ಇಸ್ಕಾನ್ ಬೆಂಗಳೂರು ಆಯೋಜಿಸುತ್ತಿರುವ

ಗೀತಾ ಜಯಂತಿ ಮಹೋತ್ಸವ 2020

ಶ್ರೀಮದ್ ಭಗವದ್ಗೀತೆಯ ಆವಿರ್ಭಾವದ ಸಂಭ್ರಮಾಚರಣೆ

ಗೀತಾ ಜಯಂತಿ

ಕುರುಕ್ಷೇತ್ರ ಯುದ್ಧಭೂಮಿಯಲ್ಲಿ, 5000 ವರ್ಷಗಳ ಹಿಂದೆ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ ಶುಭ ದಿನವನ್ನು ಗೀತಾ ಜಯಂತಿ ಎಂದು ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದ ನೆನಪಿಗಾಗಿ ಇಸ್ಕಾನ್ ಬೆಂಗಳೂರು ವಿದ್ಯಾರ್ಥಿಗಳಿಗಾಗಿ ಅನೇಕ ಸ್ಪರ್ಧೆಗಳನ್ನು ಮತ್ತು ಗೀತೆಯ ಪಾರಾಯಣವನ್ನು ಆಯೋಜಿಸುತ್ತಿದೆ. ಗೀತೆ ಅಧ್ಯಯನದಲ್ಲಿನ ಅವರ ಆಸಕ್ತಿಯನ್ನು ಪ್ರೋತ್ಸಾಹಿಸಲು ಮತ್ತು ಅವರು ತಮ್ಮ ಪ್ರತಿಭೆಯನ್ನು ತೋರುವ ಒಂದು ವೇದಿಕೆಯಾಗಿ ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯ ಮಟ್ಟದ ಗೀತಾ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ರಾಜ್ಯ ಮಟ್ಟದ ಭಗವದ್ ಗೀತಾ ಪ್ರಬಂಧ ಸ್ಪರ್ಧೆ

ಕಾಲೇಜು ವಿದ್ಯಾರ್ಥಿಗಳಿಗಾಗಿ “ಭಗವದ್‍ಗೀತಾ ಯಥಾರೂಪ” ಗ್ರಂಥವನ್ನು ಆಧರಿಸಿದ ಪ್ರಬಂಧ ಬರೆಯುವ ಸ್ಪರ್ಧೆ.

ವಿದ್ಯಾರ್ಥಿಗಳು ತಮ್ಮ ಸೃಜನಾತ್ಮಕ ಚಿಂತನೆಯನ್ನು ಗೀತೆಯ ಮೇಲೆ ಕೇಂದ್ರೀಕರಿಸಿ ಅದನ್ನು ತಮ್ಮ ಬರವಣಿಗೆಯ ಕೌಶಲದಿಂದ ಶಬ್ದಗಳಲ್ಲಿ ಆಭಿವ್ಯಕ್ತಪಡಿಸುತ್ತಾರೆ.

ಇಸ್ಕಾನ್ ಬೆಂಗಳೂರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ವಿದ್ಯಾಭ್ಯುದಯಕ್ಕಾಗಿ ವಿದ್ಯಾರ್ಥಿವೇತನ ನೀಡಲು ಇಂತಹ ಅನೇಕ ಸ್ಪರ್ಧೆಗಳನ್ನು ಪ್ರತಿವರ್ಷ ಆಯೋಜಿಸುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಕೆಳಗೆ ಕೊಡಲಾಗಿರುವ ಲಿಂಕ್ ಮೂಲಕ ನೋಂದಣಿ ಅರ್ಜಿಯನ್ನು ಭರ್ತಿ ಮಾಡಿ ಕಳುಹಿಸಬೇಕು.

ಪ್ರಬಂಧ ಸ್ಪರ್ಧೆಯ ನಿಯಮಗಳು ಮತ್ತು ಮಾರ್ಗಸೂಚಿಗಳು

ಪ್ರಬಂಧ ಬರೆಯುವ ಸ್ಪರ್ಧೆಗೆ ಇಲ್ಲಿ ನೀಡಿರುವ ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು.

ಅರ್ಹತೆಯ ಅಳತೆಗೋಲು

ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಕಲಿಯುತ್ತಿರುವ, 16-25 ವಯೋಮಾನದ ವಿದ್ಯಾರ್ಥಿಗಳು.

ಪ್ರಬಂಧ ಸ್ಪರ್ಧೆಯ ವಿಷಯಗಳು:

  1. “ವಿಶ್ವಕ್ಕೆ ಭಾರತದ ಅತ್ಯತ್ತಮ ಕೊಡುಗೆ ಭಗವದ್ಗೀತೆ!” ಈ ವಾಕ್ಯವನ್ನು ಸಮರ್ಥಿಸಿ.
  2. ಕರ್ಮಯೋಗ- ಕೃಷ್ಣಪ್ರಜ್ಞೆಯಲ್ಲಿ ಕಾರ್ಯ.
  3. ಯೋಗ ಪರಿಪೂರ್ಣತೆಯ ಅತ್ಯುನ್ನತ ಪರಿಕಲ್ಪನೆ- ಕೃಷ್ಣಪ್ರಜ್ಞೆ.
  4. ಆಧುನಿಕ ಜೀವನಕ್ಕೆ ಭಗವದ್ಗೀತೆಯ ಸಂದೇಶ.
  5. ಪುನರ್ಜನ್ಮ: ಸತ್ಯವೇ? ಕಟ್ಟುಕಥೆಯೇ?
  6. ಭಗವದ್ಗೀತೆಯಲ್ಲಿ ಇರುವ ವಿಜ್ಞಾನದ ಕುರಿತು ವಿವರಿಸಿ.
  7. ನಮ್ಮೊಳಗಿನ ಅರ್ಜುನನನ್ನು ಜಾಗೃತಗೊಳಿಸುವುದು ಹೇಗೆ?
  8. “ಮಾಡಿದ್ದುಣ್ಣೋ ಮಹಾರಾಯ”- ಪಾಪ ಪುಣ್ಯಗಳನ್ನು ಮೀರಿ ಮೇಲೇರುವ ದಾರಿ.

ಬಹುಮಾನಗಳು ಮತ್ತು ಪ್ರಮಾಣ ಪತ್ರಗಳು:

ವಿಜೇತರಿಗೆ ನಗದು ಬಹುಮಾನಗಳನ್ನು ನೀಡಲಾಗುವುದು. ಜೊತೆಗೆ ಸ್ಪರ್ಧೆಯಲ್ಲಿ ಭಾಗಿಯಾಗುವ ಎಲ್ಲರಿಗೂ ಪ್ರಮಾಣ ಪತ್ರವನ್ನು ಕೊಡಲಾಗುವುದು. ಪ್ರತೀ ವಿಜೇತರಿಗೂ ಪ್ರತ್ಯೇಕವಾಗಿ ತಿಳಿಸಲಾಗುವುದು.

• ಪ್ರಥಮ ಬಹುಮಾನ: ರೂ. 10,000
• ದ್ವಿತೀಯ ಬಹುಮಾನ: ರೂ. 7,000
• ತೃತೀಯ ಬಹುಮಾನ : ರೂ. 5,000
• ಸಮಾಧಾನಕರ ಬಹುಮಾನ (ಎರಡು): ರೂ. 3,000

ಪ್ರಬಂಧ ಸ್ಪರ್ಧೆಯ ರಚನೆ:

    1. ಪ್ರಬಂಧಗಳನ್ನು ಶ್ರೀಲ ಎ.ಸಿ. ಭಕ್ತವೇದಾಂತ ಸ್ವಾಮಿ ಪ್ರಭುಪಾದರು ರಚಿಸಿರುವ ಮತ್ತು ಪ್ರೋ. ಎಲ್.ಎಸ್ ಶೇಷಗಿರಿ ರಾವ್ ಅನುವಾದಿಸಿರುವ “ಭಗವದ್ಗೀತಾ ಯಥಾರೂಪ” ಪುಸ್ತಕವನ್ನು ಮಾತ್ರ ಆಧರಿಸಿ ಬರೆಯಬೇಕು. (ಇ-ಪ್ರತಿಯನ್ನು ಡೌನ್‍ಲೋಡ್ ಮಾಡಿಕೊಳ್ಳಲು ಈ ಪುಟದ ಕೆಳಗೆ ನೀಡಿರುವ ಲಿಂಕ್ ಅನ್ನು ಗಮನಿಸಿ.)
    2. ಉಲೇಖಗಳು ಕಡ್ಡಾಯವಾಗಿ “ಭಗವದ್ಗೀತಾ ಯಥಾರೂಪ” ಪುಸ್ತಕಕ್ಕೇ ಸೀಮಿತವಾಗಿರಬೇಕು.
    3. ಪ್ರಬಂಧಗಳನ್ನು ಕನ್ನಡದಲ್ಲಿಯೇ ಸಲ್ಲಿಸಬೇಕು.
    4. ಪ್ರಬಂಧವು ಪಟ್ಟಿಯಿಂದ ಆಯ್ಕೆ ಮಾಡಿರುವ ಒಂದು ವಿಷಯದ ಮೆಲೆಯೇ ಇರಬೇಕು.
    5. ಪೂರ್ಣಗೊಂಡ ಪ್ರಬಂಧವು 1500 ಪದಗಳನ್ನು ಮೀರಬಾರದು. ಕನಿಷ್ಠ ಪದಗಳ ಮಿತಿ ಇಲ್ಲವಾದರೂ ಸ್ಪರ್ಧಿಗಳು 800 ಪದಗಳಿಗೆ ಕಡಮೆ ಇಲ್ಲದಂತೆ ಬರೆಯಲು ಪ್ರೋತ್ಸಾಹಿಸಲಾಗಿದೆ.
    6. ಪ್ರಬಂಧದ ಆರಂಭದಲ್ಲಿಯೇ ಸ್ಪರ್ಧಿಗಳು ತಮ್ಮ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ಇ-ಮೇಲ್, ತಮ್ಮ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಣವನ್ನು ಕುರಿತಂತೆ ವಿವರಗಳನ್ನು ಒದಗಿಸಬೇಕು.
    7. ಮೂಲ ಪ್ರಬಂಧಗಳನ್ನಷ್ಟೇ ಸ್ಪರ್ಧೆಗೆ ಪರಿಗಣಿಸಲಾಗುವುದು. ಅದರಲ್ಲಿ ಯಾವುದೇ ಭಾಗವು ಈ ಮೊದಲು ಪ್ರಕಟವಾಗಿರಬಾರದು ಅಥವಾ ಬೇರೆ ಕಡೆ ಪ್ರಕಟಣೆಯ ಅಥವಾ ಸ್ಪರ್ಧೆಯ ಪರಿಶೀಲನೆಯಲ್ಲಿ ಇರಬಾರದು.
    8. ಆಧಾರ / ಉಲ್ಲೇಖಗಳನ್ನು ಅಡಿಟಿಪ್ಪಣಿಯಲ್ಲಿ ತಿಳಿಸಬೇಕು.
    9. ಪ್ರಬಂಧದಲ್ಲಿ ಸೇರಿಸುವ ಯಾವುದೇ ತಾತ್ತ್ವಿಕ ಅಂಶಗಳು ಶ್ರೀಲ ಪ್ರಭುಪಾದರ ಬೋಧನೆಗೆ ಅನುಗುಣವಾಗಿ ಇರಬೇಕು.
    10. ಒಬ್ಬ ಅಭ್ಯರ್ಥಿ ಒಂದೇ ಪ್ರಬಂಧವನ್ನು ಕಳುಹಿಸಬೇಕು.
    11. ಸ್ಪರ್ಧೆಗೆ ಯಾವುದೇ ಪ್ರವೇಶ / ಅರ್ಜಿ ಶುಲ್ಕವಿಲ್ಲ.

ಲಿಖಿತ ಪ್ರಬಂಧಗಳನ್ನು ಸಲ್ಲಿಸುವ ವಿಧಾನ:

1. ನೋಂದಣಿ ಕಡ್ಡಾಯ. (ಲಿಂಕ್ ಅನ್ನು ಕೊನೆಯಲ್ಲಿ ಕೊಡಲಾಗಿದೆ) ನೀವು ಸಲ್ಲಿಸುವ ಅರ್ಜಿಯಲ್ಲಿ ಎಲ್ಲ ವಿವರಗಳನ್ನು ತಪ್ಪದೇ ನೀಡಿ. ಮುಂದಿನ ಸಂವಹನಕ್ಕಾಗಿ ಈ ಅರ್ಜಿಯಲ್ಲಿರುವ ವಿವರಗಳನ್ನು ಬಳಸಿಕೊಳ್ಳಲಾಗುತ್ತದೆ
2. ಪ್ರಬಂಧಗಳನ್ನು ಜನವರಿ 10, 2021 ರೊಳಗೆ ಕಳುಹಿಸಬೇಕು.
3. ಕಳುಹಿಸುವ ವಿಧಾನ :
a) ಅಂಚೆ ಮೂಲಕ ಲಿಖಿತ ಪ್ರಬಂಧ
ಅಥವಾ
b) ಎಲೆಕ್ಟ್ರಾನಿಕ್ ಸ್ವರೂಪದಲ್ಲಿ (ಇ-ಮೇಲ್ ಮೂಲಕ / ನೋಂದಣಿ ಅರ್ಜಿ ಮೂಲಕ ಅಪ್ಲೋಡ್)
ಎಲೆಕ್ಟ್ರಾನಿಕ್ ಸ್ವರೂಪದಲ್ಲಿ: ಪ್ರಬಂಧಗಳನ್ನು “ಪ್ರಬಂಧ ಸ್ಪರ್ಧೆ 2020” ಎನ್ನುವ ವಿಷಯ ಸೂಚಿಯೊಂದಗೆ ಇ- ಮೇಲ್ ಮೂಲಕ (essaygita@gmail.com) ಅಥವಾ ನೋಂದಣಿ ಅರ್ಜಿ ಮೂಲಕ ಅಪ್ಲೋಡ್ ಮಾಡಿ ಕಳುಹಿಸಬಹುದು. ಈ ದಾಖಲೆಯು (.docx + PDF format’ ಎರಡು ಫೈಲ್) ನಲ್ಲಿ ಇರಬೇಕು.
c) ಪ್ರಬಂಧದ ಪ್ರಾರಂಭದಲ್ಲಿ ಅಭ್ಯರ್ಥಿಯ ಹೆಸರು, ಸಂಪರ್ಕ ವಿವರಗಳು ಮತ್ತು ಆಯ್ದ ಶೀರ್ಷಿಕೆಯಿಂದ ಆರಂಭವಾಗಬೇಕು.
d) ಫೈಲ್ ಗಳನ್ನು “ಅಭ್ಯರ್ಥಿಯ ಹೆಸರು_ವಿಷಯದ ಹೆಸರಿನಿಂದ” ಹೆಸರಿಸಬೇಕು.
e) ಪ್ರಬಂಧದ ಎಲೆಕ್ಟ್ರಾನಿಕ್ ಸ್ವರೂಪವು ನುಡಿ ಅಥವಾ ಬರಹ ಫಾಂಟ್ಗಳಲ್ಲೇ ಇರಬೇಕು.
ಎ4 ಅಳತೆಯ ಎಲೆಕ್ಟ್ರಾನಿಕ್ ಪುಟದಲ್ಲಿ ಟೈಪ್ ಮಾಡಿದ, 12 ಪಾಯಿಂಟ್ನ ಫಾಂಟ್ನಲ್ಲಿ, 1.5 ಲೈನ್ ಅಂತರದಲ್ಲಿ, ಮೇಲುಗಡೆ, ಕೆಳಗಡೆ ಮತ್ತು ಎರಡೂ ಬದಿಯಲ್ಲಿ 2.54 ಸೆ.ಮೀ. ಮಾರ್ಜಿನ್ ಉಳ್ಳ ಪ್ರಬಂಧಗಳನ್ನು ಸಿದ್ಧಪಡಿಸಿ ಕಳುಹಿಸಬೇಕು.

ಅಂಚೆ ಮೂಲಕ ಪ್ರಬಂಧ ಕಳುಹಿಸುವವರು (ಹಾರ್ಡ್ ಕಾಪಿ) ಈ ವಿಳಾಸಕ್ಕೆ ಕಳುಹಿಸಬೇಕು:

ಸಾರ್ವಜನಿಕ ಸಂಪರ್ಕ ವಿಭಾಗ (ಸಿ.ಪಿ.ಆರ್.ಡಿ)
ಇಸ್ಕಾನ್ ಶ್ರೀ ರಾಧಾ ಕೃಷ್ಣ ಮಂದಿರ
ಹರೇ ಕೃಷ್ಣ ಗಿರಿ, ಕಾರ್ಡ್ ರಸ್ತೆ
ರಾಜಾಜಿನಗರ, ಬೆಂಗಳೂರು – 560010
ಎ. ಬರೆಯಲು ಎ4 ಅಳತೆಯ ಕಾಗದವನ್ನು ಬಳಸಿ. (ನೀಲಿ ಅಥವಾ ಕಪ್ಪು ಇಂಕ್). ಡಬಲ್ ಲೈನ್ ಅಂತರ ಮತ್ತು ಪುಟಗಳ ಸಂಖ್ಯೆಯನ್ನು ಹೊಂದಿರಬೇಕು.
ಬಿ. ನಿಮ್ಮ ಹೆಸರು, ಸಂಪರ್ಕ ದೂರವಾಣಿ ಸಂಖ್ಯೆ, ವಿಳಾಸ, ಕಾಲೇಜು, ತರಗತಿ, ಕೋರ್ಸ್ ವಿವರಗಳು ಮತ್ತು ಆಯ್ದ ಶೀರ್ಷಿಕೆಯನ್ನು ಪ್ರಬಂಧದ ಆರಂಭದಲ್ಲಿ, ಮೇಲ್ಭಾಗದಲ್ಲಿ ತಿಳಿಸಿ. ಎನ್ವಲಪ್ನ ಹಿಂದೆ ಕೂಡ ನಿಮ್ಮ ಹೆಸರು ಮತ್ತು ವಿಳಾಸ ಇರಲಿ.

ಪ್ರಬಂಧದ ಮೌಲ್ಯಮಾಪನ:

ತೀರ್ಪುಗಾರರ ತಂಡವು ಕೆಳಗಿನ ಮಾನದಂಡಗಳನ್ನು ಆಧರಿಸಿ ಪ್ರಬಂಧದ ಮೌಲ್ಯಮಾಪನ ಮಾಡುತ್ತದೆ.

• ಪರಿಚಯ/ವ್ಯಾಖ್ಯಾನ 10%
• ರಚನೆ ಮತ್ತು ವಿಚಾರಧಾರೆ 10%
• ಭಾಷೆ 10%
• ಭಗವದ್ಗೀತೆ ಯಥಾರೂಪ ಗ್ರಂಥವನ್ನು ಆಧರಿಸಿದ ಸೃಜನಶೀಲತೆ 40%
• ಪ್ರಸ್ತುತತೆ 10%
• ಸಂಶೋಧನೆ 10%
• ಮುಕ್ತಾಯ 10%

ವಿದ್ಯಾರ್ಥಿಗಳು ಸಾಕಷ್ಟು ಸಮಯ ತೆಗೆದುಕೊಂಡು ತಮ್ಮ ಪ್ರಬಂಧಗಳನ್ನು ಕಳಿಸುವ ಮುನ್ನ ತಿದ್ದಿ ಪರಿಷ್ಕರಿಸಬೇಕು. ಚಿಕ್ಕ ತಪ್ಪು ಅಥವಾ ಮುದ್ರಣ ದೋಷವು ಬಹುಮಾನ ಪಡೆಯುವುದರಿಂದ ಅವರನ್ನು ದೂರವಿಡಬಹುದು

ವಿಶೇಷಣಗಳು:

1. ಸ್ಪರ್ಧೆ: “ಭಗವದ್ಗೀತಾ ಯಥಾರೂಪ” ಆಧಾರಿತ ಕನ್ನಡ ಪ್ರಬಂಧ ಬರಹ.
2. ಸಲ್ಲಿಸಲು ಕೊನೆಯ ದಿನ: ಜನವರಿ 10, 2021.
3. ಪ್ರಬಂಧವನ್ನು ಸಲ್ಲಿಸುವ ರೀತಿ:
ಚಿ. ಇ-ಮೇಲ್ ಅಥವಾ ಅಪ್ಲೋಡ್ (.docx + PDF format)
b. ಅಂಚೆಯಲ್ಲಿ (ಎ4 ಅಳತೆ)

ನೋಂದಾಯಿಸಲು:

“ಭಗವದ್ಗೀತಾ ಯಥಾರೂಪ”ದ ಡೌನ್ಲೋಡ್:
https://www.iskconbangalore.org/wp-content/uploads/2016/04/bhagavad-gita-yatharoopa.pdf

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ದೂರವಾಣಿ : 080- 23471956, 9379464312, 8123469518.
ಅಥವಾ ನಮಗೆ ಬರೆಯಿರಿ: essaygita@gmail.com