harinam mantapa at iskcon

ಹರಿನಾಮ ಮಂಟಪವು ಇಸ್ಕಾನ್ ಬೆಂಗಳೂರಿನ ಒಂದು ಆಕರ್ಷಕ ವೈಶಿಷ್ಟ್ಯವಾಗಿದೆ. ಶ್ರೀ ಕೃಷ್ಣನ ದರ್ಶನಕ್ಕೆ ಸಾಗುವಾಗ ಅವನ ಪವಿತ್ರ ನಾಮಗಳನ್ನು ಜಪಿಸುತ್ತ ಅವನನ್ನು ನೆನಪಿಸಿಕೊಳ್ಳಲು ಅದು ಅನನ್ಯ ಅವಕಾಶ ಕಲ್ಪಿಸುತ್ತದೆ.

ಮಂದಿರಕ್ಕೆ ಬರುವವರು ಹರಿನಾಮ ಮಂಟಪದ ಮೂಲಕ ಅಥವಾ ನೇರವಾಗಿ ದರ್ಶನಕ್ಕೆ ತೆರಳಬಹುದು. ಹರಿನಾಮ ಮಂಟಪದಲ್ಲಿ ಹರೇ ಕೃಷ್ಣ ಮಹಾ ಮಂತ್ರವನ್ನು ಜಪಿಸಲು 108 ಮೆಟ್ಟಲುಗಳಿವೆ. ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದ ಅವರ ಧ್ವನಿ ಮುದ್ರಿತ ಜಪದೊಂದಿಗೆ ಹೊಂದಿಕೊಳ್ಳುವಂತೆ ಮಂತ್ರವನ್ನು ಗಟ್ಟಿಯಾಗಿ ಜಪಿಸಲಾಗುವುದು.

ಪ್ರತಿಯೊಂದು ನಾಮವನ್ನೂ ಸ್ಪಷ್ಟವಾಗಿ ಉಚ್ಚರಿಸುತ್ತ ಗಮನವಿಟ್ಟು ಕೇಳುವುದರಲ್ಲಿ ಪವಿತ್ರ ನಾಮದ ಶಕ್ತಿ ಅಡಗಿದೆ. ಶ್ರೀ ಕೃಷ್ಣನ ಪವಿತ್ರ ನಾಮವು ಪರಿಶುದ್ಧನಾದ ಭಗವಂತನಿಗಿಂತ ಭಿನ್ನವಲ್ಲ. ಆದುದರಿಂದ ಈ ಮಂತ್ರವನ್ನು ಪದೇ ಪದೇ ಜಪಿಸುವುದರಿಂದ ನಾವು ನಿರಂತರವಾಗಿ ಭಗವಂತನ ಸಂಗದಲ್ಲಿರುತ್ತೇವೆ ಮತ್ತು ಹೃದಯದ ಎಲ್ಲ ಕಶ್ಮಲದಿಂದ ಮುಕ್ತವಾಗಿ ಶುದ್ಧರಾಗುತ್ತೇವೆ.