ಶ್ರೀ ವೈಕುಂಠ ಏಕಾದಶೀ, 10-01-2025

ಏಕಾದಶಿಯು ತಿಂಗಳಿನಲ್ಲಿ ಎರಡು ಬಾರಿ ಬರುತ್ತದೆ. ಆದರೆ ಮಾರ್ಗಶಿರ ಮಾಸದಲ್ಲಿ (ಡಿಸೆಂಬರ್-ಜನವರಿ), ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯು ವಿಶೇಷವಾಗಿದ್ದು ಅದನ್ನು ವೈಕುಂಠ ಏಕಾದಶೀ ಎಂದು ಕೊಂಡಾಡಲಾಗುತ್ತದೆ. ಇದು ದಕ್ಷಿಣ ಭಾರತದ ಪ್ರಮುಖ ಉತ್ಸವಗಳಲ್ಲಿ ಒಂದಾಗಿದ್ದು ಎಲ್ಲ ವಿಷ್ಣು ಮಂದಿರಗಳಲ್ಲಿ ಆಚರಿಸಲಾಗುತ್ತದೆ. ಶ್ರೀ ಸಂಪ್ರದಾಯದ ಶ್ರೇಷ್ಠ ಭಕ್ತರಲ್ಲಿ ಒಬ್ಬರಾದ...

ಶ್ರೀ ಕೃಷ್ಣ ಬಲರಾಮ ರಥ ಯಾತ್ರೆ 19-01-2025

ರಥ ಯಾತ್ರೆ, ರಥಗಳ ಉತ್ಸವವನ್ನು ಜಗನ್ನಾಥ ಪುರಿಯಲ್ಲಿ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರು ಜಗತ್ತಿನಾದ್ಯಂತ ಇಸ್ಕಾನ್ ಕೇಂದ್ರಗಳಲ್ಲಿ ರಥ ಯಾತ್ರೆಯನ್ನು ಆರಂಭಿಸಿದರು. ಅವರೆಂದರು, “ನೀವು ಈ ರಥ ಯಾತ್ರೆ ಉತ್ಸವಗಳಲ್ಲಿ ಪಾಲ್ಗೊಂಡು ಈ ರಥಗಳಲ್ಲಿ ಸಾಗುತ್ತಿರುವ ದೇವರನ್ನು ನೋಡಿದರೆ ನೀವು ನಿಮ್ಮ ಜೀವನದ...

ಶ್ರೀ ನಿತ್ಯಾನಂದ ತ್ರಯೋದಶಿ, 10-02-2025

ಶ್ರೀ ನಿತ್ಯಾನಂದ ಪ್ರಭುಗಳ ಆವಿರ್ಭಾವದ ಶುಭ ದಿನವೇ ನಿತ್ಯಾನಂದ ತ್ರಯೋದಶಿ. ಸಂಕೀರ್ತನ ಆಂದೋಲನವನ್ನು ಸ್ಥಾಪಿಸಲು ದೇವೋತ್ತಮ ಶ್ರೀ ಕೃಷ್ಣನು ನವದ್ವೀಪದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಅವತರಿಸಿದನು. ಈ ಧ್ಯೇಯದಲ್ಲಿ ನೆರವಾಗಲು ಶ್ರೀ ಬಲರಾಮನು ನಿತ್ಯಾನಂದ ಪ್ರಭುವಾಗಿ ಆವಿರ್ಭವಿಸಿದನು. ಶ್ರೀ ನಿತ್ಯಾನಂದ ಪ್ರಭುಗಳು ಬಂಗಾಳದಾದ್ಯಂತ ಭಗವಂತನ ಪವಿತ್ರ ನಾಮವನ್ನು...

ಶ್ರೀ ಗೌರ ಪೂರ್ಣಿಮೆ, 10-03-2025

ದೇವೋತ್ತಮ ಶ್ರೀ ಕೃಷ್ಣನು ಈ ಕಲಿಯುಗದ ಯುಗ-ಧರ್ಮವಾಗಿ ಸಂಕೀರ್ತನೆಯನ್ನು ಸ್ಥಾಪಿಸಲು ಶ್ರೀ ಚೈತನ್ಯರಾಗಿ ಆವಿರ್ಭವಿಸಿದನು. ಅವರು ಕ್ರಿಸ್ತ ಶಕ 1486, ಫಾಲ್ಗುಣ ಮಾಸ (ಫೆಬ್ರವರಿ-ಮಾರ್ಚ್) ಪೂರ್ಣಿಮೆಯಂದು ಶ್ರೀಧಾಮ ಮಾಯಾಪುರದಲ್ಲಿ ಅವತರಿಸಿದರು. ಅವರ ತಂದೆ ಶ್ರೀ ಜಗನ್ನಾಥ ಮಿಶ್ರ ಮತ್ತು ತಾಯಿ ಶ್ರೀಮತಿ ಶಚಿದೇವಿ. ಮನೆಯ ಆವರಣದ ಬೇವಿನ ಮರದ ಕೆಳಗೆ...

garuda panchami

ಗರುಡ ಪಂಚಮಿ, 9-8-2024

ಶ್ರೇಷ್ಠ ಭಕ್ತ ಮತ್ತು ಶ್ರೀ ವಿಷ್ಣುವಿನ ವಾಹಕನಾದ ಗರುಡನ ಜನ್ಮ ದಿನವನ್ನು ಕೊಂಡಾಡಲು ಗರುಡ ಪಂಚಮಿ ಉತ್ಸವವನ್ನು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಕೃಷ್ಣ ಪಕ್ಷ ಪಂಚಮಿಯನ್ನು ಗರುಡ ಪಂಚಮಿ ಎಂದು ಆಚರಿಸಲಾಗುತ್ತದೆ. ವಿನುತಾ ಮತ್ತು ಕಶ್ಯಪ ಮುನಿ ದಂಪತಿಯ ಪುತ್ರನಾದ ಗರುಡನು ಶಾಲ್ಮಲೀ ದ್ವೀಪ ಎಂಬ ಗ್ರಹದಲ್ಲಿ...

Jhulan Utsava

ಝೂಲನ್ ಉತ್ಸವ – ಆಗಸ್ಟ್ 16-19, 2024

ಶ್ರಾವಣ ಮಾಸದ (ಆಗಸ್ಟ್) ಏಕಾದಶಿಯಿಂದ ಪೌರ್ಣಮಿವರೆಗೆ ಐದು ದಿನಗಳ ಕಾಲ ಝೂಲನ್ ಉತ್ಸವವನ್ನು ಆಚರಿಸಲಾಗುವುದು. ಶ್ರೀ ಕೃಷ್ಣನು ತನ್ನ ಬಾಲ್ಯದ ಮಿತ್ರರಾದ ಗೋಪಾಲಕ ಬಾಲಕರು ಮತ್ತು ಗೋಪಿಯರೊಂದಿಗೆ ಮರದ ಕೆಳಗೆ ಉಯ್ಯಾಲೆ ತೂಗಿಕೊಂಡು ಆಡಿದ ಲೀಲೆಯನ್ನು ಕೊಂಡಾಡಲು ಝೂಲನ್ ಉತ್ಸವವನ್ನು ಆಚರಿಸಲಾಗುತ್ತದೆ. ಶ್ರೀ ರಾಧಾ ಕೃಷ್ಣಚಂದ್ರ ವಿಗ್ರಹಗಳನ್ನು...

ಶ್ರೀ ಬಲರಾಮ ಜಯಂತಿ, 19-08-2024

ಶ್ರೀ ಕೃಷ್ಣನ ಅಗ್ರಜ ಶ್ರೀ ಬಲರಾಮನು ಆವಿರ್ಭವಿಸಿದ ಶುಭ ದಿನವನ್ನು ಶ್ರಾವಣದ (ಆಗಸ್ಟ್) ಪೌರ್ಣಮಿಯಂದು ಆಚರಿಸಲಾಗುತ್ತದೆ. ಶ್ರೀ ಬಲರಾಮನು ರೋಹಿಣಿ ಮತ್ತು ವಸುದೇವರ ಪುತ್ರನಾಗಿ ಅವತರಿಸಿದ. ಅವನನ್ನು ಬಲದೇವ, ಸಂಕರ್ಷಣ ಎಂದೂ ಕರೆಯುತ್ತಾರೆ. ಆತ್ಮ ಸಾಕ್ಷಾತ್ಕಾರದ ಯಾತ್ರೆಯಲ್ಲಿನ ಎಲ್ಲ ಅಡೆತಡೆಗಳನ್ನು ದಾಟುವ ಶಕ್ತಿಯನ್ನು ಬಲರಾಮನು ನಮಗೆ ನೀಡುತ್ತಾನೆ....

sri-krishna-janmashtami

ಶ್ರೀ ಕೃಷ್ಣ ಜನ್ಮಾಷ್ಟಮಿ – 25-26 ಆಗಸ್ಟ್‌, 2024

ಶ್ರೀ ಕೃಷ್ಣ ಜನ್ಮಾಷ್ಟಮಿಯು ನಮ್ಮ ಮಂದಿರದ ಅತ್ಯಂತ ಪ್ರಮುಖವಾದ ಉತ್ಸವ. ಶ್ರೀ ಕೃಷ್ಣನ ದಿವ್ಯ ಆವಿರ್ಭಾವವನ್ನು ಇಡೀ ಲೋಕವೇ ಆಚರಿಸುತ್ತದೆ. ನಮ್ಮ ಮಂದಿರದಲ್ಲಿ ಜನ್ಮಾಷ್ಟಮಿ ಆಚರಣೆಗೆ ಸಾಕಷ್ಟು ಮೊದಲೇ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಮಂದಿರವನ್ನು ಹೂವು ಮತ್ತು ತೋರಣಗಳಿಂದ ಅಲಂಕರಿಸಲಾಗುತ್ತದೆ.  ತರಕಾರಿ, ಧಾನ್ಯ ಮತ್ತು ಹಣ್ಣುಗಳು ಅಡುಗೆ ಮನೆಗೆ...

ವ್ಯಾಸ ಪೂಜೆ, 8 ಸೆಪ್ಟೆಂಬರ್‌, 2023

ಇಸ್ಕಾನ್‌ನ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರ ಆವಿರ್ಭಾವ ದಿನವನ್ನು ವ್ಯಾಸ ಪೂಜೆಯಾಗಿ ಆಚರಿಸಲಾಗುತ್ತದೆ. ಶ್ರೀಲ ಪ್ರಭುಪಾದರು 1896 ರಲ್ಲಿ, ನಂದೋತ್ಸವದಂದು (ಜನ್ಮಾಷ್ಟಮಿಯ ಮರುದಿನ) ಜನಿಸಿದರು. ವೇದಗಳು ಮೂಲತಃ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಂದ ಹೊರಹೊಮ್ಮಿದವು. ಶ್ರೀ ಕೃಷ್ಣನು ವೈದಿಕ ಜ್ಞಾನವನ್ನು ವಿಶ್ವದ ಸೃಷ್ಟಿಕರ್ತ ಬ್ರಹ್ಮನಿಗೆ ನೀಡಿದನು. ಬ್ರಹ್ಮನು...

ಶ್ರೀ ವಾಮನ ಜಯಂತಿ – ಸೆಪ್ಟೆಂಬರ್ 15, 2024

ದೈತ್ಯ ಕುಟುಂಬದಲ್ಲಿ ಜನಿಸಿದ ಶ್ರೇಷ್ಠ ಭಕ್ತ ಬಲಿ ಮಹಾರಾಜನನ್ನು ಮುಕ್ತಗೊಳಿಸಲು ದೇವೋತ್ತಮನು ವಾಮನ ರೂಪದಲ್ಲಿ ಕಶ್ಯಪ ಮತ್ತು ಅದಿತಿಯ ಪುತ್ರನಾಗಿ ಆವಿರ್ಭವಿಸಿದನು. ಶ್ರೀ ಜಯದೇವ ಗೋಸ್ವಾಮಿ ಅವರು ಹಾಡುತ್ತಾರೆ : ಛಲಯಸಿ ವಿಕ್ರಮಾನೇ ಬಲಿಂ ಅದ್ಭುತ ವಾಮನ ಪದ ನಖ ನೀರ ಜನಿತ ಜನ ಪವನ ಕೇಶವ...

27ನೇ ವಾರ್ಷಿಕ ಬ್ರಹ್ಮೋತ್ಸವ – 21 ಏಪ್ರಿಲ್‌ ರಿಂದ 3 ಮೇ, 2024

ಹರೇ ಕೃಷ್ಣ ಗಿರಿಯ ಮೇಲೆ ಭಗವಂತನ ಅರ್ಚಾ ವಿಗ್ರಹಗಳ ಆವಿರ್ಭಾವದ ಸುಸ್ಮರಣೆಯೇ ಬ್ರಹ್ಮೋತ್ಸವ. ಪ್ರತಿ ವರ್ಷ ಚೈತ್ರ ಮಾಸದಲ್ಲಿ (ಏಪ್ರಿಲ್-ಮೇ) 12 ದಿನಗಳ ಕಾಲ ಬ್ರಹ್ಮೋತ್ಸವ ನಡೆಯುತ್ತದೆ. ನಮಗೆ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲು ದೇವೋತ್ತಮನು ಅರ್ಚಾ ವಿಗ್ರಹಗಳ ರೂಪದಲ್ಲಿ ಅವತರಿಸುತ್ತಾನೆ. ನಮ್ಮ ಲೌಕಿಕ ಪ್ರಜ್ಞೆಗೆ ಭಗವಂತನು ಅಲೌಕಿಕ....

lord hanuman

ಶ್ರೀ ಹನುಮಾನ್ ಜಯಂತಿ – ಏಪ್ರಿಲ್ 23, 2024

ಶ್ರೀ ರಾಮಚಂದ್ರನ ಶ್ರೇಷ್ಠ ಭಕ್ತ ಮತ್ತು ನಿತ್ಯ ಸೇವಕ ಶ್ರೀ ಹನುಮಂತನು ಆವಿರ್ಭವಿಸಿದ ಶುಭ ದಿನವನ್ನು ಶ್ರೀ ಹನುಮಾನ್ ಜಯಂತಿ ಎಂದು ಆಚರಿಸಲಾಗುತ್ತದೆ. ಭಾರತದಲ್ಲಿ ಹನುಮಂತನ ಸಾವಿರಾರು ಮಂದಿರಗಳಿವೆ. ತಮ್ಮ ಭಕ್ತಿಸೇವೆಯ ಪಥದಲ್ಲಿ ಅಡ್ಡಿಗಳನ್ನು ನಿವಾರಿಸಬೇಕೆಂದು ಪ್ರಾರ್ಥಿಸಿ ಭಕ್ತರು ಶ್ರೀ ಹನುಮಂತನನ್ನು ಆರಾಧಿಸುವರು. ನಮ್ಮ ಮಂದಿರದಲ್ಲಿ ಪ್ರಹ್ಲಾದ...

ಗೋವರ್ಧನ ಪೂಜೆ – 02-11-2024

ಇಂದ್ರನ ಕೋಪದಿಂದ ವೃಂದಾವನದ ಜನರನ್ನು ರಕ್ಷಿಸಲು ಶ್ರೀ ಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿದ ಲೀಲೆಯನ್ನು ಕೊಂಡಾಡಲು ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ (ಅಕ್ಟೋಬರ್-ನವೆಂಬರ್) ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ವೃಂದಾವನದ ಜನರು ಇಂದ್ರಯಜ್ಞಕ್ಕೆ ಸಿದ್ಧರಾಗುತ್ತಿದ್ದರು. ಅದನ್ನು ನೋಡಿದ ದೇವೋತ್ತಮ ಶ್ರೀ ಕೃಷ್ಣನು ಇಂದ್ರನನ್ನು ಪೂಜಿಸುವುದನ್ನು ಬಿಟ್ಟು ಅವರು ಗೋವರ್ಧನ...

ಶ್ರೀ ರಾಮನವಮಿ – ಏಪ್ರಿಲ್ 17, 2024

ಭಗವಾನ್ ಶ್ರೀ ರಾಮಚಂದ್ರನು ಆವಿರ್ಭವಿಸಿದ ಶುಭ ದಿನವೇ ಶ್ರೀ ರಾಮನವಮಿ. ಶ್ರೀ ರಾಮಚಂದ್ರನು ಚೈತ್ರ ಮಾಸ (ಮಾರ್ಚ್-ಏಪ್ರಿಲ್) ನವಮಿಯಂದು ಅವತರಿಸಿದನು. ಈ ಪವಿತ್ರ ದಿನವನ್ನು ಪ್ರತಿ ವರ್ಷ ಶ್ರೀ ರಾಮನವಮಿ ಎಂದು ಆಚರಿಸಲಾಗುತ್ತಿದೆ. ಶ್ರೀ ರಾಮಚಂದ್ರನು ಅಯೋಧ್ಯೆಯ ಮಹಾರಾಜ ದಶರಥನ ಪುತ್ರನಾಗಿ ಆವಿರ್ಭವಿಸಿದನು. ಅವರದು ಇಕ್ಷ್ವಾಕು ವಂಶ....

ದೀಪೋತ್ಸವ – ಅಕ್ಟೋಬರ್‌ 17, 2024 ರಿಂದ ನವೆಂಬರ್‌ 15, 2024

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೀಪಗಳ ಉತ್ಸವ – ದೀಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪ್ರಭುವಿನ ದಾಮೋದರ ಲೀಲೆಯನ್ನು ಸ್ಮರಿಸಲೆಂದೇ ಈ ಉತ್ಸವದ ಆಚರಣೆ. ಸಂಸ್ಕೃತದಲ್ಲಿ `ದಾಮ’ ಎಂದರೆ ಹಗ್ಗ ಮತ್ತು `ಉದರ’ ಎಂದರೆ ಹೊಟ್ಟೆ. ಬೆಣ್ಣೆ ಕಳ್ಳ ತುಂಟ ಬಾಲಕೃಷ್ಣನನ್ನು ಹಗ್ಗದಿಂದ ತಾಯಿ ಯಶೋದೆ ಕಟ್ಟಿಹಾಕಿದ ಕಾರಣ,...

ರಾಧಾಷ್ಟಮಿ – ಸೆಪ್ಟೆಂಬರ್ 11, 2024

ಭಾದ್ರಪದ (ಆಗಸ್ಟ್-ಸೆಪ್ಟೆಂಬರ್), ಶುಕ್ಲ ಅಷ್ಟಮಿಯಂದು ರಾಧಾಷ್ಟಮಿಯನ್ನು ಆಚರಿಸಲಾಗುತ್ತದೆ. ಭಕ್ತರಿಗೆ ಇದು ಒಂದು ಪ್ರಮುಖವಾದ ಉತ್ಸವ. ರಾಧಾ ರಾಣಿಯು ಇಡೀ ಜಗತ್ತಿನ ಮಾತೆ. ಈ ಶುಭ ದಿನದಂದು ಭಕ್ತರು ತಮಗೆ ಕೃಷ್ಣಭಕ್ತಿಯನ್ನು ಅನುಗ್ರಹಿಸಬೇಕೆಂದು ರಾಧಾ ರಾಣಿಯಲ್ಲಿ ಪ್ರಾರ್ಥಿಸುವರು. ಈ ಶುಭ ಸಂದರ್ಭದಲ್ಲಿ ಶ್ರೀ ರಾಧಾ ಕೃಷ್ಣಚಂದ್ರ ಹೊಸ ವಸ್ತ್ರಗಳಿಂದ...

ಶ್ರೀ ನರಸಿಂಹ ಜಯಂತಿ – 22-5-2024

ಶ್ರೀ ನರಸಿಂಹ ಜಯಂತಿಯು ದೇವೋತ್ತಮನು ಶ್ರೀ ನರಸಿಂಹನಾಗಿ ಆವಿರ್ಭವಿಸಿದ ದಿನ. ಶ್ರೇಷ್ಠ ಭಕ್ತ ಪ್ರಹ್ಲಾದನನ್ನು ಅವನ ಅಸುರ ತಂದೆ ಹಿರಣ್ಯಕಶಿಪುವಿನಿಂದ ರಕ್ಷಿಸಲು ದೇವೋತ್ತಮ ಶ್ರೀ ಕೃಷ್ಣನು ಅರ್ಧ ಸಿಂಹ ಮತ್ತು ಅರ್ಧ ಮಾನವ ರೂಪದಲ್ಲಿ ಅವತರಿಸಿದನು. ಯಾವುದೇ ಮಾನವ ಜೀವಿ, ದೇವತೆ ಅಥವಾ ಪ್ರಾಣಿಗಳಿಂದ ತನಗೆ ಸಾವು...

ಪಾನಿಹಾಟಿ ಚಿಡಾ ದಹಿ ಮಹೋತ್ಸವ : 20-6-2024

ಪಶ್ಚಿಮ ಬಂಗಾಳದಲ್ಲಿ ಗಂಗಾ ನದಿಯ ದಡದಲ್ಲಿ ಪಾನಿಹಾಟಿ ಗ್ರಾಮವಿದೆ. ಕೋಲ್ಕತ್ತಾಗೆ 10 ಮೈಲಿ ದೂದಲ್ಲಿರುವ ಈ ಗ್ರಾಮವು ನದಿ ಮಾರ್ಗವೇ ಪ್ರಮುಖ ಸಂಪರ್ಕ ಸಾಧನವಾಗಿದ್ದ ಕಾಲದಲ್ಲಿ ಮುಖ್ಯ ವ್ಯಾಪಾರ ಕೇಂದ್ರವಾಗಿತ್ತು. ಪೆನೇಟಿ ಎಂಬ ವಿಶೇಷ ಅಕ್ಕಿ ಮಾದರಿಯನ್ನು ಜೆಸ್ಸೂರಿನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಹುಶಃ ಆ ವ್ಯಾಪಾರ ಸಂಪರ್ಕದಿಂದ...