ಇಸ್ಕಾನ್ ಶ್ರೀ ರಾಧಾ ಕೃಷ್ಣ ಮಂದಿರವು ಬೆಂಗಳೂರಿನ ಉತ್ತರ ಭಾಗದಲ್ಲಿದೆ. ಇದು ವಿವಿಧ ಸಾರಿಗೆ ವಿಧಾನಗಳ ಮೂಲಕ ನಗರದ ಉಳಿದ ಭಾಗಕ್ಕೆ ಉತ್ತಮ ಸಂಪರ್ಕ ಹೊಂದಿದೆ. ನಿಮ್ಮ ಸ್ಥಳದಿಂದ ಇಸ್ಕಾನ್ ಮಂದಿರಕ್ಕೆ ಚಾಲನೆ ಮಾರ್ಗದರ್ಶನ ಪಡೆಯಲು ನಕ್ಷೆಯ ಪಕ್ಕದಲ್ಲಿರುವ ಚೌಕ (ಬಾಕ್ಸ್) ದಲ್ಲಿ ನಿಮ್ಮ ಸ್ಥಳವನ್ನು ಟೈಪು ಮಾಡಿ.

ವಿಮಾನ ನಿಲ್ದಾಣ :

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – 22 ಕಿ.ಮಿ.

ರೈಲು ನಿಲ್ದಾಣಗಳು :

ಬೆಂಗಳೂರು ಸಿಟಿ ರೈಲು ನಿಲ್ದಾಣ – 6.9 ಕಿ.ಮಿ.
ಯಶವಂತಪುರ ರೈಲು ನಿಲ್ದಾಣ – 2.2 ಕಿ.ಮಿ.

ಮೆಟ್ರೋ ನಿಲ್ದಾಣಗಳು :

ಮಂದಿರವು ಮಹಾಲಕ್ಷ್ಮಿ ಮತ್ತು ಸ್ಯಾಂಡಲ್ ಸೋಪ್ ಕಾರ್ಖಾನೆ ನಿಲ್ದಾಣಗಳಿಂದ 10 ನಿಮಿಷ ನಡಿಗೆಯ ದೂರದಲ್ಲಿದೆ.

 ಬಸ್‌ಗಳು :

ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) – 80, 80A, 80B, 80E, 80F, 80G, 252F.
ಸಿಟಿ ಮಾರುಕಟ್ಟೆಯಿಂದ – 77, 77E
ಶಿವಾಜಿನಗರದಿಂದ – 79E

ಮಹಾಲಕ್ಷ್ಮಿ ಲೇಔಟ್ ಪ್ರವೇಶ (ಎಂಟ್ರೆನ್ಸ್) ಬಸ್ ನಿಲ್ದಾಣದಲ್ಲಿ ಇಳಿಯಿರಿ. ಅಲ್ಲಿಂದ 10 ನಿಮಿಷ ನಡೆದರೆ ಇಸ್ಕಾನ್ ಮಂದಿರವನ್ನು ತಲಪಬಹುದು.