Warning: Parameter 2 to wp_hide_post_Public::query_posts_join() expected to be a reference, value given in /home/iskconbr/public_html/blog/wp-includes/class-wp-hook.php on line 298
ಕೈದಾಳದ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನ
Search
Sunday 20 September 2020
  • :
  • :
ಇತ್ತೀಚಿನ ಲೇಖನ

Warning: Parameter 2 to wp_hide_post_Public::query_posts_join() expected to be a reference, value given in /home/iskconbr/public_html/blog/wp-includes/class-wp-hook.php on line 298

ಕೈದಾಳದ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನ

ತುಮಕೂರಿನಿಂದ  ೯ ಕಿ.ಮೀ. ದೂರದಲ್ಲಿ ಚೆನ್ನಕೇಶವನ ಪುರಾತನ ದೇವಸ್ಥಾನವಿದೆ. ಈ ದೇವಸ್ಥಾನವು ಈಗ ಶಿಥಿಲಗೊಂಡಿದ್ದರೂ ಚೆನ್ನಕೇಶವನ ಸುಂದರ ಮೂರ್ತಿಯು ಜನರನ್ನು ಆಕರ್ಷಿಸುತ್ತದೆ. ಈ ಸುಂದರ ಮೂರ್ತಿಯನ್ನು ಕೆತ್ತಿದವನು ಇದೇ ಹಳ್ಳಿಯಲ್ಲಿ ಜನಿಸಿದ್ದ ಜಕಣಾಚಾರಿ ಎಂಬ ಶಿಲ್ಪಿ.

ಈ ಮೂರ್ತಿಯನ್ನು ಕೆತ್ತುವ ಮುನ್ನ ಶಿಲ್ಪಕಲೆಯ ಹೊಸ ಆಯಾಮಗಳನ್ನು ಹುಡುಕುತ್ತ ಮತ್ತು ಮನಶ್ಶಾಂತಿಗಾಗಿ ಅಲೆದಾಡುತ್ತಿದ್ದ ಜಕಣಾಚಾರಿಯು ಅದೃಷ್ಟವಶಾತ್ ಶ್ರೀ ರಾಮಾನುಜಾಚಾರ್ಯರನ್ನು ಭೇಟಿಯಾದನು. ರಾಮಾನುಜಾಚಾರ್ಯರು ಭಗವಂತನ ಸೇವೆಗಾಗಿ ಅವನ ಕಲೆಯನ್ನು ಬಳಸಿಕೊಂಡರು. ಹೊಯ್ಸಳ ದೊರೆ ಬಿಟ್ಟಿದೇವನ ಮಗಳ    ಅನಾರೋಗ್ಯವನ್ನು   ಶ್ರೀ  ರಾಮಾನುಜಾಚಾರ್ಯರು ಗುಣಪಡಿಸಿದ್ದರಿಂದ ಬಿಟ್ಟಿದೇವನು ವೈಷ್ಣವ ಧರ್ಮದ ಅನುಯಾಯಿಯಾದನಲ್ಲದೇ, ಅವನಿಗೆ ‘ವಿಷ್ಣುವರ್ಧನ’ ಎಂದು ಆಚಾರ್ಯರು ಹೆಸರಿಟ್ಟು ವಿಷ್ಣುವಿಗಾಗಿ ದೇವಸ್ಥಾನಗಳನ್ನು ನಿರ್ಮಿಸುವಂತೆ ಸೂಚಿಸಿದರು. ಆಗ ದೇವಸ್ಥಾನದ ನಿರ್ಮಾಣಕ್ಕಾಗಿ ರಾಮಾನುಜಾಚಾರ್ಯರು

ಜಕಣಾಚಾರಿಗೆ ಆಜ್ಞಾಪಿಸಿದರು. ಅವರ ಆಜ್ಞೆಯಂತೆ ಬೇಲೂರು ಹಳೆಬೀಡುಗಳಲ್ಲಿ ದೇವಸ್ಥಾನ ನಿರ್ಮಾಣದಲ್ಲಿ ತೊಡಗಿದ ಜಕಣಾಚಾರಿಯು ಕಲ್ಪನೆಗೂ ನಿಲುಕದ ಕೆತ್ತನಿಕೆಗಳಿಂದ ದೇವಸ್ಥಾನಗಳನ್ನು ಅಲಂಕರಿಸಿದನು.

ವಿಷ್ಣುವರ್ಧನನ ರಾಣಿ ಶಾಂತಲಾ ದೇವಿಯ ಕೋರಿಕೆಯಂತೆ ಜಕಣಾಚಾರಿಯು ವಿಷ್ಣುವಿನ ಮೂರ್ತಿಯೊಂದನ್ನು ಕೆತ್ತಿದನು. ಅದರ ಅಪ್ರತಿಮ ಸೌಂದಂiiದಿಂದ ಪ್ರಭಾವಿತರಾದ ರಾಜ-ರಾಣಿಯರು ಅವನ ಕಲಾ ಪ್ರಾವಿಣ್ಯವನ್ನು ಮೆಚ್ಚಿದರು. ಆದರೆ ಆ ಮೂರ್ತಿಯಲ್ಲಿ ದೋಷವಿರುವುದು ಗೊತ್ತಾದಾಗ ಜಕಣಾಚಾರಿಯು ತನ್ನ ಬಲಗೈಯನ್ನು ಕತ್ತರಿಸಿಕೊಂಡನು. ವಿಷ್ಣುವಿನ ಇನ್ನೊಂದು ಮೂರ್ತಿಯನ್ನು ಬೇಲೂರಿನ ದೇವಸ್ಥಾನಕ್ಕಾಗಿ ಕೆತ್ತಿ ಕೊಟ್ಟ ಅನಂತರ ಜಕಣಾಚಾರಿಗೆ ತನ್ನ ಹುಟ್ಟೂರಿನಲ್ಲೊಂದು ವಿಷ್ಣುವಿನ ದೇವಸ್ಥಾನದ ನಿರ್ಮಾಣ ಮಾಡುವಂತೆ ದೈವಪ್ರೇರಣೆ- ಯಾಯಿತು. ಅದರಂತೆ ತನ್ನ ಒಂದು ಕೈ ಇಲ್ಲದಿದ್ದರೂ ಅವನು ಚೆನ್ನಕೇಶವನ ಮೂರ್ತಿಯನ್ನು ಕೆತ್ತಿದನು. ಆ ದೇವಸ್ಥಾನದಲ್ಲಿ ಜಕಣಾಚಾರಿಯು ಇತರ ಭಕ್ತಾದಿಗಳೊಡನೆ ಕೀರ್ತನೆ ಮಾಡುತ್ತಿದ್ದಾಗ ಕತ್ತರಿಸಿ ಹೋಗಿದ್ದ ಅವನ ಕೈ ಮರಳಿ ಬಂದಿತೆಂದು ಸ್ಥಳೀಯರು ಹೇಳುತ್ತಾರೆ. ಅದರಿಂದ ಕೈದಾಳ ಎಂಬ ಹೆಸರು ಬಂದಿದೆ ಎನ್ನುವುದು ಪ್ರತೀತಿ.

 




Leave a Reply

Your email address will not be published. Required fields are marked *