯನ್ನು ಅನುಸರಿಸಿ ಇಂದಿಗೂ ಅನ್ನಕೂಟವನ್ನು ದೇವರಿಗೆ ಅರ್ಪಿಸಿ ನೆರೆದ ಭಕ್ತ ಸಮೂಹಕ್ಕೆ ಹಂಚಲಾಗುತ್ತಿದೆ. ಬಗೆ ಬಗೆಯ ತಿಂಡಿ ತಿನಿಸುಗಳಿಂದ ಮಾಡಿದ ನೈವೇದ್ಯದ ರಾಶಿಯೇ ಅನ್ನಕೂಟ.
ಇಸ್ಕಾನ್ ಬೆಂಗಳೂರಿನಲ್ಲಿ ಗೋವರ್ಧನ ಪೂಜೆಯಂದು ಆಕರ್ಷಣೆಯ ಬಿಂದು ಎಂದರೆ ಸಾವಿರಕ್ಕಿಂತ ಹೆಚ್ಚು ಕಿಲೋಗಳ ಸಸ್ಯಾಹಾರಿ ಕೇಕ್‌ನಿಂದ ಮಾಡಿದ ಅನ್ನಕೂಟ. ಜಾಮೂನ್, ರಸಗುಲ್ಲ, ಬರ್ಫಿ, ಲಡ್ಡು, ಪೇಡ, ಚಕ್ಲಿ, ನಿಪ್ಪಟ್ಟು, ಕೋಡುಬಳೆ, ಶ್ರೀಖಂಡ್ ಇತ್ಯಾದಿ ತಿನಿಸುಗಳೂ ಅನ್ನಕೂಟದಲ್ಲಿ ಈ ಬಾರಿ ಇದ್ದವು.
ಗೋವರ್ಧನ ಗಿರಿ ಪೂಜೆಯೊಂದಿಗೆ ಗೋವುಗಳ ಮತ್ತು ಗೋಪಾಲಕ ಶ್ರೀ ಕೃಷ್ಣನ ಪೂಜೆ ಕೂಡ ಆಕರ್ಷಕ. ಹಸುಗಳನ್ನು ಅಂದವಾಗಿ ಸಿಂಗರಿಸಿ ಆರತಿ ಬೆಳಗಲಾಯಿತು. ತನ್ನ ಕಿರು ಬೆರಳಿನಲ್ಲಿ ದೊಡ್ಡ ಗಿರಿಯನ್ನೇ ಎತ್ತಿ ಹಿಡಿದ ಕೃಷ್ಣನ ಲೀಲೆಯನ್ನು ಕುರಿತಂತೆ ಸಣ್ಣ ಉಪನ್ಯಾಸ ಮಾಡಲಾಯಿತು. ಆರತಿಯ ಅನಂತರ ಎಲ್ಲರೂ ಗೋವರ್ಧನ ಆಕೃತಿಯ ಅನ್ನಕೂಟದ ಪ್ರದಕ್ಷಿಣೆ ಮಾಡಿ ನಮಸ್ಕರಿದರು. ಕೊನೆಗೆ ಪ್ರಸಾದ ವಿನಿಯೋಗವಾಯಿತು.
ಹಂಪಿಯಲ್ಲಿ ಪಾನಿಹಾಟಿ ಉತ್ಸವ
ರಾಮಾಯಣ ಸಂದೇಶ ಮಹತ್ತ್ವವಾದುದು
ಅಕ್ಷಯ ಪಾತ್ರೆ ವರದಿ…
ದುಬೈನಲ್ಲಿ ಶ್ರೀ ನರಸಿಂಹ ಜಯಂತಿ
ಅಕ್ಷಯ ಪಾತ್ರೆ ವರದಿ…