sri vaman jayanthi

ದೈತ್ಯ ಕುಟುಂಬದಲ್ಲಿ ಜನಿಸಿದ ಶ್ರೇಷ್ಠ ಭಕ್ತ ಬಲಿ ಮಹಾರಾಜನನ್ನು ಮುಕ್ತಗೊಳಿಸಲು ದೇವೋತ್ತಮನು ವಾಮನ ರೂಪದಲ್ಲಿ ಕಶ್ಯಪ ಮತ್ತು ಅದಿತಿಯ ಪುತ್ರನಾಗಿ ಆವಿರ್ಭವಿಸಿದನು.

ಶ್ರೀ ಜಯದೇವ ಗೋಸ್ವಾಮಿ ಅವರು ಹಾಡುತ್ತಾರೆ :

ಲಯಸಿ ವಿಕ್ರಮಾನೇ ಬಲಿಂ ಅದ್ಭುತ ವಾಮನ
ಪದ ನಖ ನೀರ ಜನಿತ ಜನ ಪವನ
ಕೇಶವ ಧೃತ ವಾಮನ ರೂಪ ಜಯ ಜಗದೀಶ ಹರೇ

“ಓ, ಕೇಶವ! ಓ ಜಗದ ದೇವ! ಓ ವಾಮನ ಬ್ರಾಹ್ಮಣ ರೂಪ ಹೊಂದಿದ್ದ ಶ್ರೀ ಹರಿಯೇ! ನಿನಗೆ ಜಯವಾಗಲಿ! ಓ ಅದ್ಭುತ ವಾಮನ, ನಿನ್ನ ಸುದೃಢ ಅಸಾಧಾರಣ ಹೆಜ್ಜೆಗಳಿಂದ ನೀನು ರಾಜಾ ಬಲಿಯನ್ನು ವಂಚಿಸುವೆ; ಮತ್ತು ನಿನ್ನ ಚರಣ ಕಮಲದ ಉಗುರಿನಿಂದ ಹೊರಹೊಮ್ಮುವ ಗಂಗಾ ಜಲದಿಂದ ನೀನು ಈ ಲೋಕದಲ್ಲಿ ಎಲ್ಲ ಜೀವಿಗಳನ್ನು ಮುಕ್ತಗೊಳಿಸುವೆ.”

ಇಸ್ಕಾನ್ ಬೆಂಗಳೂರಿನಲ್ಲಿ ವಾಮನ ದ್ವಾದಶಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀ ಕೃಷ್ಣನ ಅರ್ಚಾ ವಿಗ್ರಹವನ್ನು ಕಾವಿ ವಸ್ತ್ರ, ಕೈಯಲ್ಲಿ ದಂಡ, ಛತ್ರಿ ಮತ್ತು ಕಮಂಡಲುಗಳಿಂದ ವಾಮನದೇವನ ರೂಪದಲ್ಲಿ ಅಲಂಕರಿಸಲಾಗುತ್ತದೆ.