ಮಧು ಪಂಡಿತ ದಾಸ
ಶ್ರೀ ಮಧು ಪಂಡಿತ ದಾಸ ಅವರು 1956 ರಲ್ಲಿ, ಕೇರಳದ ತಿರುವನಂತಪುರದಲ್ಲಿ ಜನಿಸಿದರು. ಅವರು ಮುಂಬೈ ಐಐಟಿಯಲ್ಲಿ ಎಂ.ಟೆಕ್. ಮಾಡುತ್ತಿದ್ದಾಗ, 1981 ರಲ್ಲಿ ಇಸ್ಕಾನ್‌ನ ಪೂರ್ಣಾವಧಿ ಸದಸ್ಯರಾದರು. ಬೆಂಗಳೂರಿನ ಶ್ರೀ ರಾಧಾ ಕೃಷ್ಣ ಮಂದಿರವನ್ನು ಅವರ ಮಾರ್ಗದರ್ಶನದಲ್ಲಿ ವಿನ್ಯಾಸಗೊಳಿಸಲಾಯಿತು ಮತ್ತು ನಿರ್ಮಿಸಲಾಯಿತು. ಭಾರತದಾದ್ಯಂತ ಅವರು ಆರಂಭಿಸಿದ ಅಕ್ಷಯ ಪಾತ್ರ ಕಾರ್ಯಕ್ರಮದ ಅಪ್ರತಿಮ ಸೇವೆಗಾಗಿ ಅವರಿಗೆ ಭಾರತ ಸರಕಾರವು 2016 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಪ್ರಸ್ತುತದಲ್ಲಿ ಅವರು ಉತ್ತರ ಪ್ರದೇಶದ ವೃಂದಾವನದಲ್ಲಿ ನಿರ್ಮಾಣವಾಗುತ್ತಿರುವ ವೃಂದಾವನ ಚಂದ್ರೋದಯ ಮಂದಿರ ಯೋಜನೆಯನ್ನೂ ನಿರ್ದೇಶಿಸುತ್ತಿದ್ದಾರೆ.
ಚಂಚಲಾಪತಿ ದಾಸ
ಶ್ರೀ ಚಂಚಲಾಪತಿ ದಾಸ ಅವರು 1963 ರಲ್ಲಿ, ಬೆಂಗಳೂರಿನಲ್ಲಿ ಜನಿಸಿದರು. ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISC) ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು 1984 ರಲ್ಲಿ, ಪೂರ್ಣಾವಧಿ ಸದಸ್ಯರಾಗಿ ಬೆಂಗಳೂರು ಇಸ್ಕಾನ್ ಸೇರಿದರು. ಇಸ್ಕಾನ್ ಬೆಂಗಳೂರಿನ ಮತ್ತು ಅಕ್ಷಯ ಪಾತ್ರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅವರು ಭಾಗಿಯಾಗಿದ್ದಾರೆ. ಅವರು ಉತ್ತರ ಪ್ರದೇಶದ ವೃಂದಾವನದಲ್ಲಿ ನಿರ್ಮಾಣವಾಗುತ್ತಿರುವ ವೃಂದಾವನ ಚಂದ್ರೋದಯ ಮಂದಿರ ಯೋಜನೆಯ ಅನುಷ್ಠಾನದಲ್ಲಿಯೂ ಸಕ್ರಿಯರಾಗಿದ್ದಾರೆ.
ಜೈ ಚೈತನ್ಯ ದಾಸ
ಶ್ರೀ ಜೈ ಚೈತನ್ಯ ದಾಸ ಅವರು ಕೇರಳದಲ್ಲಿ, 1966 ರಲ್ಲಿ ಜನಿಸಿದರು. ತಿರುವನಂತಪುರದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದಾಗಲೇ ಅವರು ಶ್ರೀಲ ಪ್ರಭುಪಾದರ ಬೋಧನೆಯ ಸಂಪರ್ಕ ಹೊಂದಿದರು. ಅವರು 1984 ರಲ್ಲಿ ಹರೇ ಕೃಷ್ಣ ಆಂದೋಲನವನ್ನು ಸೇರಿದರು. ಇಸ್ಕಾನ್ ಬೆಂಗಳೂರಿನ ಜೈವಿಕ ಕೃಷಿ (ಆರ್ಗಾನಿಕ್ ಫಾರ್ಮಿಂಗ್) ಮತ್ತು ಗ್ರಾಮಾಭಿವೃದ್ಧಿ ಕಾರ್ಯಕ್ರಮಮಗಳ ಪ್ರವರ್ತಕರು. ಅವರು ಈಗ ಇಸ್ಕಾನ್ ಮೈಸೂರು ಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಅಲ್ಲಿನ ಚಟುವಟಿಕೆಗಳ ನೇತೃತ್ವ ವಹಿಸಿದ್ದಾರೆ.
ಸ್ತೋಕ ಕೃಷ್ಣ ಸ್ವಾಮಿ
ಶ್ರೀ ಸ್ತೋಕ ಕೃಷ್ಣ ಸ್ವಾಮಿ ಅವರು 1960 ರಲ್ಲಿ, ಮೈಸೂರಿನಲ್ಲಿ ಜನಿಸಿದರು. ಅವರು ನಾಗ್ಪುರ ರೀಜನಲ್ ಎಂಜನಿಯರಿಂಗ್ ಕಾಲೇಜಿನಿಂದ ಎಂಜನಿಯರಿಂಗ್ ಪದವಿ ಪಡೆದ ಮೇಲೆ ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಅವರು ಕೆಲ ಸಮಯ ಇನ್ಫೋಸಿಸ್ ಮತ್ತು ಟಾಟಾ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು 1989 ರಲ್ಲಿ ಇಸ್ಕಾನ್ ಸೇರಿದರು. ಮೈಸೂರು ಕೇಂದ್ರದ ಚಟುವಟಿಕೆಗಳ ನೇತೃತ್ವವೂ ವಹಿಸಿದ್ದರು. ಈಗ ಚೆನ್ನೈ ಹರೇ ಕೃಷ್ಣ ಆಂದೋಲನದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಮಿತಾಸನ ದಾಸ
ಶ್ರೀ ಅಮಿತಾಸನ ದಾಸ ಅವರು ಅಸ್ಸಾಂನಲ್ಲಿ, 1969 ರಲ್ಲಿ ಜನಿಸಿದರು. ಕುರುಕ್ಷೇತ್ರ ಆರ್‌ಇಸಿಯಲ್ಲಿ ಬಿ.ಟೆಕ್, (ಕಂಪ್ಯೂಟರ್ ಸೈನ್ಸ್) ಮಾಡಿದ ಅವರು ಬೆಂಗಳೂರಿನ ಕಿರ್ಲೋಸ್ಕರ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜನಿಯರ್ ಆಗಿದ್ದರು. ಅವರು 1992 ರಲ್ಲಿ ಇಸ್ಕಾನ್ ಬೆಂಗಳೂರನ್ನು ಸೇರಿದರು. ಆಧ್ಯಾತ್ಮಿಕ ತತ್ತ್ವಗಳ ಆಧಾರದ ಮೇಲೆ ಸ್ವಯಂ ಅಭಿವೃದ್ಧಿಗಾಗಿ ಯುವಜನರಿಗೆ ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳಂತಹ ಕಾರ್ಯಕ್ರಮಗಳನ್ನು ಸಂಘಟಿಸುವುದರಲ್ಲಿ ಅವರು ತೊಡಗಿಕೊಂಡಿದ್ದರು. ಈಗ ಮುಂಬೈ ಹರೇ ಕೃಷ್ಣ ಆಂದೋಲನದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಾಸುದೇವ ಕೇಶವ ದಾಸ
ಶ್ರೀ ವಾಸುದೇವ ಕೇಶವ ದಾಸ ಅವರು 1973 ರಲ್ಲಿ, ಕೋಲ್ಕತ್ತದಲ್ಲಿ ಜನಿಸಿದರು. ಅವರು ವಾರಂಗಲ್ ಆರ್‌ಇಸಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಬಿ. ಟೆಕ್. ಪದವಿ ಪಡೆದರು. ಬೆಂಗಳೂರು ವಿಪ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು 1998 ರಲ್ಲಿ ಇಸ್ಕಾನ್ ಬೆಂಗಳೂರನ್ನು ಸೇರಿದರು. ಮಂದಿರದ ವಿಗ್ರಹ ವಿಭಾಗ ಮತ್ತು ಉತ್ಸವಗಳಿಗೆ ಸಂಬಂಧಿಸಿದ ಸೇವೆ ಮತ್ತು ಯೋಜನೆಗಳ ಉಸ್ತುವಾರಿ ವಹಿಸಿದ್ದಾರೆ. ಅವರು ವಿದ್ಯಾರ್ಥಿಗಳಿಗೆ ಮೌಲ್ಯಾಧರಿತ ಶಿಕ್ಷಣ ನೀಡುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವ್ಯಾಲ್ಯೂ ಎಜುಕೇಷನ್‌ನ ನಿರ್ದೇಶಕರೂ ಆಗಿದ್ದಾರೆ.
ರಾಜೀವ ಲೋಚನ ದಾಸ
ಶ್ರೀ ರಾಜೀವ ಲೋಚನ ದಾಸ ಅವರು ಹರಿಯಾಣಾದಲ್ಲಿ , 1972 ರಲ್ಲಿ ಜನಿಸಿದರು. ಅವರು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್‌ಸಿ. ಓದಿದರು. ಅವರು 1993 ರಲ್ಲಿ ಇಸ್ಕಾನ್ ಬೆಂಗಳೂರನ್ನು ಸೇರಿದರು. ಅವರು ಈಗ ಇಸ್ಕಾನ್ ಹುಬ್ಬಳ್ಳಿಯ ಅಧ್ಯಕ್ಷರಾಗಿ ಅದರ ಚಟುವಟಿಕೆಗಳ ಮುಖ್ಯಸ್ಥರಾಗಿದ್ದಾರೆ.
ಸತ್ಯ ಗೌರ ಚಂದ್ರ ದಾಸ
ಶ್ರೀ ಸತ್ಯ ಗೌರ ಚಂದ್ರ ದಾಸ ಅವರು ರಾಜಮಂಡ್ರಿಯಲ್ಲಿ, 1972 ರಲ್ಲಿ ಜನಿಸಿದರು. ಅವರು ಚೆನ್ನೈ ಐಐಟಿಯಲ್ಲಿ ಎಂ.ಟೆಕ್. (ಕಂಪ್ಯೂಟರ್ ಸೈನ್ಸ್) ಮಾಡಿದರು. ಅವರು ನೊವೆಲ್ ಸಾಫ್ಟ್‌ವೇರ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಮತ್ತು 1997 ರಲ್ಲಿ ಇಸ್ಕಾನ್ ಬೆಂಗಳೂರನ್ನು ಸೇರಿದರು. ಪ್ರಸ್ತುತ ಅವರು ಹೈದರಾಬಾದಿನಲ್ಲಿ ಹರೇ ಕೃಷ್ಣ ಆಂದೋಲನದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಅಕ್ಷಯ ಪಾತ್ರ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನೂ ವಹಿಸಿಕೊಂಡಿದ್ದಾರೆ.
ಕಾರುಣ್ಯ ಸಾಗರ ದಾಸ
ಶ್ರೀ ಕಾರುಣ್ಯ ಸಾಗರ ದಾಸ ಅವರು 1977 ರಲ್ಲಿ, ಚೆನ್ನೈನಲ್ಲಿ ಜನಿಸಿದರು. ಬೆಂಗಳೂರು ರಾಮಯ್ಯ ಕಾಲೇಜಿನಲ್ಲಿ ಸಿವಿಲ್ ಎಂಜನಿಯರಿಂಗ್ ಓದುತ್ತಿದ್ದಾಗ ಅವರು ಶ್ರೀಲ ಪ್ರಭುಪಾದರ ಸಂದೇಶ ಮತ್ತು ಧ್ಯೇಯದಲ್ಲಿ ಆಸಕ್ತರಾದರು. ಅವರು 1996 ರಲ್ಲಿ ಪೂರ್ಣಾವಧಿ ಸದಸ್ಯರಾಗಿ ಇಸ್ಕಾನ್ ಬೆಂಗಳೂರನ್ನು ಸೇರಿದರು ಮತ್ತು ಅನಂತರ ಮೈಸೂರು ಮಂದಿರದಲ್ಲಿ ಸೇವೆ ಸಲ್ಲಿಸಿದರು. ಪ್ರಸ್ತುತದಲ್ಲಿ ಅವರು ಇಸ್ಕಾನ್ ಮಂಗಳೂರಿನ ಮತ್ತು ಅದರ ಅಕ್ಷಯ ಪಾತ್ರ ಕಾರ್ಯಕ್ರಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.