ಇಸ್ಕಾನ್ ಬೆಂಗಳೂರು ಹಳೆಯ ಚಿತ್ರಗಳು
ಬಿಡಿಎಯಿಂದ ಮಂಜೂರಾದ ಭೂಮಿ
ಇಸ್ಕಾನ್ ಬೆಂಗಳೂರು ಭೂಮಿ
ಬೆಟ್ಟದ ಮೇಲ್ಭಾಗದ ನೋಟ
ಇಸ್ಕಾನ್ ಬೆಂಗಳೂರು ನಿರ್ಮಾಣ ಕೆಲಸ
ತಳಪಾಯದ ಕೆಲಸ
ಇಸ್ಕಾನ್ ಬೆಂಗಳೂರು ಹಳೆಯ ಚಿತ್ರ
ಕಟ್ಟಡ ನಿಮಾ೯ಣ
ಇಸ್ಕಾನ್ ಬೆಂಗಳೂರು ನಿರ್ಮಾಣ ಕೆಲಸ
ಮುಖ್ಯ ಮಂದಿರಕ್ಕೆ ಮೆಟ್ಟಿಲು ದಾರಿ
temple construction
ಗಭ೯ ಗುಡಿಯ ಕಂಭಗಳ ಕೆತ್ತನೆಯಲ್ಲಿ ತೊಡಗಿರುವ ಕುಶಲಕರ್ಮಿಗಳು
ಇಸ್ಕಾನ್ ದೇವಾಲಯ ನಿರ್ಮಾಣ
ಕಟ್ಟಡ ನಿಮಾ೯ಣ
ಇಸ್ಕಾನ್ ಬೆಂಗಳೂರು ದೇವಸ್ಥಾನದ ಪಕ್ಷಿನೋಟ
ದೇವಾಲಯದ ಪಕ್ಷಿನೋಟ
ಇಸ್ಕಾನ್ ಬೆಂಗಳೂರು ದೇವಾಲಯ ನೋಟ
ದೇವಾಲಯದ ಹಗಲು ನೋಟ
ಇಸ್ಕಾನ್ ಬೆಂಗಳೂರು ದೇವಾಲಯದ ರಾತ್ರಿ ನೋಟ
ದೇವಾಲಯದ ಇರುಳು ನೋಟ
ಇಸ್ಕಾನ್ ಬೆಂಗಳೂರು ದೇವಾಲಯ ಉದ್ಘಾಟನೆ
ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ಶಂಕರ ದಯಾಳ ಶಮ೯

ದೇವಸ್ಥಾನದ ವಾಸ್ತುಶಿಲ್ಪ ಮತ್ತು ಇತಿಹಾಸ

1987 ರ ಸೆಪ್ಟೆಂಬರ್‌ನಲ್ಲಿ ‘ಇಸ್ಕಾನ್ ಬೆಂಗಳೂರು’ ನಗರದ ಒಂದು ಬಾಡಿಗೆ ಮನೆಯಲ್ಲಿ ಕೆಲವೇ ಮಂದಿ ಭಕ್ತರಿಂದ ಒಡಗೂಡಿ ಕಾರ್ಯನಿರ್ವಹಿಸುತ್ತಿತ್ತು. ದೇವಸ್ಥಾನದ ಅಧ್ಯಕ್ಷರಾದ ಶ್ರೀ ಮಧುಪಂಡಿತದಾಸ ಅವರ ನೇತೃತ್ವದಲ್ಲಿ ‘ಇಸ್ಕಾನ್ ಬೆಂಗಳೂರು’ ಏಳು ಎಕರೆಯ ಒಂದು ಗುಡ್ಡಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಅರ್ಜಿ ಸಲ್ಲಿಸಿತು. ಅದೊಂದು ಖರಾಬ್ ಭೂಮಿ ಎಂದು ಬಿಡಿಎ ಬಣ್ಣಿಸಿತು. ಅದೊಂದು ಬೃಹದಾಕಾರದ ಅಖಂಡ ಶಿಲೆಯ ಬೆಟ್ಟ. ಅದನ್ನು ನಿವೇಶನಗಳಾಗಿ ಪರಿವರ್ತಿಸಲು ಸಾಧ್ಯವಿರಲಿಲ್ಲ. ಬಿಡಿಎ ಈ ಭೂಮಿಯನ್ನು ರೂ. 11 ಲಕ್ಷ ಬೆಲೆಗೆ ಮಂಜೂರು ಮಾಡಿತು. 90 ದಿನಗಳಲ್ಲಿ ಹಣವನ್ನು ಕಟ್ಟಬೇಕಾಗಿತ್ತು. ಕೈಯಲ್ಲಿ ಬಿಡಿಗಾಸಿಲ್ಲ. ಭಕ್ತರ ತಂಡ ಕೆಲವು ದಾನಿಗಳ ಸಹಾಯದಿಂದ ಸ್ವಲ್ಪ ಹಣವನ್ನು, ಸಾಲದ ಮೂಲಕ ಉಳಿದದ್ದನ್ನು ಸಂಗ್ರಹಿಸಲು ಸಮರ್ಥವಾಯಿತು.

1988 ರ ಸೆಪ್ಟೆಂಬರ್‌ನಲ್ಲಿ  ಶ್ರೀ ಬಲರಾಮನ ಆವಿರ್ಭಾವದ ದಿನ ಕೃಷ್ಣ ಬಲರಾಮರ ಅರ್ಚಾವಿಗ್ರಹಗಳನ್ನು ಈ ಭೂಮಿಯಲ್ಲಿ ನಿರ್ಮಿಸಿದ್ದ ಒಂದು ತಾತ್ಕಾಲಿಕ ಷಡ್ಡಿಗೆ (ಬಿಡಾರ) ಸ್ಥಳಾಂತರಿಸಲಾಯಿತು.

ಪ್ರಾಥಮಿಕ ಪರಿಕಲ್ಪನೆ

ಹರೇಕೃಷ್ಣ ಗಿರಿಯ ಯೋಜನೆಯ ಸಮಗ್ರ ಚಿತ್ರವನ್ನು ಕಲ್ಪಿಸಿಕೊಂಡವರು ಶ್ರೀ ಮಧುಪಂಡಿತದಾಸ. ಅವರು ಐಐಟಿ (ಮುಂಬಯಿ)ಯಿಂದ ಅರ್ಹತೆ ಪಡೆದ ಸಿವಿಲ್ ಇಂಜಿನಿಯರ್. ಹೊರನೋಟದ ಆರಂಭಿಕ ಪರಿಕಲ್ಪನೆಯನ್ನು ರೂಪಿಸಿಕೊಂಡವರು ಶ್ರೀ ಜಗತ್ ಚಂದ್ರದಾಸ. ಅವರು ಐಐಟಿ (ಮುಂಬಯಿ)ಯಿಂದ ಬಂದ ಒಬ್ಬ ವಾಸ್ತುಶಿಲ್ಪ ಮತ್ತು ಪ್ರಾಡಕ್ಟ್ ಇಂಜಿನಿಯರ್. ಗಾಜು ಮತ್ತು ಗೋಪುರದ ಅದ್ವಿತೀಯ ಸಂಯೋಜನೆಯು ಆಧುನಿಕ ಮತ್ತು ಸಾಂಪ್ರದಾಯಿಕ ಅಂಶಗಳನ್ನು ಹದವಾಗಿ ಮೇಳೈಸಿತ್ತು. ಇಳಿಜಾರಾದ ಶಿಲಾವೃತ ಬೆಟ್ಟದ ಸ್ವರೂಪವನ್ನು ಪರಿಗಣಿಸಿ, ಈ ಅದ್ವಿತೀಯವಾದ ಪರಿಕಲ್ಪನೆಯನ್ನು ವಾಸ್ತುಶಿಲ್ಪದ ದೃಷ್ಟಿಯಿಂದ ಮತ್ತಷ್ಟು ವೃದ್ಧಿಸಿ ಪ್ರಸ್ತುತ ವಿನ್ಯಾಸಕ್ಕೆ ತಂದವರು ಶ್ರೀ ಮಧುಪಂಡಿತದಾಸ ಮತ್ತು ಭಕ್ತಿಲತಾದೇವಿ.

ಸಮಗ್ರ ನಿರ್ಮಾಣವನ್ನು ಇಸ್ಕಾನ್ ನಿರ್ಮಾಣ ಇಲಾಖೆಯು ಕೈಗೊಂಡಿತು. 1990 ರಿಂದ 1997 ರವರೆಗೆ 600 ಕುಶಲ ಕಲಾವಿದರು 10 ಮಿಲಿಯನ್ ಮಾನವ ಗಂಟೆಗಳಷ್ಟು ಸೇವೆ ಸಲ್ಲಿಸಿದರು. 32,000 ಘನಮೀಟರ್‌ನಷ್ಟು ಕಲ್ಲು, 131250 ಟನ್ ಸಿಮೆಂಟ್ ಮತ್ತು 1900 ಟನ್ ಕಬ್ಬಿಣವನ್ನು ಈ ದೇವಸ್ಥಾನದ ನಿರ್ಮಾಣದಲ್ಲಿ ಬಳಸಲಾಗಿದೆ.

ಗರ್ಭಗೃಹ

ಅರ್ಚಾವಿಗ್ರಹಗಳು: ಗರ್ಭಗೃಹದಲ್ಲಿರುವ ಅರ್ಚಾವಿಗ್ರಹಗಳು ಸುಮಾರು 90 ಅಡಿ ಎತ್ತರದ ಸಂಪೂರ್ಣವಾಗಿ ಶಿಲೆಗಳಿಂದ ನಿರ್ಮಿಸಿದ ಸ್ತಂಭದ ಮೇಲೆ ನಿಂತಿವೆ.

ಫೆರೊ ಸಿಮೆಂಟ್ ಬಳಸಿ ವಿಶೇಷ ತಂತ್ರಜ್ಞಾನದಿಂದ ಗೋಪುರಗಳನ್ನು ರಚಿಸಲಾಗಿದೆ. ಈ ತಂತ್ರಜ್ಞಾನವನ್ನು ದೇವಸ್ಥಾನಗಳಲ್ಲಿ ಬಳಸಿಕೊಂಡಿರುವುದು ಇದೇ ಮೊದಲ ಸಲ. ಮೂಲ ಸಂರಚನೆಯು ಕಬ್ಬಿಣದ ಚೌಕಟ್ಟು ಮತ್ತು ತಂತಿಯ ಜಾಲರಿ. ಅದರ ಮೇಲೆ ಆರು ಅಂಗುಲ ದಪ್ಪದ ಸಿಮೆಂಟ್ ಮತ್ತು ಕಾಂಕ್ರೀಟ್ ಲೇಪನ. ಇದು ಕಟ್ಟೋಣದ ರಚನೆ.

ಸುವರ್ಣಲೇಪಿತವಾದ ಕಲಶದ ಎತ್ತರ 36 ಅಡಿ ಮತ್ತು ತಳದ ಅಗಲ 18 ಅಡಿ. ನೆಲಮಟ್ಟದಿಂದ 150 ಅಡಿ ಎತ್ತರಕ್ಕೆ ಸರಪಳಿ ಮತ್ತು ರಾಟೆಯ ಸಹಾಯದಿಂದ ಏರಿಸಿ ಸ್ಥಾಪಿಸಲಾಯಿತು. ೧.೫ಟನ್ ತೂಕದ ಸುವರ್ಣಲೇಪಿತ ಕಲಶವನ್ನು ಗಾಜಿನ ಚಾವಣಿಯ ಚಾಚು ಭಾಗದ ಮೇಲೆ ಸಾಗಿಸಿ 150 ಅಡಿ ಎತ್ತರದಲ್ಲಿ ಸ್ಥಾಪಿಸುವುದನ್ನು ಪರಿಗಣಿಸಿದರೆ ಇದೊಂದು ಇಂಜಿನಿಯರಿಂಗ್ ಸಾಹಸವೇ ಸರಿ!

ಅರ್ಚಾವಿಗ್ರಹಗಳ ಪ್ರತಿಷ್ಠಾಪನೆ:

ಮೂಲ ದೇವಸ್ಥಾನದ ವಿನ್ಯಾಸ 1990 ರಲ್ಲಿ ರೂ. 10 ಕೋಟಿ ಅಂದಾಜು ವೆಚ್ಚದಲ್ಲಿ ಪ್ರಾರಂಭವಾಯಿತು. ಇದು ಇನ್ನೂ ಹೆಚ್ಚು  ಅದ್ವಿತೀಯವಾದ ವಾಸ್ತುಶಿಲ್ಪದ ಮಾದರಿಗೆ ಅವಕಾಶ ಮಾಡಿಕೊಟ್ಟಿತು. ಇದರ ವೆಚ್ಚ ರೂ. 32 ಕೋಟಿ. ಇಂದು ಈ ದೇವಸ್ಥಾನವು ಭವ್ಯ ಮತ್ತು ಸಾಂಪ್ರದಾಯಿಕ ಶೈಲಿಗಳ ಸಮ್ಮಿಲನ ಹಾಗೂ ದಿಟ್ಟ ಸೌಂದರ್ಯಪ್ರಜ್ಞೆಯನ್ನು ಪ್ರತಿನಿಧಿಸುತ್ತಿದೆ.

ಅರ್ಚಾ ಮೂರ್ತಿಗಳ ಪ್ರತಿಷ್ಠಾಪನೆಯ ಉತ್ಸವಗಳು 1997 ರ ಏಪ್ರಿಲ್ ತಿಂಗಳಿನಲ್ಲಿ ನೆರವೇರಿದವು. 45 ದಿನಗಳ ಕಾಲ ಅಖಂಡವಾದ ಯಜ್ಞಗಳನ್ನು ನಡೆಸಲಾಯಿತು. 1997 ರ ಮೇ 31 ರಂದು ರಾಷ್ಟ್ರಪತಿ ಡಾ. ಶಂಕರ್‌ದಯಾಳ್ ಶರ್ಮ ಅವರು ಶ್ರೀರಾಧಾಕೃಷ್ಣ ಚಂದ್ರ ದೇವಸ್ಥಾನ ಮತ್ತು ಶ್ರೀ ಚೈತನ್ಯ ಮಹಾಪ್ರಭು ಸಾಂಸ್ಕೃತಿಕ ಸಮುಚ್ಚಯವನ್ನು ಉದ್ಘಾಟಿಸಿದರು.

ಆ ಸಂದರ್ಭದಲ್ಲಿ ಡಾ. ಶಂಕರ್‌ದಯಾಳ್ ಶರ್ಮ ಅವರು ಹೀಗೆ ನುಡಿದರು: “ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ (ಇಸ್ಕಾನ್) ಸಂಸ್ಕೃತಿ ಸಂವರ್ಧನ ಕೇಂದ್ರವನ್ನು ಉದ್ಘಾಟಿಸುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅಪಾರವಾದ ಸಂತೋಷವಾಗಿದೆ. ಸಂಪ್ರದಾಯ ಮತ್ತು ಆಧುನಿಕತೆಯ ಹದಬೆರಕೆಯ ಈ ಅದ್ಭುತ ಸಮುಚ್ಚಯವು ಭಕ್ತಿ ಮತ್ತು ಸೇವೆಗೆ ಮುಡಿಪಾದ ಇಸ್ಕಾನಿನ ನಿಷ್ಠೆ ಮತ್ತು ಶ್ರದ್ಧೆಯ ಒಂದು ಸಂಕೇತವಾಗಿದೆ. ಇದು ವಾಸ್ತುಶಿಲ್ಪದ ಒಂದು ಹೆಗ್ಗುರುತಾಗಿದೆ.

ಈ ಭವ್ಯ ಮಂದಿರದ ನಿರ್ಮಾಣ ಕಾರ್ಯದಲ್ಲಿ ದಣಿವರಿಯದೆ ಸೇವೆ ಸಲ್ಲಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.”