Search
Wednesday 15 July 2020
  • :
  • :

ಅರ್ಥವ್ಯವಸ್ಥೆ – ಪ್ರಭುಪಾದರ ಮಾತು

ಆಧುನಿಕ ಅರ್ಥವ್ಯವಸ್ಥೆಯು ಕೇವಲ ವಂಚನೆ :

ಒಬ್ಬ ಕಾರ್ಮಿಕ ತಿಂಗಳಿಗೆ ಹತ್ತು ಸಾವಿರ ರೂಪಾಯಿಯನ್ನು ಗಳಿಸುತ್ತಿದ್ದಾನೆ ಎಂದಿಟ್ಟುಕೊಳ್ಳಿ. ಅವನಿಗೆ ದೊರೆಯುತ್ತಿರುವುದು ಕಾಗದ, ಆದರೆ ಅವನು “ನನಗೆ ಹಣ ದೊರೆಯುತ್ತಿದೆ” ಎಂದು ಯೋಚಿಸುತ್ತಾನೆ. ಅವನು ತನ್ನ ಶ್ರಮವನ್ನು ನೀಡುತ್ತಿದ್ದಾನೆ. ವಸ್ತುಗಳು ಉತ್ಪಾದನೆಯಾಗುತ್ತಿವೆ. “ಅವನಿಗೆ ವಂಚನೆ ಮಾಡಿ. ಹಣವನ್ನು ಕೊಡದೆ ಅವನಿಗೆ ಕಾಗದವನ್ನು ಕೊಡಿ. ಅವನ ಶ್ರಮವನ್ನು ಪಡೆಯಿರಿ. ವಸ್ತುಗಳನ್ನು ಉತ್ಪಾದಿಸಿ.” ಇದು ಆಧುನಿಕ ಅರ್ಥವ್ಯವಸ್ಥೆ. ಅಲ್ಲವೆ?

ಒಬ್ಬ ಶ್ರಮಿಕನಿಗೆ, ಒಬ್ಬ ಕಾರ್ಮಿಕನಿಗೆ ಉನ್ನತವಾದ ಸಂಬಳವನ್ನು ಕೊಡಲಾಗುತ್ತದೆ. ಉನ್ನತವಾದ ವೇತನಗಳನ್ನು ಕೊಡಲಾಗುತ್ತದೆ. ಹಾಗಾದರೆ ಅವನಿಗೆ ದೊರೆಯುತ್ತಿರು- ವುದೇನು? ಬರೀ ಕಾಗದ. ಅವನು ತನ್ನ ಶ್ರಮವನ್ನು ಸಲ್ಲಿಸಲು ಬಹಳ ಉತ್ಸುಕನಾಗಿದ್ದಾನೆ. ಆ ಉತ್ಪನ್ನಗಳನ್ನು ಕೊಳ್ಳಲು ಅವನು ಹೋದಾಗ ಮತ್ತೆ ಹಣ ಕೊಡಬೇಕಾಗುತ್ತದೆ. ಅವನು ಗಳಿಸಿರುವುದನ್ನೆಲ್ಲಾ ಕೊಡಬೇಕಾಗುತ್ತದೆ. ಹೀಗೆ ವಂಚನೆಯ ಪ್ರಕ್ರಿಯೆ ಸಾಗುತ್ತಲೇ ಇದೆ.

ಚಿನ್ನದ ನಾಣ್ಯಪದ್ಧತಿಯನ್ನು ಜಾರಿಗೆ ತನ್ನಿ :

ನೀವು ನಿಜವಾದ ಚಿನ್ನದ ನಾಣ್ಯವನ್ನು ಬಳಕೆಗೆ ತಂದರೆ ಆಗ ಹಣದುಬ್ಬರ ಎನ್ನುವುದು ಇರುವುದಿಲ್ಲ. ಉದಾಹರಣೆಗ ಇಲ್ಲೊಂದು ಕನ್ನಡಕವಿದೆ. ನಾನು ಹತ್ತು ರೂಪಾಯಿ ಬೆಲೆ ಹೇಳುತ್ತಿದ್ದೇನೆ. ನೀವಿಬ್ಬರೂ ಗ್ರಾಹಕರು. ನೀವು ಕನ್ನಡಕ ಕೊಳ್ಳಲು ಬಂದಿದ್ದೀರಿ. ಬೇಡಿಕೆ ಹೆಚ್ಚಾದಷ್ಟೂ ಬೆಲೆಯೂ ಹೆಚ್ಚಾಗುತ್ತದೆ. ನಾನು ಕನ್ನಡಕದ ಬೆಲೆಯನ್ನು ಏರಿಸುತ್ತೇನೆ. ಕಾಗದವನ್ನು ಮುದ್ರಿಸಿ ನನಗೆ ಹಣ ಸಂದಾಯ ಮಾಡುವಂತಿದ್ದರೆ ನೀವು ಯಾವುದೇ ಬೆಲೆಯನ್ನು ಒಪ್ಪಿಕೊಳ್ಳುತ್ತೀರಿ. ನಿಮಗೆ ಮುದ್ರಣ ಮಾಡುವ ಶಕ್ತಿ ಇದ್ದರೆ, “ಆಗಲಿ, ತಗೊಳ್ಳಿ ಹದಿನೈದು ರೂಪಾಯಿ” ಎನ್ನುತ್ತೀರಿ. ನೀವು ಮುದ್ರಣ ಮಾಡುತ್ತೀರಿ  ಮತ್ತು  ನನಗೆ  ಪಾವತಿ  ಮಾಡುತ್ತೀರಿ.  ಅಂದರೆ ಕೃತಕವಾಗಿ ಬೆಲೆಯನ್ನು ಹೆಚ್ಚುಮಾಡಿದಂತಾಯಿತು. ಆದರೆ, ಅವನಲ್ಲಿ ಹತ್ತು ನಾಣ್ಯಗಳು ಮತ್ತು ನಿಮ್ಮಲ್ಲಿ ಹತ್ತು ನಾಣ್ಯಗಳು ಇದ್ದು, ನಾನು ಹದಿನೈದು ನಾಣ್ಯಗಳನ್ನು ಕೇಳುತ್ತಿದ್ದರೆ ನಾನು ಅವನಿಂದಲೋ ಅಥವಾ ನಿಮ್ಮಿಂದಲೋ ಹತ್ತು ನಾಣ್ಯಗಳನ್ನು ಮಾತ್ರ ಸ್ವೀಕರಿಸಬಹುದು. ನೀವು ಪಾವತಿಗೆ ನಾಣ್ಯಗಳನ್ನು ಸಂಗ್ರಹಿಸಬೇಕಾದರೆ ಅದು ಕಠಿಣ. ಆದ್ದರಿಂದ ಬೆಲೆಯಲ್ಲಿ ಕೃತಕವಾದ ಹೆಚ್ಚಳವಿರುವುದಿಲ್ಲ.

ಕೃಷಿಯನ್ನು ಆಧರಿಸಿ ಜೀವನೋಪಾಯ :

ಕೃಷಿಕ್ಷೇತ್ರದ ಯೋಜನೆಯ ಮೇಲೆ ನಾವು ಗಮನವನ್ನು ಕೇಂದ್ರೀಕರಿಸಿದರೆ ವಿನಿಮಯದ ಅಗತ್ಯವೇ ಇರುವುದಿಲ್ಲ. ಏಕೆಂದರೆ ನನ್ನ ಉತ್ಪನ್ನಗಳಲ್ಲೇ ನಾನು ಸಂತೃಪ್ತನಾಗಿರುತ್ತೇನೆ. ಅಷ್ಟೆ. ವಿನಿಮಯದ ಆವಶ್ಯಕತೆಯೇ ಇರುವುದಿಲ್ಲ. ನನಗೆ ಏನು ಬೇಕೋ ಅದನ್ನು ನನ್ನ ಹೊಲದಲ್ಲಿ ನಾನು ಪಡೆಯುತ್ತೇನೆ. ನಮ್ಮದೇ ಆಹಾರ, ಬಟ್ಟೆ, ಹಾಲಿನಿಂದ ನಾವು ಸ್ಥಳೀಯವಾಗಿಯೇ ಸಂತೃಪ್ತರಾಗಿರಬೇಕು. ಅಷ್ಟೆ. ಅದೇ ಭಾರತೀಯ ಅರ್ಥವ್ಯವಸ್ಥೆ. ಜಾನುವಾರು ಮತ್ತು ಧಾನ್ಯ. ನಿಮ್ಮಲ್ಲಿ ಅನೇಕ ಹಸುಗಳಿದ್ದರೆ ನಿಮಗೆ ಹಾಲು ದೊರೆಯುತ್ತದೆ. ಹಾಲಿನಿಂದ ಮಾಡಿದ ತಿನಿಸುಗಳು ಸಿಗುತ್ತವೆ.

ನಿಮಗೆ ಧಾನ್ಯಗಳು ಸಿಕ್ಕಿದರೆ ಮನೆಯಲ್ಲಿಯೇ ನಿಮ್ಮ ಆಹಾರವನ್ನು ತಯಾರಿಸಬಹುದು. ಅದನ್ನು ಸೇವಿಸಿ ಹರೇಕೃಷ್ಣ ಮಂತ್ರವನ್ನು ಜಪಿಸಿ. ಇದರಲ್ಲಿ ಸಮಸ್ಯೆ ಎಲ್ಲಿದೆ? ಅಷ್ಟಕ್ಕೂ ತಿನ್ನಬೇಕು, ಶಾಂತವಾಗಿ ಜೀವನ ಮಾಡಬೇಕು ಎನ್ನುವುದು ನಿಮ್ಮ ಇಚ್ಛೆ. ಹಾಗಾದರೆ, ಧಾನ್ಯ ಮತ್ತು ಹಾಲು ನಿಮಗೆ ಸಿಕ್ಕಿದರೆ, ನಿಮಗೆ ಸಾಕಷ್ಟು ಆಹಾರ ದೊರೆತಂತಾಯಿತು. ಆದ್ದರಿಂದ ಏನೂ ಸಮಸ್ಯೆಯಿಲ್ಲ. ಒಂದು ತಗಡಿನ ಕಾರಿನಲ್ಲಿ ನಿಮ್ಮ ಉದ್ಯೋಗಕ್ಕಾಗಿ ಐವತ್ತು ಮೈಲಿಗಳ ದೂರ ಹೋಗಬೇಕಾಗಿಲ್ಲ. ಎಷ್ಟೊಂದು ಸಮಸ್ಯೆಗಳು. ಆದರೆ ನಿಮ್ಮ ಮನೆಯಲ್ಲೇ ನಿಮ್ಮ ಆಹಾರ ದೊರೆತರೆ, ಅದನ್ನು ತಿನ್ನಿ, ಹರೇಕೃಷ್ಣ ಜಪ ಮಾಡಿ ಮತ್ತು ಭಗವದ್ಧಾಮಕ್ಕೆ ತೆರಳಿ. ಸರಳವಾದ ಸಂಗತಿ. ನಿಮಗೆ ಈ ದೇಹವಿದೆ. ಆದ್ದರಿಂದ ನೀವು ಏನನ್ನಾದರೂ ತಿನ್ನಬೇಕಾಗುತ್ತದೆ. ನಿಮ್ಮ ಮೈಯನ್ನು ನೀವು ಮುಚ್ಚಿಕೊಳ್ಳಬೇಕು. ಆದ್ದರಿಂದ ನಿಮ್ಮದೇ ಆಹಾರ, ನಿಮ್ಮದೇ ಬಟ್ಟೆ ಉತ್ಪಾದಿಸಿ. ವಭೋಗಕ್ಕೆ ಸಮಯವನ್ನು ವ್ಯರ್ಥ ಮಾಡಬೇಡಿ. ಹರೇಕೃಷ್ಣ ಮಂತ್ರವನ್ನು ಜಪಿಸಿ. ಇದೇ ಜೀವನದ ಯಶಸ್ಸು. ಯಂತ್ರದ ನಾಗರಿಕತೆಗೆ ಮರುಳಾಗಬೇಡಿ. ಆದರೆ ಇದು ಕೃಷ್ಣಪ್ರeಯನ್ನು ಆಧರಿಸುವ ಮೂಲಕ ಮಾತ್ರ ಸಾಧ್ಯವಾಗಬಲ್ಲದು. ಕೃಷ್ಣಪ್ರeಯನ್ನು ಹೊರತುಪಡಿಸಿ ನೀವು ಇದನ್ನು ಮಾಡಿದರೆ ಅದು ಎಂದೂ ಯಶಸ್ವಿಯಾಗುವುದಿಲ್ಲ. ಇಲ್ಲಿ ನಿಜವಾದ ಆಕರ್ಷಣೆಯೆಂದರೆ ಕೃಷ್ಣ. ಬೇರೆ ವಿಷಯಗಳನ್ನು ಅವನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. “ಸಣ್ಣ ಪುಟ್ಟ ಅನನುಕೂಲಗಳು ಇದ್ದರೇನಂತೆ, ನಾನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ.”

ಕಾರ್ಖಾನೆಗಳನ್ನು ಏಕೆ ಪ್ರಾರಂಭಿಸುತ್ತೀರಿ?

ಕಾರ್ಖಾನೆಗಳನ್ನು ಪ್ರಾರಂಭಿಸುವುದರಿಂದ ಸಂತೋಷವಾಗಿರ- ಬಹುದು ಎನ್ನುವುದು ಜನಗಳ ಅeನದಿಂದ ಮೂಡಿದ ಯೋಚನೆ. ಅವರು ಏಕೆ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು? ಅದರ ಅಗತ್ಯ  ಇಲ್ಲ.  ಎಷ್ಟೊಂದು ಭೂಮಿಯಿದೆ. ವ್ಯಕ್ತಿಯು ತನ್ನ ಆಹಾರ ಧಾನ್ಯಗಳನ್ನು ತಾನೇ ಬೆಳೆಯಬಹುದು ಮತ್ತು ಯಾವುದೇ ಕಾರ್ಖಾನೆಯ

ಅಗತ್ಯವಿಲ್ಲದೆ ಸಮೃದ್ಧವಾಗಿ ಊಟಮಾಡಬಹುದು. ಹಾಲೂ ಕೂಡ ಯಾವುದೇ ಕಾರ್ಖಾನೆಯಿಲ್ಲದೆ ಲಭ್ಯ. ಕಾರ್ಖಾನೆಯು ಹಾಲು ಅಥವಾ ಆಹಾರ ಧಾನ್ಯಗಳನ್ನು ಉತ್ಪಾದಿಸಲಾರದು. ಪ್ರಸ್ತುತ ಜಗತ್ತಿನಲ್ಲಿರುವ ಆಹಾರದ ಕೊರತೆಗ ಬಹುಪಾಲು ಅಂತಹ ಕಾರ್ಖಾನೆಗಳೇ ಕಾರಣ. ಪ್ರತಿಯೊಬ್ಬರೂ ನಗರಗಳಲ್ಲಿ ನಟ್ ಮತ್ತು ಬೋಲ್ಟ್‌ಗಳನ್ನು ಉತ್ಪಾದಿಸುವ ಕೆಲಸದಲ್ಲಿ ಮಗ್ನರಾಗಿದ್ದರೆ ಆಹಾರಧಾನ್ಯಗಳನ್ನು ಬೆಳೆಯುವವರು ಯಾರು? ಸರಳ ಜೀವನ ಉನ್ನತ ಚಿಂತನ ಎನ್ನುವುದೇ ಆರ್ಥಿಕ ಸಮಸ್ಯೆಗಳಿಗೆ ನಿವಾರಣೋಪಾಯ. ಆದ್ದರಿಂದ ಕೃಷ್ಣಪ್ರe ಆಂದೋಲನವು ತನ್ನ ಭಕ್ತರಿಗೆ ತಮ್ಮದೇ ಆದ ಆಹಾರ ಧಾನ್ಯಗಳನ್ನು ಬೆಳೆಯಲು ಮತ್ತು ಸ್ವಾವಲಂಬಿಗಳಾಗಿ ಜೀವನ ನಡೆಸಲು ತೊಡಗಿಸಿದೆ. ತಾನೇ ಬೆಳೆದ ಆಹಾರ ಮತ್ತು ಹಾಲನ್ನು ಸೇವಿಸಿ ಮತ್ತು ಹರೇಕೃಷ್ಣ ಮಂತ್ರವನ್ನು ಜಪಿಸುವ ಮೂಲಕ ಹೇಗೆ ಅತ್ಯಂತ ಶಾಂತವಾಗಿ ಜೀವನ ನಡೆಸಬಹುದು ಎಂದು ಜನರು ನೋಡಬಹುದು.

ದೈವಪ್ರeಯನ್ನು ಪ್ರಸಾರಮಾಡಿ :

ವಂಚಿಸುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಅವರು ದೈವ ಪ್ರeವಂತರಾಗದಿದ್ದರೆ ವಂಚಿಸುವ ಪ್ರಕ್ರಿಯೆಯು ನಿಲ್ಲುವುದಿಲ್ಲ. ದೈವಪ್ರeಯನ್ನು ಪ್ರಸಾರ ಮಾಡಿ. ಆಗ ಪ್ರತಿಯೊಬ್ಬರೂ ಪ್ರಾಮಾಣಿಕರಾಗುತ್ತಾರೆ. ಪ್ರತಿಯೊಂದೂ ಸರಿಹೊಂದಿಕೊಳ್ಳುತ್ತದೆ. ಹರೇಕೃಷ್ಣ ಮಂತ್ರವನ್ನು ಜಪಿಸಲಿ. ಅವರು ಪರಿಶುದ್ಧರಾಗುತ್ತಾರೆ. ನೀವು ಹೆಚ್ಚುಹೆಚ್ಚಾಗಿ ಹರೇಕೃಷ್ಣ ಮಂತ್ರವನ್ನು ಜಪಿಸಿದಷ್ಟೂ ಅವರು ಪರಿಶುದ್ಧರಾಗುತ್ತಾರೆ. ಎಲ್ಲ ಸಮಸ್ಯೆಗಳು ತಪ್ಪು ತಿಳಿವಳಿಕೆಯ ಕಾರಣದಿಂದಾಗಿವೆ. ನಾವು ಕೇವಲ ಅವರ ತಪ್ಪು ತಿಳಿವಳಿಕೆಯನ್ನು ನಿವಾರಿಸಿ ಅವರಲ್ಲಿ ಅರಿವನ್ನು ಮೂಡಿಸುತ್ತಿದ್ದೇವೆ.

ಏಕೆ ತುಂಬ ಶ್ರಮಿಸಬೇಕು?

ವಾಸ್ತವವಾಗಿ ಜನರು ಅಕಾರಣವಾಗಿ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿರುವುದನ್ನು ಕುರಿತು ಚಿಂತಿಸಲು ಬಿಡುವು ಮಾಡಿಕೊಳ್ಳುತ್ತಿಲ್ಲ. ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವವನು ಹತ್ತು ರೂಪಾಯಿಗಳನ್ನು ಸಂಪಾದಿಸುವವನಿಗಿಂತ ಹೆಚ್ಚೇನೂ ತಿನ್ನಲಾರ. ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವವನು ಲಕ್ಷಾಂತರ ಸ್ತ್ರೀಯರೊಡನ ಕೂಡಲಾರ. ಅದು ಅವನ ಶಕ್ತಿಯಲ್ಲಿಲ್ಲ. ಅವನ ಕೂಡುವ ಶಕ್ತಿಯು ಹತ್ತು ರೂಪಾಯಿ ಸಂಪಾದಿಸುವವನಿಗೆ ಇರುವಷ್ಟೇ ಇರುತ್ತದೆ. ಅವನ ಊಟ ಮಾಡುವ ಸಾಮರ್ಥ್ಯವು ಒಂದೇ ಆಗಿರುವ ಹಾಗೆ. ಅಂದರೆ ನಮ್ಮ ಉಪಭೋಗದ ಶಕ್ತಿ ಪರಿಮಿತ ಎಂದಂತಾಯಿತು. ಆದ್ದರಿಂದ ವ್ಯಕ್ತಿಯು ಯೋಚಿಸಬೇಕು, “ನಿತ್ಯ ಹತ್ತು ರೂಪಾಯಿ ಸಂಪಾದನೆ ಮಾಡುವವನದರಷ್ಟೇ ನನ್ನ ಉಪಭೋಗದ ಶಕ್ತಿ ಇದೆ. ಆದ್ದರಿಂದ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಲು ನಾನೇಕೆ ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ?

ನಾನು ಏಕೆ ನನ್ನ ಶಕ್ತಿಯನ್ನು ವ್ಯರ್ಥಮಾಡುತ್ತಿದ್ದೇನೆ? ದೇವರನ್ನು ಅರ್ಥಮಾಡಿಕೊಳ್ಳಲು ನಾನು ನನ್ನ ಕಾಲ ಮತ್ತು ಶಕ್ತಿಯನ್ನು ತೊಡಗಿಸಬೇಕು. ಅದೇ ಜೀವನದ ಉದ್ದೇಶ.” ವ್ಯಕ್ತಿಗೆ ಆರ್ಥಿಕ ಸಮಸ್ಯೆಗಳು ಇಲ್ಲದಿದ್ದರೆ ಅವನಿಗೆ ಕೃಷ್ಣ ಪ್ರeಯನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯವಿರುತ್ತದೆ. ಅವನು ತನ್ನ ಅಮೂಲ್ಯ ಸಮಯವನ್ನು ವ್ಯರ್ಥಮಾಡಿದರೆ ಅವನನ್ನು ಮೂಢ, ಧೂರ್ತ ಅಥವಾ ಕತ್ತೆ ಎಂದು ಕರೆಯಲಾಗುತ್ತದೆ. ನಮಗೆ ಈ ಮಾನವರೂಪದ ಜನ್ಮವನ್ನು ನೀಡಿರುವುದು ಕತ್ತೆ, ಹಂದಿ ಮತ್ತು ನಾಯಿಗಳ ಹಾಗೆ ಕಷ್ಟಪಟ್ಟು ಕೆಲಸ ಮಾಡುವುದಕ್ಕಲ್ಲ. ಜೀವನದ ಅತ್ಯುನ್ನತ ಪರಿಪೂರ್ಣತೆಯನ್ನು ಸಾಸುವುದಕ್ಕೆ. ನಾವು ಆತ್ಮ ಸಾಕ್ಷಾತ್ಕಾರದ ಕಡೆಗೆ ಗಮನ ಹರಿಸದಿದ್ದರೆ, ನಾವು ಇಷ್ಟಪಡದಿದ್ದರೂ ಪ್ರಕೃತಿಯ ನಿಯಮಗಳು ಕಷ್ಟಪಟ್ಟು ಕೆಲಸ ಮಾಡಲು ನಮ್ಮ ಮೇಲೆ ಒತ್ತಡ ಹೇರುತ್ತವೆ.

ಸಂತೃಪ್ತರಾಗಿರಿ :

ಕೃಷ್ಣಪ್ರeವಂತನಾಗದೆ ಇಂದ್ರಿಯ ತುಷ್ಟಿಗೆ ಕೊನೆ ಎಂಬುದಿಲ್ಲ. ಇದು ಯಾರಿಗೂ ತಿಳಿಯದು. ಆದರೆ ಕೃಷ್ಣಪ್ರeವಂತರಾದ ವ್ಯಕ್ತಿಗಳು ಸಂತೃಪ್ತರಾಗಿರುತ್ತಾರೆ. ಇಂದಿಗೂ ಕೂಡ ಭಾರತದಲ್ಲಿ ಕೃಷ್ಣಪ್ರeಯಿಂದ ಈ ಸಂತೃಪ್ತಿಯನ್ನು ನಡಬಹುದು. ಒಬ್ಬ ಬಡ ಮನುಷ್ಯ. ಅವನ

ಆದಾಯವೋ ಅತ್ಯಲ್ಪ. ಆದರೆ ಅವನು ಸಂತೃಪ್ತನಾಗಿರುತ್ತಾನೆ. ಅವನು ಈ ರೀತಿಯಲ್ಲಿ ಸಂತೃಪ್ತನಾಗಿರುತ್ತಾನೆ : ಅವನು ಯೋಚಿಸುತ್ತಾನೆ, “ಕೃಷ್ಣನು ನನಗೆ ಇಷ್ಟನ್ನು ಕೊಟ್ಟಿದ್ದಾನೆ. ಇದರಲ್ಲೇ ನಾನು ಸಂತೃಪ್ತನಾಗಿರಬೇಕು.” ಧರ್ಮಗ್ರಂಥಗಳ ಸೂಚನೆ ಕೂಡ

ಇದೇ ಆಗಿದೆ. ನಾವು ನಮ್ಮ ಆರ್ಥಿಕ ಸ್ಥಾನಮಾನವನ್ನು ಉತ್ತಮಪಡಿಸಿಕೊಳ್ಳಲು ನಮ್ಮ ಸಮಯವನ್ನು ವ್ಯರ್ಥಮಾಡಬಾರದು. ಇದು ಆಗಲೇ ನಿಶ್ಚಯವಾಗಿದೆ. “ನನ್ನ ಮಾನವ ಜನ್ಮದ ಈ ಅಮೂಲ್ಯ ಸಮಯವನ್ನು ಹರೇಕೃಷ್ಣ ಮಂತ್ರ ಜಪದಲ್ಲಿ ಉಪಯೋಗಿಸಿಕೊಳ್ಳೋಣ.” ಯಾರಾದರೂ ಮನಃಶಾಂತಿಯನ್ನು ಬಯಸಿದ್ದರೆ ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕು.

ಲಕ್ಷ್ಮಿ ನಾರಾಯಣನ ಸೇವಕಿ :

ಸಂಪತ್ತನ್ನು ಪೂಜಿಸಲಾಗುತ್ತದೆ. ಅದನ್ನು ಲಕ್ಷ್ಮೀ ಮಾತೆ ಅಥವಾ ಸೌಭಾಗ್ಯ ದೇವತೆ ಎಂದು ಕರೆಯಲಾಗುತ್ತದೆ. ಎಲ್ಲ ನರರಿಗೆ ಅಥವಾ ಜೀವಿಗಳಿಗೆ ಮೂಲಾಧಾರನಾಗಿರುವ ನಾರಾಯಣನಿಗೆ ಸೇವೆ ಸಲ್ಲಿಸುವುದು ಅವಳ ಕರ್ತವ್ಯ. ನರರೂ ಕೂಡ ಭಾಗ್ಯದೇವತೆಯ ಮಾರ್ಗದರ್ಶನದಲ್ಲಿ ನಾರಾಯಣನಿಗೆ ಸೇವೆ ಸಲ್ಲಿಸಲು ಉದ್ದಿಷ್ಟರಾಗಿದ್ದಾರೆ. ಜೀವಿಯು ನಾರಾಯಣನಿಗೆ ಸೇವೆ ಸಲ್ಲಿಸದೆ ಭಾಗ್ಯದೇವತೆಯನ್ನು ಅನುಭವಿಸಲು ಆಗುವುದಿಲ್ಲ. ಆದ್ದರಿಂದ ಅವಳನ್ನು ತಪ್ಪಾಗಿ ಅನುಭವಿಸಲು ಆಸೆ ಪಡುವವರೆಲ್ಲ ಪ್ರಕೃತಿಯ ನಿಯಮಗಳಿಂದ ಶಿಕ್ಷೆಗೆ ಒಳಗಾಗುತ್ತಾರೆ. ಆದ್ದರಿಂದ ಶಾಂತಿ ಮತ್ತು ಸಮೃದ್ಧಿಯನ್ನು ತರದೆ ಈ ಹಣವು ವಿನಾಶವನ್ನೇ ತರುವಂತೆ ಈ ನಿಯಮಗಳು ಖಚಿತಪಡಿಸಿಕೊಂಡಿರುತ್ತವೆ.

ಲಕ್ಷ್ಮಿಯನ್ನು ನಾರಾಯಣನಿಗೆ ಕೊಡಿ, ಇಲ್ಲದಿದ್ದರೆ…

ನಮ್ಮ ಯುಕ್ತವಾದ ನಿರ್ವಹಣೆಗೆ ಅಗತ್ಯವಾದುದಕ್ಕಿಂತ ಹೆಚ್ಚಿನ ಹಣವನ್ನು ಅಂಗೀಕರಿಸಲು ಪ್ರಕೃತಿಯ ನಿಯಮಗಳು ನಮಗೆ ಅವಕಾಶ ಕೊಡುವುದಿಲ್ಲ. ಪ್ರತಿಯೊಬ್ಬನೂ ಕೃಷ್ಣನ ಹಣವನ್ನು ಇಟ್ಟುಕೊಂಡಿದ್ದಾನೆ. ಆ ಹಣದಲ್ಲಿ ಒಂದಿಷ್ಟು ಭಾಗವನ್ನು ಕೃಷ್ಣನಿಗಾಗಿ ಎಷ್ಟು ಬೇಗ ಅವರು ಕೊಡುತ್ತಾರೋ ಅಷ್ಟೂ ಅವರಿಗೆ ಒಳ್ಳೆಯದಾಗುತ್ತದೆ. ಉದಾಹರಣೆಗ ನಾನು ನಿಮ್ಮ ಹಣವನ್ನು ನ್ಯಾಯಬಾಹಿರವಾಗಿ ಇಟ್ಟುಕೊಂಡಿದ್ದೇನೆ. ನಾನು ಅದನ್ನು ಹಿಂತಿರುಗಿಸಿಬಿಟ್ಟರೆ ನನ್ನ ಅಪರಾಕ ಕಾರ್ಯದಿಂದ ನಾನು ವಿಮುಕ್ತನಾಗುತ್ತೇನೆ. ಅಥವಾ ನಾನು ನಿಮ್ಮ ಜೇಬಿನಿಂದ ಏನನ್ನೋ ಕದ್ದುಬಿಟ್ಟಿದ್ದೇನೆ. ಆಗ ನನ್ನ ಮನಃಸಾಕ್ಷಿ ಚುಚ್ಚಲಾರಂಭಿಸುತ್ತದೆ: “ಓಹ್, ಈ ಕಳ್ಳತನ ಒಳ್ಳೆಯದಲ್ಲ.” ಆದ್ದರಿಂದ ನಾನು ಅದನ್ನು ನಿಮಗೆ ಹಿಂತಿರುಗಿಸುತ್ತಿದ್ದಂತೆಯೇ ಪ್ರಕರಣ ಇತ್ಯರ್ಥವಾಗುತ್ತದೆ. ಆದರೆ ಅದನ್ನು ನನ್ನಲ್ಲೇ ಇಟ್ಟುಕೊಂಡರೆ ನಾನೊಬ್ಬ ಅಪರಾಯಾಗುತ್ತೇನೆ. ನನಗೆ ಶಿಕ್ಷೆಯಾಗುತ್ತದೆ. ಅದೇ ರೀತಿಯಲ್ಲಿ ಕೃಷ್ಣನ ಹಣವನ್ನು ಇಟ್ಟುಕೊಂಡು ಅವನಿಗೆ ಹಿಂತಿರುಗಿಸದೇ ಇರುವವರು ಎಲ್ಲ ಅಪರಾಗಳು. ಅವರಿಗೆ ಶಿಕ್ಷೆಯಾಗುತ್ತದೆ. ನ್ಯಾಯಬಾಹಿರವಾದ ರೀತಿಯಲ್ಲಿ ಸಂಚಯವಾದ ಹಣವನ್ನು ಈಗ ಜಿಪುಣ ನಾಗರಿಕರಿಂದ ನಾನಾ ವಿಧವಾದ ಸರ್ಕಾರದ ತೆರಿಗೆಗಳ ಮೂಲಕ ಕಸಿದುಕೊಳ್ಳಲಾಗುತ್ತಿದೆ. ಅದನ್ನು ಆಂತರಿಕ ಮತ್ತು  ಅಂತಾರಾಷ್ಟ್ರೀಯ ಯುದ್ಧನಿಗಾಗಿ ಉಪಯೋಗಿಸಲಾಗುತ್ತಿದೆ. ಇದು  ವ್ಯರ್ಥವಾಗಿ

ಮತ್ತು ವಿನಾಶಕಾರಿಯಾಗಿ ಹಣವನ್ನು ವೆಚ್ಚ ಮಾಡುವ ವಿಧಾನ. ಒಂದು ಕುಟುಂಬವನ್ನು ಯುಕ್ತವಾಗಿ ನೋಡಿಕೊಳ್ಳಲು ಮತ್ತು ಆಧ್ಯಾತ್ಮಿಕ eನವನ್ನು ಬೆಳೆಸಿಕೊಳ್ಳಲು ಅಗತ್ಯವಿರುವಷ್ಟು ಹಣದಿಂದ ಈಗ ನಾಗರಿಕರು ಸಂತೃಪ್ತರಾಗಿಲ್ಲ. ತಣಿಸಲಾಗದ ಆಸೆಗಳನ್ನು ತೃಪ್ತಿಪಡಿಸಲು ಈಗ ಪ್ರತಿಯೊಬ್ಬರಿಗೂ ಅಪರಿಮಿತವಾದ ಹಣ ಬೇಕು. ಜನರ ನ್ಯಾಯಬಾಹಿರವಾದ ಆಸೆಗಳಿಗೆ ಪ್ರಮಾಣಾನುಗುಣವಾಗಿ ಅವರ ಸಂಚಿತ ನಿಯನ್ನು ಮಾಯಾಶಕ್ತಿಯ ಪ್ರತಿನಿಗಳಾದ ವೈದ್ಯರು, ವಕೀಲರು, ತೆರಿಗೆ ಸಂಗ್ರಾಹಕರು, ಸಂಘಗಳು, ಸಂವಿಧಾನಗಳು, ಸಾಧುಸಂತರೆಂದು ಹೇಳಿಕೊಳ್ಳುವವರು, ಬರಗಾಲ, ಭೂಕಂಪ ಮತ್ತು ಅಂತಹ ಅನಕ ಘೋರ ವಿಪತ್ತುಗಳು ಕಸಿದುಕೊಂಡು ಹೋಗುತ್ತವೆ. ಈ ಪತ್ರಿಕೆಯ ಒಂದು ಪ್ರತಿಯನ್ನು ಕೊಳ್ಳಲು ಹಿಂದೆಗೆದ ಒಬ್ಬ ಜಿಪುಣ, ಔಷಧಗಳಿಗೆ ವಾರಕ್ಕೆ ಎರಡು ಸಾವಿರ ರೂಪಾಯಿಗಳನ್ನು ಖರ್ಚುಮಾಡಿ ಕೊನೆಗೆ ಮೃತನಾದ. ಇನ್ನೊಬ್ಬ ದೇವರ ಸೇವೆಗೆ ಒಂದು ಪೈಸೆ ನೀಡಲು ನಿರಾಕರಿಸಿದ. ಆದರೆ ತನ್ನ ಕುಟುಂಬದ ಸದಸ್ಯರ ನಡುವೆಯೇ ನ್ಯಾಯ ಖಟ್ಲೆಯಲ್ಲಿ ಸಾವಿರಾರು ರೂಪಾಯಿಗಳನ್ನು ವ್ಯರ್ಥವಾಗಿ ಕಳೆಯಬೇಕಾಯಿತು. ಮಾಯಾ ಪ್ರಕೃತಿಯ ನಿರ್ದೇಶನದಲ್ಲಿ ಇಂತಹ ಅಸಂಖ್ಯಾತ ಪ್ರಸಂಗಗಳು ನಡೆದಿವೆ. ದಿಟದಲ್ಲಿ ಅದೇ ಪ್ರಕೃತಿ ನಿಯಮ. ಹಣವನ್ನು ಕೃಷ್ಣನ ಸೇವೆಗೆ ಮುಡಿಪಾಗಿಡದಿದ್ದರೆ ಅದನ್ನು ನ್ಯಾಯಾಲಯದ ಸಮಸ್ಯೆಗಳಿಗೋ ಅಥವಾ ರೋಗಗಳ ಚಿಕಿತ್ಸೆಗೋ ವ್ಯರ್ಥವಾಗಿ ಖರ್ಚುಮಾಡಬೇಕಾಗುತ್ತದೆ.

ದೇವರ ಅನುಗ್ರಹವನ್ನು ಸಂಪಾದಿಸಿ :

ದೇವೋತ್ತಮ ಪರಮ ಪುರುಷನ ಅನುಗ್ರಹವಿದ್ದರೆ ಯಥೇಚ್ಛವಾಗಿ ಹಣ್ಣುಗಳು, ಆಹಾರ ಧಾನ್ಯಗಳು ಮತ್ತು ಇತರ ಆಹಾರವಸ್ತುಗಳು ಉತ್ಪನ್ನವಾಗುತ್ತವೆ. ಜಗತ್ತಿನಲ್ಲಿರುವ ಜನರು ತಮ್ಮ ಸಾಮರ್ಥ್ಯದ ಹತ್ತುಪಟ್ಟು ತಿಂದರೂ ಅದನ್ನು ಕರಗಿಸಲಾಗುವುದಿಲ್ಲ. ಈ ಐಹಿಕ ಜಗತ್ತಿನಲ್ಲಿ ಕೃಷ್ಣಪ್ರeಯನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಕೊರತೆಯಿಲ್ಲ. ಜನರು ಕೃಷ್ಣಪ್ರeವಂತರಾದರೆ ದೇವೋತ್ತಮ ಪರಮ ಪುರುಷನ ದಿವ್ಯ ಸಂಕಲ್ಪದಿಂದ ಸಾಕಷ್ಟು ಆಹಾರವಸ್ತುಗಳು ಉತ್ಪಾದನಯಾಗುತ್ತವೆ. ಅದರಿಂದ ಜನರಿಗೆ ಆರ್ಥಿಕ ಸಮಸ್ಯೆ ಎನ್ನುವುದೇ ಇರುವುದಿಲ್ಲ. ಯಾರು ಬೇಕಾದರೂ ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಹಣ್ಣು ಹೂವುಗಳ ಉತ್ಪಾದನೆಯು ನಮ್ಮ ಇಚ್ಛೆಗೆ ಅನುಸಾರವಾಗಿ ನಡೆಯುವುದಿಲ್ಲ. ಅವು ದೇವೋತ್ತಮ ಪುರುಷನ ಪರಮ ಸಂಕಲ್ಪವನ್ನು ಅವಲಂಬಿಸಿರುತ್ತವೆ. ಅವನು ಇಚ್ಛಿಸಿದರೆ ಹಣ್ಣು ಹೂವುಗಳ ರಾಶಿರಾಶಿಯನ್ನೇ ನಮಗೆ ಒದಗಿಸಬಹುದು. ಆದರೆ ಜನರು ನಾಸ್ತಿಕರಾಗಿದ್ದು, ದೈವರಹಿತರಾಗಿದ್ದರೆ, ಅವನ ಸಂಕಲ್ಪದ ಪ್ರಕಾರ ಪ್ರಕೃತಿಯು ಆಹಾರದ ಸರಬರಾಜನ್ನು ನಿಯಂತ್ರಿಸುತ್ತದೆ.

ಸಂಕೀರ್ತನೆಯೇ ನಿಜವಾದ ಪರಿಹಾರ ಕಾರ್ಯ :

ಪರಮ ಆಚಾರ್ಯನನ್ನು ನೀವು ಸಂಪ್ರೀತಿಗೊಳಿಸಬೇಕು. ಅದೇ ಯಶಸ್ಸಿನ ಹಾದಿ. ಉದಾಹರಣೆಗೆ, ಹೈದರಾಬಾದಿನಲ್ಲಿ ಸಂಕೀರ್ತನೆಯನ್ನು ನಡೆಸಿದ ಅನಂತರ ಮಳೆ ಸುರಿಯಿತು. ಅದಕ್ಕೆ ಮುಂಚೆ ಅಲ್ಲಿ ಎರಡು ವರ್ಷಗಳ ಕಾಲ ಬರಗಾಲವಿತ್ತು. ಕಳೆದ ಬಾರಿ ನಾವು ದೆಹಲಿಯಲ್ಲಿ ಹರೇಕೃಷ್ಣ ಉತ್ಸವವನ್ನು ಆಚರಿಸಿದಾಗ ಪಾಕಿಸ್ತಾನವು ಯುದ್ಧ ಘೋಷಿಸುವ ಅಪಾಯವು ಸನ್ನಿಹಿತವಾಗಿತ್ತು. ಆದರೆ ನಮ್ಮ ಸಂಕೀರ್ತನಾ ಆಂದೋಲನದಿಂದ ಭಾರತವು ವಿಜಯಶಾಲಿಯಾಗಿ ಹೊರಹೊಮ್ಮಿತು. ಅದೇ ರೀತಿಯಲ್ಲಿ ಕಲ್ಕತ್ತದಲ್ಲಿ ನಾವು ಒಂದು ಉತ್ಸವವನ್ನು ಏರ್ಪಡಿಸಿದಾಗ ನಕ್ಸಲ್ ಚಳವಳಿಯು ನಿಂತಿತು (ಇವೆಲ್ಲ ೧೯೭೦ರ ದಶಕದಲ್ಲಿ ನಡೆದವು). ಇವು ಸತ್ಯ ಸಂಗತಿಗಳು. ಸಂಕೀರ್ತನಾ ಆಂದೋಲನದ ಮೂಲಕ ನಾವು ಜೀವನದ ಎಲ್ಲ ಸೌಕರ್ಯಗಳನ್ನೂ ಪಡೆಯುವುದಷ್ಟೇ ಅಲ್ಲದೆ, ಕೊನೆಯಲ್ಲಿ ಭಗವದ್ಧಾಮಕ ತೆರಳುತ್ತೇವೆ. ರಾಕ್ಷಸೀಯ ಪ್ರಕೃತಿಯಿರುವವರು ಇದನ್ನು ಅರ್ಥಮಾಡಿಕೊಳ್ಳಲಾರರು. ಆದರೆ ಇದು ಒಂದು ಸತ್ಯಸಂಗತಿ.

ಪ್ರಾಣಿಗಳ ಸಂಗತಿ ಏನು?

ನಾವು ಮಾನವ ಜೀವಿಗಳಿಗೆ ನಮ್ಮದೇ ಆದ ಆರ್ಥಿಕ ಸಮಸ್ಯೆಗಳಿವೆ. ಆದರೆ ಮಾನವ ಸಮಾಜಗಳನ್ನು ಬಿಟ್ಟು ಇತರ ಸಮಾಜಗಳಲ್ಲಿ ಎಂತಹ ಆರ್ಥಿಕ ಸಮಸ್ಯೆ ಇದೆ? ಪಕ್ಷಿ ಸಮಾಜದಲ್ಲಿ ಆರ್ಥಿಕ ಸಮಸ್ಯೆಯಿಲ್ಲ. ಜೀವಜಾತಿಗಳಲ್ಲಿ ಮಾನವ ಸಮಾಜ ಅತ್ಯಂತ ಚಿಕ್ಕದಾದದ್ದು. ಆದರೆ ಅವರು ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದ್ದಾರೆ – ಏನು ತಿನ್ನಬೇಕು, ಎಲ್ಲಿ ಮಲಗಬೇಕು, ಹೇಗೆ ಕೂಡಬೇಕು, ಹೇಗೆ ಸಂರಕ್ಷಿಸಿಕೊಳ್ಳಬೇಕು. ಇವು ಎಲ್ಲ ನಮಗೆ ಸಮಸ್ಯೆಗಳು. ಆದರೆ ಬಹುಪಾಲು ಪ್ರಾಣಿಗಳಿಗೆ – ಜಲಚರಗಳು, ಸಸ್ಯಗಳು, ಕ್ರಿಮಿಕೀಟಗಳು, ಹಕ್ಕಿಗಳು, ಮೃಗಗಳು ಮತ್ತು ಇತರ ಮಿಲಿಯಾಂತರ ಜೀವಿಗಳಿಗೆ ಇಂತಹ ಸಮಸ್ಯೆ ಇಲ್ಲ. ಅವೂ ಕೂಡ ಜೀವಿಗಳೇ. ಅವು ನಮಗಿಂತ ಬೇರೆ ಎಂದು ಯೋಚಿಸಬೇಡಿ. ನಾವು ಮಾನವರು ಮಾತ್ರ ಜೀವಿಗಳು ಮತ್ತು ಉಳಿದವೆಲ್ಲ ಮೃತ ಎನ್ನುವುದು ಸತ್ಯವಲ್ಲ. ಆಹಾರ ಮತ್ತು ವಸತಿಯನ್ನು ಒದಗಿಸುತ್ತಿರುವವನು ಯಾರು? ದೇವರು. ಸಸ್ಯಗಳು ಮತ್ತು ಪ್ರಾಣಿಗಳು ಕಚೇರಿಗೆ ಹೋಗುವುದಿಲ್ಲ. ಹಣವನ್ನು ಸಂಪಾದಿಸಲು ತಂತ್ರeನವನ್ನು ಕುರಿತ ಶಿಕ್ಷಣವನ್ನು ಪಡೆಯಲು ಅವು ವಿಶ್ವವಿದ್ಯಾನಿಲಯಗಳಿಗೆ ಹೋಗುವುದಿಲ್ಲ. ಹಾಗಾದರೆ ಅವು ಹೇಗೆ ಆಹಾರವನ್ನು ಸೇವಿಸುತ್ತವೆ? ದೇವರು ಒದಗಿಸುತ್ತಾನೆ.

ಯೋಗಕ್ಷೇಮಂ ವಹಾಮ್ಯಹಂ :

ನಾವು ನಮ್ಮ ಇಡೀ ಜೀವನವನ್ನು ದೇವರ ಸೇವೆಗೆ ಮುಡಿಪಾಗಿಟ್ಟಿದ್ದೇವೆ. ದೇವರು ಇರುವೆಯಿಂದ ಹಿಡಿದು ಆನೆಯವರೆಗೆ ಆಹಾರವನ್ನು ನೀಡುತ್ತಿದ್ದಾನೆ. ಹಾಗಾದರೆ ನಮಗೆ ಏಕೆ ಕೊಡಬಾರದು? ಆದ್ದರಿಂದ ದೈವಪ್ರeಯಲ್ಲಿರುತ್ತ ನೀವು ಉಪವಾಸಬೀಳುತ್ತೀರೆಂದು ಯೋಚಿಸಬೇಡಿ. ನೀವು ಎಂದೂ ಉಪವಾಸ ಬೀಳುವುದಿಲ್ಲ. ನೀವು ನಿಮ್ಮ ಕರ್ತವ್ಯವನ್ನು ಮಾಡಿಕೊಂಡು ಹೋಗಿ – ಅದೆಂದರೆ ದೇವರನ್ನು ಪ್ರೀತಿಸುವುದು ಮತ್ತು ದೇವರ ಪ್ರೀತಿಯನ್ನು ಕುರಿತು ಬೋಸುವುದು. ನೀವು ಸದಾ ಸಮೃದ್ಧವಾಗಿರುತ್ತೀರಿ, ಇದರಲ್ಲಿ ಸಂಶಯಬೇಡ. ಸಾಧಾರಣ ಮನುಷ್ಯನಿಗಾಗಿ ನೀವು ಸೇವೆಸಲ್ಲಿಸಿದರೆ ಅವನು ನಿಮಗೆ ಸಂಬಳ ಕೊಡುತ್ತಾನೆ, ಉತ್ತಮವಾದ ಸಂಬಳ. ನಾವು ಭಗವಂತನಿಗಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಸಂಬಳ ಸಿಗುವುದಿಲ್ಲವೆ? ಅದು ಹೇಗೆ? ನಮಗೆ ದೊರೆಯಲೇಬೇಕು. ನೀವು ನಿಜವಾಗಿಯೂ ದವರನ್ನು ಪ್ರೇಮಿಸುವವರಾಗಿದ್ದರೆ, ದೇವರ ಕೆಲಸಗಾರರಾಗಿದ್ದರೆ, ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗೆಗೆ ಯೋಚಿಸಬೇಡಿ. ಅದಕ್ಕೆ ಬೆಂಬಲ ಸಿಗುತ್ತದೆ.
Leave a Reply

Your email address will not be published. Required fields are marked *