Search
Saturday 4 April 2020
  • :
  • :

ರಾಧಾ ಕುಂಡ

ಅರಿಷ್ಟಾಸುರನನ್ನು ಕೊಂದ ಆ ಸಂಜೆ ಕೃಷ್ಣ ಮತ್ತು ಅವನ ಮಿತ್ರರಿಗೆ ಅಚ್ಚರಿ ಕಾದಿತ್ತು. ಅವರು ರಾಧಾ ಮತ್ತಿತರ ಗೋಪಿಯರನ್ನು ಭೇಟಿ ಮಾಡಿದಾಗ ಅವರು ಕೃಷ್ಣನನ್ನು ತರಾಟೆಗೆ ತೆಗೆದುಕೊಂಡರು. ಗೂಳಿ ಪವಿತ್ರವಾದುದು, ಅದನ್ನು ಕೊಂದಿರುವುದರಿಂದ ಪಾಪ ಮಾಡಿದಂತೆ, ಶುದ್ಧೀಕರಣವಾಗಬೇಕು ಎಂದು ಗೋಪಿಯರು ಪಟ್ಟು ಹಿಡಿದರು. ಪವಿತ್ರ ಸ್ಥಳಗಳಲ್ಲಿ ಹರಿಯುವ ನದಿಗಳಲ್ಲಿ ತತ್‌ಕ್ಷಣ ಸ್ನಾನ ಮಾಡಬೇಕೆಂದು ಅವರು ಹೇಳಿದರು.

ಇದಕ್ಕೆಲ್ಲ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಕೃಷ್ಣ ಉಪಾಯ ಮಾಡಿದ. ಎಲ್ಲ ಪವಿತ್ರ ನದಿಗಳನ್ನು ವೃಂದಾವನಕ್ಕೆ ತರಲು ನಿರ್ಧರಿಸಿದ. ಅವನು ನೆಲದ ಮೇಲೆ ತನ್ನ ಕಾಲನ್ನು ಒತ್ತಿದ. ಈ ರೀತಿ ಕೊಳ ಮಾಡಿದಾಗ ನದಿಗಳು ಅದರಲ್ಲಿ ಹರಿದು ಬಂದವು. ಶಾಮ ಕುಂಡ ಎಂದು ಕರೆದ ಈ ಕೊಳದಲ್ಲಿ ಕೃಷ್ಣ ಪವಿತ್ರ ಸ್ನಾನ ಮಾಡಿದ.

ಈಗ ಕೃಷ್ಣನ ಸರದಿ. ಗೋಪಿಯರಿಗೆ ಆದೇಶ ನೀಡತೊಡಗಿದ. `ನೀವೆಲ್ಲ ರಾಕ್ಷಸನ ಪರ ವಹಿಸಿದ್ದರಿಂದ ನೀವೂ ಕೂಡ ಈಗ ಶುದ್ಧಗೊಳ್ಳಬೇಕು’ ಎಂದ ಕೃಷ್ಣನ ಮಾತಿಗೆ ಅವರೆಲ್ಲ ಒಪ್ಪಿದರು. ಗೋಪಿಯರು ತಮ್ಮ ಬಳೆಗಳಿಂದ ಕೊಳ ತೋಡಲು ಯತ್ನಿಸಿ ಸಮೀಪದ ಮಾನಸಿ ಗಂಗಾ ಕೊಳದಿಂದ ನೀರು ತಂದು ತುಂಬಲು ಪ್ರಾರಂಭಿಸಿದರು. ಅವರ ಬಳಿ ಆಗ ಇದ್ದದ್ದು ಸಣ್ಣ ಬಿಂದಿಗೆಯಾಗಿದ್ದರಿಂದ ಕೊಳ ತುಂಬಲಿಲ್ಲ. ಅವರು ಸುಸ್ತಾಗಿ ಕುಸಿಯುವಂತಾದರು. ಆಗ ಪವಿತ್ರ ನದಿಗಳು ನೆರವಿಗೆ ಬಂದು ಈ ಕೊಳವನ್ನು ತುಂಬಿದವು. ಈ ರೀತಿ ರಾಧಾ ಕುಂಡದ ಸೃಷ್ಟಿಯಾಯಿತು.

ನೀವು ವೃಂದಾವನಕ್ಕೆ ಹೋದರೆ ಈಗಲೂ ರಾಧಾ ಕುಂಡ ಮತ್ತು ಶಾಮ ಕುಂಡಕ್ಕೆ ಭೇಟಿ ನೀಡಿ ಕೃಷ್ಣ ಮತ್ತು ಗೋಪಿಯರಂತೆ ಸ್ನಾನ ಮಾಡಬಹುದು!




Leave a Reply

Your email address will not be published. Required fields are marked *