Warning: Parameter 2 to wp_hide_post_Public::query_posts_join() expected to be a reference, value given in /home/iskconbr/public_html/blog/wp-includes/class-wp-hook.php on line 298
ಮಾವಿನ ಕಾಯಿಯ ವೈವಿಧ್ಯ
Search
Sunday 20 September 2020
  • :
  • :
ಇತ್ತೀಚಿನ ಲೇಖನ

Warning: Parameter 2 to wp_hide_post_Public::query_posts_join() expected to be a reference, value given in /home/iskconbr/public_html/blog/wp-includes/class-wp-hook.php on line 298

ಮಾವಿನ ಕಾಯಿಯ ವೈವಿಧ್ಯ

ಮಾವಿನಕಾಯಿಯನ್ನು ಉಪ್ಪಿನ ಕಾಯಿಗೆ ಮಾತ್ರವಲ್ಲ ಅನೇಕ ಬಗೆಯ ಅಡುಗೆಗಳಿಗೂ ಬಳಸುತ್ತಾರೆ. ಹೀಗೆ ಇದನ್ನು ಬಳಸಿ ಹಲವಾರು ರುಚಿಕರ ಖಾದ್ಯಗಳನ್ನು ತಯಾರಿಸಬಹುದು. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಮಾವಿನ ಕಾಯಿ ಚಿತ್ರಾನ್ನ

ಬೇಕಾಗುವ ಪದಾರ್ಥಗಳು :

  • ಉದುರಾಗಿರುವ ಅನ್ನ – ೨ ಬಟ್ಟಲು
  • ಮಾವಿನ ಕಾಯಿ – ೧
  • ಕಡಲೆಕಾಯಿ ಬೀಜ – ೪ ಚಮಚ
  • ಗೋಡಂಬಿ ಚೂರು – ೨ ಚಮಚ
  • ಹಸಿ ಮೆಣಸಿನಕಾಯಿ – ೫
  • ಕಡಲೆ ಬೇಳೆ – ೧ ಚಮಚ
  • ಉದ್ದಿನ ಬೇಳೆ – ೧ ಚಮಚ
  • ಸಾಸಿವೆ – ೧ ಚಮಚ
  • ಕರಿಬೇವು – ೨ ಎಸಳು
  • ಅರಿಶಿನ – ೧/೪ ಚಮಚ
  • ಹಸಿ ತೆಂಗಿನ ತುರಿ – ೧/೨ ಕಪ್
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ – ಅಗತ್ಯವಿದ್ದಷ್ಟು

ಮಾಡುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಅನ್ನವನ್ನು ಮಾಡಿಟ್ಟುಕೊಂಡಿರಿ. ಅನ್ನ ಉದುರಾಗಿದ್ದರೆ ಚಿತ್ರಾನ್ನ ಕಲೆಸಲು ಸುಲಭವಾಗುತ್ತದೆ. ಮಾವಿನ ಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ತುರಿದುಕೊಳ್ಳಿ. ತುರಿದುಕೊಂಡ ಮಾವಿನ ತುರಿಯ ಜೊತೆಗೆ ಹಸಿ ಮೆಣಸಿನ ಕಾಯಿಯನ್ನು ಹಾಕಿ ನೀರನ್ನು ಹಾಕದೆ ರುಬ್ಬಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾಯಲು ಇಡಿ. ಕಾದ ಎಣ್ಣೆಗೆ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು, ಕಡಲೆಕಾಯಿ ಬೀಜ ಹಾಕಿ ಬಾಡಿಸಿ. ಅನಂತರ ಗೋಡಂಬಿ, ಅರಿಶಿನ ಹಾಕಿ. ಕೊನೆಯದಾಗಿ ಹಸಿ ತೆಂಗಿನ ತುರಿ, ರುಬ್ಬಿದ ಮಾವಿನ ಕಾಯಿ ಮಿಶ್ರಣವನ್ನು ಹಾಕಿ ಬೆರೆಸಿ ಕೆಳಗಿಳಿಸಿ. ಇದನ್ನು ಅನ್ನಕ್ಕೆ ಉಪ್ಪು ಹಾಕಿ ಕಲೆಸಿ. ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿದರೆ ಮಾವಿನಕಾಯಿ ಚಿತ್ರಾನ್ನ ಸಿದ್ಧ.

ಮಾವಿನಕಾಯಿ ಗೊಜ್ಜು

ಬೇಕಾಗುವ ಪದಾರ್ಥಗಳು :

  • ತೋತಾಪುರಿ ಮಾವಿನಕಾಯಿ – ೧
  • ಒಣ ಮೆಣಸಿನಕಾಯಿ – ೨
  • ಹಸಿಮೆಣಸಿನಕಾಯಿ – ೩
  • ಸಾಸಿವೆ – ೧/೨ ಚಮಚ
  • ಎಣ್ಣೆ – ೧ ಚಮಚ
  • ಬೆಲ್ಲ – ಸ್ವಲ್ಪ
  • ಇಂಗು – ೨ ಚಿಟಿಕೆ
  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಮಾವಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಇದನ್ನು ಸ್ವಲ್ಪ ನೀರು ಹಾಕಿ ಬೇಯಿಸಿ. ಬೆಂದ ಮೇಲೆ ಉಪ್ಪು, ಬೆಲ್ಲ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹೊಂದುವಂತೆ ಮತ್ತೆ ಬೇಯಿಸಿ. ಕೊನೆಯದಾಗಿ ಸಾಸಿವೆ, ಇಂಗು, ಒಣ ಮೆಣಸಿನಕಾಯಿ ಒಗ್ಗರಣೆ ಕೊಡಿ.

(ಇದೇ ರೀತಿ ಮಾವಿನ ಹಣ್ಣಿನಲ್ಲೂ ಗೊಜ್ಜು ಮಾಡಬಹುದು)

ಮಾವಿನಕಾಯಿ ಚಟ್ನಿ

ಬೇಕಾಗುವ ಪದಾರ್ಥಗಳು :

  • ಮಾವಿನ ಕಾಯಿ – ೨
  • ಬೆಲ್ಲದ ಪುಡಿ – ೧/೨ ಕಪ್
  • ಶುಂಠಿ ಪೇಸ್ಟ್ – ೧ ಚಮಚ
  • ಅಚ್ಚ ಖಾರದ ಪುಡಿ – ೧ ಚಮಚ
  • ಅರಿಶಿನ – ೧/೪ ಚಮಚ
  • ಕರಿಬೇವು – ೨ ಎಸಳು
  • ಇಂಗು – ೨ ಚಿಟಿಕೆ
  • ಒಣಮೆಣಸಿನಕಾಯಿ – ೩
  • ಹುರಿದ ಸೋಂಪು, ಮೆಂತ್ಯಪುಡಿ – ೧ ಚಮಚ
  • ಸಾರಿನ ಪುಡಿ (ಸಾಂಬಾರ್) – ೧ ಚಮಚ
  • ತುಪ್ಪ – ೪ ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಮಾವಿನ ಕಾಯಿಯ ಸಿಪ್ಪೆ ತೆಗೆದು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ. ಎರಡು ಚಮಚ ತುಪ್ಪ ಬಿಸಿಮಾಡಿ ಅದರೊಳಗೆ ಮಾವಿನಕಾಯಿ ಚೂರುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೂ ಹುರಿದು ಅನಂತರ ಅವುಗಳನ್ನು ಚೆನ್ನಾಗಿ ಮಸೆದು ಉರಿಯಿಂದ ಕೆಳಗಿಳಿಸಿ.

ಒಂದು ಬಾಣಲೆಯಲ್ಲಿ ಎರಡು ಚಮಚ ತುಪ್ಪ ಬಿಸಿ ಮಾಡಿ ಅದರಲ್ಲಿ ಒಣ- ಮೆಣಸಿನಕಾಯಿ, ಶುಂಠಿ ಪೇಸ್ಟ್, ಇಂಗು, ಕರಿಬೇವು ಹಾಕಿ ಬಾಡಿಸಿ. ಆಮೇಲೆ ಅಚ್ಚ ಖಾರದಪುಡಿ, ಅರಿಶಿನ, ಸಾರಿನ ಪುಡಿ, ಉಪ್ಪು, ಬೆಲ್ಲ, ಮಾವಿನಕಾಯಿ ಹಾಕಿ ಐದು ನಿಮಿಷ ಚೆನ್ನಾಗಿ ಫ್ರೈಮಾಡಿ. ಈಗ ೧/೨ ಕಪ್ ನೀರು ಹಾಕಿ ಕಲಸಿ ಪಾತ್ರೆಯ ಮುಚ್ಚಳ ಮುಚ್ಚಿ ಬೇಯಿಸಿ. ಅನಂತರ ಹುರಿದ ಸೋಂಪು, ಮೆಂತ್ಯಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ ತಣ್ಣಗಾಗಲು ಬಿಟ್ಟರೆ ರುಚಿಯಾದ ಮತ್ತು ಸಿಹಿಯಾದ ಮಾವಿನಕಾಯಿ ಚಟ್ನಿ ಸವಿಯಲು ಸಿದ್ಧ. ಇದು ಬಿಸಿಯಾದ ಅನ್ನದೊಂದಿಗೆ ಚೆನ್ನಾಗಿ ಹೊಂದುತ್ತದೆ.

ಮಾವಿನಕಾಯಿ ಹಪ್ಪಳ

ಬೇಕಾಗುವ ಪದಾರ್ಥಗಳು :

  • ಹುಳಿ ಮಾವಿನಕಾಯಿ – ೩
  • ಅಕ್ಕಿ – ೩ ಕಪ್
  • ಹಸಿಮೆಣಸಿನಕಾಯಿ – ೧೨
  • ಇಂಗು – ೧/೨ ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಅಕ್ಕಿಯನ್ನು ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿ. ಅನಂತರ ಬಿಸಿಲಿನಲ್ಲಿ ಒಣಗಿಸಿಕೊಂಡು ಹಿಟ್ಟು ಮಾಡಿಕೊಳ್ಳಿ. ಮಾವಿನಕಾಯಿಯನ್ನು ತುರಿದು ಅದಕ್ಕೆ ಹಸಿಮೆಣಸಿನಕಾಯಿ, ಇಂಗು, ಉಪ್ಪನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದನ್ನು ಅಕ್ಕಿ ಹಿಟ್ಟಿಗೆ ಸೇರಿಸಿ ಸ್ವಲ್ಪ ನೀರು ಹಾಕಿ ಹದವಾಗಿ ಕಲಸಿಕೊಳ್ಳಿ. ಇದನ್ನು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ಲಟ್ಟಿಸಿ ಬಿಸಿಲಿನಲ್ಲಿ ಒಣಗಿಸಿ. ಒಣಗಿದ ಮೇಲೆ ಎಣ್ಣೆಯಲ್ಲಿ ಕರಿದು ತಿಂದರೆ ರುಚಿಯಾಗಿರುತ್ತದೆ.

ಮಾವಿನ ತೊಕ್ಕು

ಬೇಕಾಗುವ ಪದಾರ್ಥಗಳು :

  • ಗಟ್ಟಿಯಾದ ಮಾವಿನಕಾಯಿ – ೪
  • ಮೆಂತ್ಯ – ೧ ಚಮಚ
  • ಇಂಗು – ೧/೪ ಚಮಚ
  • ಅಚ್ಚ ಖಾರದಪುಡಿ – ೨ ಚಮಚ
  • ಅರಿಶಿನ – ೧/೪ ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ಸಾಸಿವೆ – ೨ ಚಮಚ
  • ಎಣ್ಣೆ – ೩/೪ ಕಪ್

ಮಾಡುವ ವಿಧಾನ: ಮೊದಲು ಮಾವಿನ- ಕಾಯಿಗಳನ್ನು ತೊಳೆದು ಸಿಪ್ಪೆ ತೆಗೆದು ತುರಿಯಿರಿ. ಮೆಂತ್ಯ ಹುರಿದು ಪುಡಿ ಮಾಡಿಕೊಳ್ಳಿ. ಒಂದು ಬಾಣಲೆಗೆ ೧/೨ ಕಪ್ ಎಣ್ಣೆ ಹಾಕಿ ಕಾಯಲು ಇಡಿ. ಕಾದ ಎಣ್ಣೆಗೆ ಸಾಸಿವೆ ಹಾಕಿ ಸಿಡಿಸಿ. ಅನಂತರ ತುರಿದ ಮಾವಿನಕಾಯಿ, ಉಪ್ಪು, ಅರಿಶಿನ, ಅಚ್ಚ ಖಾರದಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹುರಿಯಿರಿ. ಮಾವಿನಕಾಯಿಯ ನೀರೆಲ್ಲಾ ಇಂಗಿ ಅದೊಂದು ಮುದ್ದೆಯಾಗುತ್ತದೆ. ಆಗ ಉಳಿದ ಎಣ್ಣೆ, ಹುರಿದ ಮೆಂತ್ಯಪುಡಿ, ಇಂಗು ಹಾಕಿ ಸ್ವಲ್ಪ ಹೊತ್ತು ಬಾಡಿಸಿ ಕೆಳಗಿಳಿಸಿ. ಆರಿದ ಮೇಲೆ ಬಾಟಲಿಯಲ್ಲಿ ತುಂಬಿಡಿ.




Leave a Reply

Your email address will not be published. Required fields are marked *