ಆಹಾರ ಸೇವನೆಯು ಬದುಕಿನ ಅಗತ್ಯಗಳಲ್ಲಿ ಒಂದು. ನಾವು ತಿನ್ನುವ ಆಹಾವು ನಮ್ಮ ಮೇಲೆ ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಪರಿಣಾಮ ಉಂಟುಮಾಡುತ್ತದೆ ಎಂಬ ವಾಸ್ತವಾಂಶವನ್ನು ಆಧುನಿಕ ವಿಜ್ಞಾನಿಗಳೂ ಒಪ್ಪುತ್ತಾರೆ. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ (ಗೀತೆ 9.27)

ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ |

ಯತ್ತಪಸ್ಯಸಿ ಕೌನ್ತೇಯ ತತ್ಕುರುಷ್ವ ಮದರ್ಪಣಮ್ ||27||

“ಕುಂತಿಯ ಮಗನಾದ ಅರ್ಜನನೇ, ನೀನು ಏನನ್ನೇ ಮಾಡು, ಏನನ್ನೇ ಸೇವಿಸು, ಏನನ್ನೇ ಅರ್ಪಿಸು ಅಥವಾ ಕೊಟ್ಟುಬಿಡು ಮತ್ತು ಯಾವುದೇ ತಪಸ್ಸನ್ನು ಮಾಡು ಅದನ್ನು ಕಾಣಿಕೆಯಾಗಿ ನನಗೆ ಅರ್ಪಿಸು.”

ದೇವೋತ್ತಮ ಪರಮ ಪುರುಷ ಕೃಷ್ಣನಿಗೆ ಅರ್ಪಿಸಿದ ಆಹಾರವೇ ಪ್ರಸಾದ. ದಯಾಮಯಿಯಾದ ಅವನು ನಮ್ಮ ಮೇಲೆ ಕೃಪೆಯಿಟ್ಟು ನೈವೇದ್ಯವನ್ನು ಸ್ವೀಕರಿಸುತ್ತಾನೆ. ಹಾಗೆ ಮಾಡುವುದರಿಂದ ಅವನು ಆಹಾರವನ್ನು ಪರಿಶುದ್ಧಗೊಳಿಸುತ್ತಾನೆ. ಪ್ರಸಾದವು ಕೃಷ್ಣನಿಗಿಂತ ಭಿನ್ನವಲ್ಲ ಮತ್ತು ಅದನ್ನು ಸೇವಿಸುವುದರಿಂದಲೇ ನಾವು ಕೃಷ್ಣನನ್ನು ಅರಿಯಬಹುದು. ಶಾಖಾಹಾರದ ಪರಿಪೂರ್ಣತೆ ಇದು. ಪ್ರಸಾದ ಸೇವನೆಯು ವ್ಯಕ್ತಿಯನ್ನು ಆಧ್ಯಾತ್ಮಿಕ ಸಾಕ್ಷಾತ್ಕಾರದ ಉನ್ನತ ಮಟ್ಟಕ್ಕೆ ಹೋಗಲು ಮುನ್ನಡೆಸುತ್ತದೆ. ಪ್ರಸಾದವನ್ನು ಹಂಚುವುದು ಒಂದು ಮುಖ್ಯವಾದ ಚಟುವಟಿಕೆಯಾಗಿದ್ದು, ಇದನ್ನು ಮಂದಿರದ ಅನೇಕ ಪ್ರಸಾದದ ಅಂಗಡಿಗಳಲ್ಲಿ ಕಾಣಬಹುದು.

ಪ್ರಸಾದ ತಯಾರಿಕೆಯಲ್ಲಿ ದೊಡ್ಡ ತಂಡವೇ ತೊಡಗಿದೆ. ಅಡುಗೆ ಮನೆ ಆವರಣದ ಶುಚಿಯನ್ನು ಕಾಪಾಡಲು ಮತ್ತೊಂದು ತಂಡವು ಅಡುಗೆ ತಂಡಕ್ಕೆ ನೆರವಾಗುತ್ತದೆ. ಹೀಗೆ ಶುಚಿಯಾದ ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸುವ ಅಡುಗೆ ಮನೆಯಲ್ಲಿ ತಯಾರಿಸುವ ಪ್ರಸಾದವನ್ನು ಭಗವಂತನಿಗೆ ಅರ್ಪಿಸಲಾಗುವುದು. ಅನಂತರ ಅದನ್ನು ಮಂದಿರಕ್ಕೆ ಭೇಟಿ ನೀಡುವ ಅಸಂಖ್ಯ ಜನರಿಗೆ ಪ್ರಸಾದವಾಗಿ ಹಂಚಲಾಗುವುದು.

ಮಂದಿರದ ಪಾಕಶಾಲೆಯಲ್ಲಿ ಗುಣಮಟ್ಟ ಮತ್ತು ಶುಚಿಗೆ ತುಂಬ ಮಹತ್ತ್ವ ನೀಡಲಾಗುವುದು. ಕ್ರಮಬದ್ಧವಾದ ಮತ್ತು ದಿಢೀರನೆ ನಡೆಸುವ ತಪಾಸಣೆಯು ಭಗವಂತನಿಗೆ ಅತ್ಯುತ್ತಮ ಗುಣಮಟ್ಟದ ಆಹಾರವನ್ನು ಅರ್ಪಿಸುವ ಭರವಸೆಯನ್ನು ನೀಡುತ್ತದೆ.

ಈ ಪ್ರಸಾದದ ಅಂಗಡಿಗಳ ಮೂಲಕ ಸಾತ್ವಿಕ ಪಾಕ ಕೌಶಲ್ಯವನ್ನು ಮಂದಿರವು ಬಿಂಬಿಸುತ್ತದೆ. ಕೇವಲ ಸಾತ್ವಿಕ ಶಾಖಾಹಾರ ಪದಾರ್ಥಗಳನ್ನು ಬಳಸಿ ವೈವಿಧ್ಯಮಯವಾದ, ಪೌಷ್ಟಿಕಾಂಶ ಉಳ್ಳ ಆಹಾರ ಪದಾರ್ಥಗಳನ್ನು ತಯಾರಿಸಬಹುದು ಎನ್ನುವುದನ್ನು ಅದು ತೋರಿಸುತ್ತದೆ. ಸಾಂಪ್ರದಾಯಿಕದಿಂದ ಆಧುನಿಕ ತಿನಿಸುಗಳವರೆಗೆ, ವೈವಿಧ್ಯಮಯವಾದ ರುಚಿಯಾದ ತಿನಿಸುಗಳು ಜನರಿಗೆ ಇಲ್ಲಿ ಲಭ್ಯ.

ಜನರು ಕೃಷ್ಣ ಪ್ರಸಾದವನ್ನು ಸೇವಿಸಲಿ ಎನ್ನುವುದೇ ಅಂತಿಮ ಉದ್ದೇಶ. ಅದು ಆಧ್ಯಾತ್ಮಿಕ ಜೀವನಕ್ಕೆ ಪುಷ್ಟಿ ನೀಡುತ್ತದೆ. ನಾವು ಅನೇಕ ಬಗೆಯ ತಿನಿಸುಗಳನ್ನು ನೀಡುತ್ತೇವೆ. ಜನರು ತಮಗಿಷ್ಟವಾದ ತಿನಿಸಿನಿಂದ ಆಕರ್ಷಿತರಾಗಬಹುದು. ಹೈಯರ್ ಟೇಸ್ಟ್ ಹೊಟೇಲುಗಳು ಅತ್ಯುತ್ತಮ ಭೋಜನ ಅನುಭವವನ್ನು ನೀಡುತ್ತವೆ. ಅದು ಭಾರತದ ಪುರಾತನ ಪಾಕ ವೈವಿಧ್ಯವನ್ನು ಆಧುನಿಕ ಅಭಿರುಚಿಗೆ ಪುನರುಜ್ಜೀವಗೊಳಿಸುತ್ತದೆ. ಅದು ವ್ಯಕ್ತಿಯನ್ನು ಪ್ರಾಚೀನ ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯ ಯಾತ್ರೆಗೆ ಕರೆದುಕೊಂಡು ಹೋಗುತ್ತದೆ. ಇವೆಲ್ಲವೂ ಅತ್ಯಂತ ಹಿತಕರವಾದ ಮತ್ತು ಸುಂದರವಾದ ಪರಿಸರದಲ್ಲಿ ನಿಮಗೆ ಲಭ್ಯ.

ಹೆಚ್ಚಿನ ವಿವರ ಅರಿಯಲು ಭೇಟಿ ಮಾಡಿ http://www.iskconhighertaste.com/