folk activies

“ಹೃದಯಕ್ಕೆ ಶಿಕ್ಷಣ ನೀಡದೆ ಮನಸ್ಸಿಗೆ ಶಿಕ್ಷಣ ನೀಡಿದರೆ ಅದು ಶಿಕ್ಷಣವೇ ಅಲ್ಲ.” – ಅರಿಸ್ಟಾಟಲ್

ಇಸ್ಕಾನ್ ಬೆಂಗಳೂರು 1999 ರಿಂದಲೂ “ಫ್ರೆಂಡ್ಸ್ ಆಫ್ ಲಾರ್ಡ್ ಕೃಷ್ಣ” (FOLK) ಕಾರ್ಯಕ್ರಮದ ಮೂಲಕ ಯುವಕರಿಗೆ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಬೋಧನೆಗಳ ಆಧಾರದ ಆಧ್ಯಾತ್ಮಿಕ ಜ್ಞಾನ ಭಂಡಾರವನ್ನೇ ನೀಡುತ್ತಿದೆ. ಸಣ್ಣ ಪ್ರಯತ್ನವಾಗಿ ಆರಂಭವಾದ ಈ ಕಾರ್ಯಕ್ರಮವು ಅತಿ ಶೀಘ್ರದಲ್ಲಿ ಬೆಳೆಯಿತು. ವಾರಾಂತ್ಯದಲ್ಲಿ ಆಧ್ಯಾತ್ಮಿಕ ಉಪನ್ಯಾಸ, ಕೀರ್ತನೆ, ಮತ್ತು ಪ್ರಸಾದಕ್ಕಾಗಿ ಯುವಜನರ ತಂಡವೇ ಅತ್ಯುತ್ಸಾಹದಿಂದ ಸೇರಲಾರಂಭಿಸಿದ್ದೇ ಇದರ ಯಶಸ್ಸಿಗೆ ಸಾಕ್ಷಿ.

ಅನುಭವ ಉಳ್ಳ ಬೋಧಕರು ನಡೆಸಿಕೊಡುವ ಉನ್ನತ ಮಟ್ಟದ ಸಂವಾದವು ಫೋಕ್ ಕಾರ್ಯಕ್ರಮದಲ್ಲಿದೆ. ವೈದಿಕ ಜ್ಞಾನವನ್ನು ಪ್ರಸ್ತುತ ಪ್ರಾಪಂಚಿಕ ವಾಸ್ತವತೆಗೆ ಹೇಗೆ ಅಳವಡಿಸಬಹುದು ಎಂಬ ಸಂವಾದವು  ಭಾನುವಾರಗಳ ಒಂದು ಮಾದರಿ ಕಾರ್ಯಕ್ರಮ. ಒತ್ತಡ ನಿರ್ವಹಣೆ, ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯ ಸುಧಾರಣೆ, ಕೆಟ್ಟ ಹವ್ಯಾಸಗಳ ವಿರುದ್ಧ ಗೆಲ್ಲುವುದು, ಬದುಕಿನಲ್ಲಿ ಶ್ರೇಷ್ಠರಾಗುವುದು ಇವೇ ಮುಂತಾದ ವಿಷಯಗಳ ಬಗೆಗೆ ಚರ್ಚಿಸಲಾಗುತ್ತದೆ.

ವ್ಯಕ್ತಿತ್ವ ವಿಕಸನ ಅಧ್ಯಯನದ ಮೂಲಕ ಯುವಜನರು ತಮ್ಮ ಆತ್ಮಪ್ರಜ್ಞೆಯನ್ನು ಪರಿಶೋಧಿಸಲು ನೆರವಾಗುವುದಲ್ಲದೆ ಅವರು ಹೆಚ್ಚು ಚಿಂತನಶೀಲ ಹಾಗೂ ಆತ್ಮವಿಮರ್ಶಕರಾಗುವಂತೆ ಅವರನ್ನು ಉತ್ತೇಜಿಸಲಾಗುವುದು. ಇಂದಿನ ಅಶಾಂತ ಬದುಕಿನಲ್ಲಿ ಇದು ನಿಜವಾಗಿಯೂ ಅಗತ್ಯವಾಗಿದೆ. ಭಗವಂತನ ಆನಂದಕ್ಕಾಗಿ ತಮ್ಮ ಪ್ರತಿಭೆ ಮತ್ತು ಕೌಶಲ್ಯವನ್ನು ತೋರಲೂ ಯುವಜನರಿಗೆ ಅವಕಾಶಗಳನ್ನು ಕಲ್ಪಿಸಲಾಗುವುದು.

ಫೋಕ್ ಕಾರ್ಯಕ್ರಮವು ಯುವಕರಿಗೆ ತಮ್ಮ ಬದುಕನ್ನು ಪರಿವರ್ತಿಸಿಕೊಳ್ಳಲು ಉತ್ತಮ ಅವಕಾಶ ನೀಡಿದೆ. ಭಾಗವಹಿಸುವ ಪ್ರತಿಯೊಬ್ಬರೂ ಈ ಕಾರ್ಯಕ್ರಮಗಳ ಮೌಲ್ಯವನ್ನು ಕಂಡುಕೊಳ್ಳುವರು. ಭಾಗವಹಿಸಿದ್ದ ಒಬ್ಬ ಯುವಕನ ಮಾತಿನಂತೆ, “ಇದು ಜೀವಮಾನದ ಅನುಭವ.”

ಫೋಕ್ ಉನ್ನತ ತರಬೇತಿ

ಫೋಕ್‌ನ ಮೂಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತ್ತು ಅಳವಡಿಸಬಹುದಾದ ಪ್ರಾಯೋಗಿಕ ತತ್ತ್ವಗಳನ್ನು ಅರಿತುಕೊಂಡ ಮೇಲೆ, ಭಾಗವಹಿಸಿದವರು ಮುಂದಿನ ಹೆಜ್ಜೆಯತ್ತ ಸಾಗಲು ಉನ್ನತ ಶಿಕ್ಷಣ ಅಥವಾ ತರಬೇತಿಯ ಮೂಲಕ ಅವರಿಗೆ ಮಾರ್ಗದರ್ಶನ ನೀಡಲಾಗುವುದು. ವಿದ್ಯಾರ್ಥಿಗಳು ಕೃಷ್ಣಪ್ರಜ್ಞೆ ಜೀವನ ವಿಧಾನ ಮತ್ತು ಭಕ್ತಿಸೇವೆಯ ವಿಜ್ಞಾನವನ್ನು ಕಲಿಯುವರು. ಕೃಷ್ಣಪ್ರಜ್ಞೆಯಲ್ಲಿ ಪ್ರಗತಿ ಸಾಧನೆಗಾಗಿ ಅವರು ಆಧ್ಯಾತ್ಮಿಕ ಬದ್ಧತೆಯನ್ನೂ ಮಾಡುವರು.

ಫೋಕ್ ಹಾಸ್ಟೆಲ್

folk hostel bangalore

ಆಧ್ಯಾತ್ಮಿಕ ಮೌಲ್ಯ ಮತ್ತು ಸಾತ್ವಿಕ ಜೀವನ ಶೈಲಿಯಲ್ಲಿ ಆಸಕ್ತಿ ಉಳ್ಳ ಯುವಕರಿಗಾಗಿ ರೂಪಿಸಿರುವ ವಸತಿ ಗೃಹಗಳೇ ಫೋಕ್ ಹಾಸ್ಟೆಲ್. ನಗರದ ನಾನಾ ಕಡೆಗಳಲ್ಲಿ ಹರಡಿರುವ ಮತ್ತು ವೃತ್ತಿಪರ ತಂಡವು ನಿರ್ವಹಿಸುತ್ತಿರುವ ಫೋಕ್ ಹಾಸ್ಟೆಲ್ ಬ್ರಹ್ಮಚಾರಿಗಳಿಗೆ ಕೈಗೆಟಕುವ ದರದಲ್ಲಿ ವಸತಿ ಸೌಕರ್ಯವನ್ನು ಕಲ್ಪಿಸಿದೆ.

ಅತ್ಯಂತ ಶುಚಿಯಾಗಿ ಮತ್ತು ದಿನಕ್ಕೆ ಮೂರು ಬಾರಿ ಪ್ರೀತಿಯಿಂದ ಉಣಬಡಿಸುವ ರುಚಿಯಾದ ಆಹಾರ ಸೇವನೆಯು ಆನಂದಮಯ. ಮುಖ್ಯವಾಗಿ ಸ್ನೇಹಪರ, ಉತ್ತೇಜಕ ಮತ್ತು ಸುಸಂಸ್ಕೃತ ಪರಿಸರದಲ್ಲಿ ಸಹಮನಸ್ಕರೊಂದಿಗೆ ವಾಸಿಸುವ ಅವಕಾಶವೇ ಅತ್ಯಂತ ಲಾಭದಾಯಕ. ಓಹ್! ಬದುಕು ಅತ್ಯುತ್ತಮ!

ಹೆಚ್ಚಿನ ವಿವರಗಳಿಗೆ ನಮ್ಮನ್ನು ಸಂಪರ್ಕಿಸಬಹುದು :

ಇಮೇಲ್ : folk.hostel@hkm-group.org

ವಿಳಾಸ : ಫೋಕ್ ವಿಭಾಗ, ಇಸ್ಕಾನ್ ಮಂದಿರ, ಹರೇ ಕೃಷ್ಣ ಗಿರಿ, ಕಾರ್ಡ್ ರಸ್ತೆ, ರಾಜಾಜಿನಗರ, ಬೆಂಗಳೂರು – 560010

ದೂರವಾಣಿ : 080-23471956