Search
Wednesday 15 July 2020
  • :
  • :

ಆಧ್ಯಾತ್ಮಿಕ ಅರ್ಥವ್ಯವಸ್ಥೆ

ಅರ್ಥಶಾಸ್ತ್ರವನ್ನು ಹಣದ ವ್ಯವಹಾರ ಅಥವಾ ಅತ್ಯುನ್ನತ ತರಬೇತಿ ಹೊಂದಿದ ತಜ್ಞರಿಂದ ಜಗತ್ತಿನ ಹಣಕಾಸು ಮತ್ತು ವಾಣಿಜ್ಯದ ಕಾರ್ಯಭಾರವೆಂದು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳಲಾಗಿದೆ. ‘ಎಕನಾಮಿಕ್ಸ್’ ಎಂಬ ಶಬ್ದವು ಗ್ರೀಕಿನ ‘oeconomics’ ಎಂಬ ಶಬ್ದದಿಂದ ಬಂದಿದೆ. ಅದರ ಅರ್ಥ ‘ಕುಟುಂಬ’. ಮೂಲತಃ ಅದನ್ನು ಜನರು ತಮ್ಮ ಮೂಲಭೂತ ಆವಶ್ಯಕತೆಗಳಾದ ಆಹಾರ, ಬಟ್ಟೆ ಮತ್ತು ವಸತಿಗಳನ್ನು ಪೂರೈಸಿಕೊಳ್ಳುವ ವಿಧಾನಕ್ಕೆ ಅನ್ವಯಿಸಲಾಗುತ್ತಿತ್ತು. ಶ್ರೀಸಾಮಾನ್ಯನ ಅರ್ಥವ್ಯವಸ್ಥೆ ಇದಿಷ್ಟೇ ಆಗಿದೆ. ಆಹಾರ, ಬಟ್ಟೆ ಮತ್ತು ವಸತಿ ಎಂಬ ನಮ್ಮ ಆರ್ಥಿಕ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳುತ್ತೇವೆ ಎನ್ನುವುದು ಮೂಲಭೂತವಾದ ಅರ್ಥವ್ಯವಸ್ಥೆಯ ಪ್ರಶ್ನೆಯಾಗಿದೆ.

ಬಹುಪಾಲು ಜನರಿಗೆ ತಮ್ಮ ದೈಹಿಕ ಅಗತ್ಯಗಳು ಮತ್ತು ಆಕಾಂಕ್ಷೆಗಳ ಕಡೆ ಗಮನಹರಿಸುವುದರಲ್ಲಿಯೇ ಅವರ ಎಲ್ಲ ಕಾರ್ಯಸಾಮರ್ಥ್ಯವು ಕಳೆದುಹೋಗುತ್ತದೆ. ಬೇರೆ ಯಾವುದಕ್ಕೂ ಅವರಿಗೆ ಸಮಯವೇ ಉಳಿದಿರುವುದಿಲ್ಲ. ಬಹುಪಾಲು ಜನರು ಪ್ರತಿನಿತ್ಯ ಬಹುಕಾಲ ಕೆಲಸ ಮಾಡಿದರೂ ಜೀವನದ ಅತ್ಯಂತ ಮೂಲಭೂತವಾದ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುವಷ್ಟೂ ಸಂಪಾದನೆ ಮಾಡಲಿಕ್ಕಾಗುವುದಿಲ್ಲ. ಇಡೀ ಜೀವನ ಪರ್ಯಂತ ದುಡಿದು ಸಾಯುವುದಕ್ಕಾಗಿಯೇ ನಾವು ಉದ್ದಿಷ್ಟರಾಗಿದ್ದೇವೆಯೆ? ಈ ಸಮಸ್ಯೆಗೆ ಪರಿಹಾರವೇನು?

ಅನೇಕರಿಗೆ ‘ಆಧ್ಯಾತ್ಮಿಕ ಅರ್ಥವ್ಯವಸ್ಥೆ’ ಎಂಬ ನುಡಿಯು ಶಬ್ದಗಳ ವಿರೋಧಾಭಾಸದಂತೆ ತೋರಬಹುದು. ಆಧ್ಯಾತ್ಮಿಕ ಜೀವನದಲ್ಲಿ ಆಸಕ್ತರಾದವರು ಯಾಕೆ ಅರ್ಥಶಾಸ್ತ್ರದಲ್ಲಿ ಆಸಕ್ತಿಯನ್ನು ತೋರುತ್ತಾರೆ ಅಥವಾ ದಿಟವಾಗಿಯೂ ಅರ್ಥಶಾಸ್ತ್ರವನ್ನು ಆಧ್ಯಾತ್ಮಿಕ- ಗೊಳಿಸಲಾಗುತ್ತದೆಯೇ ಎಂದು ಕೇಳಬಹುದು.

ನಾನು ಇಲ್ಲೇನು ಮಾಡುತ್ತಿದ್ದೇನೆ? :

ನಮ್ಮ ಪ್ರಸ್ತುತ ಆರ್ಥಿಕ ಪರಿಸ್ಥಿತಿಯು ಹೇಗೆ ರೂಪುಗೊಂಡಿತು ಎಂದು ತಿಳಿದುಕೊಳ್ಳಬೇಕಾದರೆ ನಾವು ಶ್ರೀಮದ್ ಭಾಗವತದ ಪುಟಗಳತ್ತ ಗಮನಹರಿಸಬೇಕು. ಅದು ಈ ಐಹಿಕ ಪ್ರಪಂಚದ ಸೃಷ್ಟಿಯು ಹೇಗೆ ಮತ್ತು ಏಕೆ ಆಯಿತೆಂದು ವಿವರಿಸುತ್ತದೆ. ದೇವರಿಗೆ ಎಂತಹ ಅಸಂಖ್ಯಾತ ಶಕ್ತಿಗಳಿವೆ ಎನ್ನುವುದನ್ನು ಭಾಗವತವು ವಿವರಿಸುತ್ತದೆ. ಆ ಶಕ್ತಿಗಳನ್ನು ಉನ್ನತ (ಪರಾ), ಅಪರಾ ಮತ್ತು ತಟಸ್ಥ ಎಂದು ವರ್ಗೀಕರಿಸಲಾಗಿದೆ. ಪರಾ ಶಕ್ತಿಗಳು ಸಂಪೂರ್ಣವಾಗಿ ಆಧ್ಯಾತ್ಮಿಕವಾಗಿವೆ. ಅವು ವೈಕುಂಠ ಅಥವಾ ಆಧ್ಯಾತ್ಮಿಕ ಲೋಕದಲ್ಲಿ ಶಾಶ್ವತವಾಗಿ ಅಸ್ತಿತ್ವದಲ್ಲಿರುತ್ತವೆ. ಇತ್ತಲಾಗಿ ಐಹಿಕ ಶಕ್ತಿಯನ್ನು ಅಪರಾ ಎಂದು ಪರಿಗಣಿಸಲಾಗಿದೆ. ಏಕೆಂದರೆ ಅದು ಜೀವಂತವಲ್ಲ. ಯಾವ ರೀತಿಯ ಪ್ರeಯನ್ನೂ ಅದು ಅಭಿವ್ಯಕ್ತಪಡಿಸುವುದಿಲ್ಲ ಮತ್ತು ಅದು ಪಟುತ್ವವಿಲ್ಲದೆಯೂ ಜಡವಾಗಿಯೂ ಇರುತ್ತದೆ. ಪರಾ ಶಕ್ತಿಯಂತೆ ವೈಯಕ್ತಿಕವೂ ಮತ್ತು ಪ್ರeಪೂರ್ವಕವೂ ಆಗಿರುವುದರಿಂದ ತಟಸ್ಥ ಶಕ್ತಿ ಕೂಡ ಆಧ್ಯಾತ್ಮಿಕವೇ. ಆದರೆ ಆಧ್ಯಾತ್ಮಿಕ ಲೋಕದಲ್ಲಾಗಲಿ ಅಥವಾ ಐಹಿಕ ಲೋಕದಲ್ಲಾಗಲಿ ಬಾಳಬಲ್ಲಂತಹ ಅದ್ವಿತೀಯವಾದ ಸಾಮರ್ಥ್ಯ ಅದಕ್ಕಿದೆ. ನಾವೇ ಪ್ರಭುವಿನ ಆ ತಟಸ್ಥ ಶಕ್ತಿಯಾಗಿದ್ದೇವೆ. ಐಹಿಕ ಸಾಮ್ರಾಜ್ಯದಲ್ಲಿ ನಾವು ನೆಲೆಸಿದ್ದರೂ, ನಾವು ಬಯಸಿದರೆ ಉನ್ನತೋನ್ನತವಾದ ಆಧ್ಯಾತ್ಮಿಕ ಲೋಕಕ್ಕೆ ನಮ್ಮನ್ನು ಸ್ಥಳಾಂತರಗೊಳಿಸಿಕೊಳ್ಳಬಲ್ಲೆವು.

ಪ್ರಭುವಿನ ಇಚ್ಛೆಯಂತೆ ಜೀವಿಗಳನ್ನು ಮಾಯೆಯ ಅಡಿಯಲ್ಲಿ ಇರಿಸಲಾಗಿದೆ. ಏಕೆಂದರೆ ಅವರು ಪ್ರಭುವಿನಂತೆ ಆಗಲು ಬಯಸುತ್ತಾರೆ. ಹೀಗೆ ಈ ಐಹಿಕ ಜಗತ್ತನ್ನು ಎರಡು ಕಾರಣಗಳಿಗಾಗಿ ಸೃಷ್ಟಿಸಲಾಯಿತು: ಮೊದಲನೆಯದೆಂದರೆ ಜೀವಿಗಳಿಗೆ ಸಂಪೂರ್ಣ ಸಂತೋಷವನ್ನು ಸಾಸಲು ಹೋರಾಟ ನಡೆಸುವ ಅವಕಾಶವನ್ನು ನೀಡುವುದು. ಆದರೆ ಅಂತಿಮವಾಗಿ ನಾವು ಹತಾಶೆಗೊಳ್ಳುತ್ತೇವೆ, ಏಕೆಂದರೆ ನಾವು ಎಂದೂ ದೇವರಂತಾಗಲಾರೆವು, ಅಥವಾ ಇಲ್ಲಿ ನಾವು ಬಯಸುವ ಸಂತೋಷವನ್ನಾಗಲಿ ಅಥವಾ ಸಂತೃಪ್ತಿಯನ್ನಾಗಲಿ ಕಂಡುಕೊಳ್ಳಲಾರೆವು. ಈ ರೀತಿಯಲ್ಲಿ ಹತಾಶೆಗೊಂಡಮೇಲೆ, ನಾವು ಅಂತಿಮವಾಗಿ ನಮ್ಮ ಅಸ್ತಿತ್ವದ ಹಿಂದಿನ ಸತ್ಯವನ್ನು ಅರ್ಥಮಾಡಿಕೊಳ್ಳಲು ಇಚ್ಛಿಸುತ್ತೇವೆ. ಐಹಿಕ ಸೃಷ್ಟಿಯ ಎರಡನೆಯ ಉದ್ದೇಶವಿದು : ಐಹಿಕವಾಗಿ ಬೇಸತ್ತು ಹೋಗಿರುವಂತಹ ಜೀವಿಗಳಿಗೆ ಈ ಐಹಿಕ ಸೃಷ್ಟಿಯಿಂದ ಬಿಡಿಸಿಕೊಂಡು ಆಧ್ಯಾತ್ಮಿಕ ಲೋಕಕ್ಕೆ ಹೋಗಲು ಒಂದು ಅವಕಾಶವನ್ನು ಕೊಡುವುದು.

ಜಾಗತಿಕ ಆರ್ಥಿಕ ಸಮಸ್ಯೆ :

ತಮೋಗುಣದಿಂದ ತೀವ್ರವಾಗಿ ಪ್ರಭಾವಕ್ಕೆ ಒಳಗಾಗಿರುವವರಿಗೆ ಆರ್ಥಿಕ ಸಮಸ್ಯೆ ಎಂದರೆ ಈ ಲೋಕವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಮತ್ತು ಕೊಳ್ಳೆ ಹೊಡೆಯುವುದು. ಅಪರಿಮಿತ ಲಾಭಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ಜನರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು. ವರ್ತಮಾನ ಕಾಲದಲ್ಲಾಗಲಿ ಅಥವಾ ಭವಿಷತ್ಕಾಲದಲ್ಲಾಗಲಿ, ಯಾರಿಗೇ ಆಗಲಿ ಅಥವಾ ಯಾವುದಕ್ಕೇ   ಆಗಲಿ     ಸಂಭವಿಸಬಹುದಾದ   ಪರಿಣಾಮಗಳ

ಕಡೆಗೆ ಲಕ್ಷ್ಯ ಕೊಡದೆಯಿರುವುದು. ರಜೋಗುಣದಿಂದ ಪ್ರಧಾನವಾಗಿ ಪ್ರಭಾವಿತರಾಗಿರುವವರಿಗೆ ಆರ್ಥಿಕ ಸಮಸ್ಯೆ ಎಂದರೆ ಒಂದೇ ಶಬ್ದ -ಇನ್ನಷ್ಟು . ಇನ್ನಷ್ಟು ಉತ್ಪನ್ನಗಳು, ಇನ್ನಷ್ಟು ಉತ್ಪಾದನೆ, ಇನ್ನಷ್ಟು ವ್ಯಾಪಾರ.

ರಜೋಗುಣವು ಅಪೇಕ್ಷೆ ಮತ್ತು ದುರಾಸೆಯನ್ನು ವೃದ್ಧಿಮಾಡುವ ಆಕರ. ಅದರ ಫಲಿತಾಂಶಗಳೆಂದರೆ ಒತ್ತಡ ಮತ್ತು ಹತಾಶೆ. ಆದ್ದರಿಂದ ಕಾಲ, ವಿಶ್ರಾಂತಿ ಅಥವಾ ದೀರ್ಘಕಾಲದ ಸಂತೃಪ್ತಿಗೆ ಸಾಕಾಗುವಂತಹ ಸಂಪನ್ಮೂಲಗಳು ಎಂದೂ ದೊರೆಯುವುದಿಲ್ಲ.

ತೀವ್ರ ಬಯಕೆಯ ಅರ್ಥವ್ಯವಸ್ಥೆ :

ಇಂದಿನ ಜಗತ್ತಿನ ಕೃತಕ ಜೀವನ ವಿಧಾನದಲ್ಲಿ ಜನರು ಕೆಲಸ ಮಾಡುವುದು ಆ ಕೆಲಸಕ್ಕಾಗಿ ಅಲ್ಲ, ಬೇರೆ ಏನನ್ನೋ ಸಾಸುವುದಕ್ಕಾಗಿ. ಅವರು ಕೆಲಸಕ್ಕೆ ಹೋಗಿ ಹಣವನ್ನು ಸಂಪಾದಿಸಲು ಕೆಲವು ಕಾರ್ಯಭಾರಗಳನ್ನು ನಿರ್ವಹಿಸುತ್ತಾರೆ, ಮತ್ತು ಆ ಹಣದಿಂದ ತಮ್ಮ ಅಪೇಕ್ಷೆಯ ವಸ್ತುಗಳನ್ನು ಪಡೆದುಕೊಳ್ಳುತ್ತಾರೆ. ಹೀಗೆ ಬಹುಪಾಲು ಜನರು ಹಣದಲ್ಲಿ ಮಾತ್ರ ಆಸಕ್ತಿ ಉಳ್ಳವರಾಗಿಬಿಟ್ಟಿದ್ದಾರೆ. ಹೀಗಾಗಿ ಅವರಿಗೆ ತಾವು ಮಾಡುವ ಕೆಲಸದಲ್ಲಿ ಆಸಕ್ತಿಯೇ ಇಲ್ಲ. ತಮ್ಮ ಪ್ರಯತ್ನದಿಂದ ಏನನ್ನು ಸೃಷ್ಟಿಸುತ್ತಾರೋ ಅದಕ್ಕಿಂತ ವಿಭಿನ್ನವಾದುದನ್ನು ಪಡೆಯಬೇಕಾದುದರ ಆವಶ್ಯಕತೆಯು ಅವರನ್ನು ಒಂದು ಘಾಸಿಗೆ ಗುರಿಯಾಗುವಂತಹ ಮತ್ತು ಅಪಾಯಕಾರಿಯಾದ ಸನ್ನಿವೇಶದಲ್ಲಿ ಇರಿಸಿದೆ ಮತ್ತು ಮಧ್ಯಂತರ ಚಲಪರಿಮಾಣವನ್ನು (ಹಣ) ಯಾರು ನಿಯಂತ್ರಿಸುತ್ತಾರೋ ಅವರನ್ನು ಅವಲಂಬಿಸಿಕೊಂಡಿರುವಂತೆ ಮಾಡಿದೆ.

ಅನೇಕ “ಅಭಿವೃದ್ಧಿಶೀಲ ದೇಶ” ಗಳಲ್ಲಿ ಜನರು ರಾಜಸಿಕ ನಗರಗಳಿಗೆ ವಲಸೆ ಹೋಗುತ್ತಿರುವುದರಿಂದ ಸಾತ್ತ್ವಿಕ ಗ್ರಾಮಗಳು ನಿರ್ಜನವಾಗುತ್ತಿವೆ. ಹಣವಿರುವುದು ಈ ರಾಜಸಿಕ ನಗರಗಳಲ್ಲಿಯೇ. ತೀವ್ರ ಬಯಕೆಯ ಪ್ರಭಾವಗಳು ಪ್ರಲೋಭನೆಗೊಳಿಸುವಂತಿವೆ. ಅಂಗಡಿಗಳಲ್ಲಿ ಆಕರ್ಷಕವಾಗಿ ಪ್ರದರ್ಶನಕ್ಕೆ ಜೋಡಿಸಿಟ್ಟ ಉತ್ಪನ್ನಗಳು ತುಂಬಿವೆ. ಜನರು ಚೆನ್ನಾಗಿ ಉಡುಪುತೊಟ್ಟು ಆಕರ್ಷಕವಾಗಿದ್ದಾರೆ. ತೀವ್ರ ಬಯಕೆಯಿಂದ ಬರುವ ಒಂದು ರೀತಿಯ ಸುಖ-ಭ್ರಾಂತಿಯ ಪ್ರe ಅಲ್ಲಿದೆ. ಜನರನ್ನು ಮರಳುಗೊಳಿಸುವಂತಹ ಪ್ರಲೋಭಕತೆ ಅಲ್ಲಿದೆ. ಸಾಧಾರಣತೆಯ ಜೀವನದಿಂದ ಮತ್ತು ಅನೇಕವೇಳೆ ಕಷ್ಟದ ಕೆಲಸದಿಂದ ಮುಕ್ತವಾಗುವ ಆಶಾಭಾವನೆಯಿಂದ, ವೈಖರಿಯಿಂದ ಕೂಡಿದ ಪೋಷಾಕುಗಳನ್ನು ಧರಿಸಿದರೆ ತಾನು ಹೆಚ್ಚು ಆಕರ್ಷಕ ವ್ಯಕ್ತಿಯಾಗುತ್ತೇನೆಂಬ ಸಾಧ್ಯತೆಯ ಪ್ರಲೋಭನೆಯಿಂದ ನಗರವಾಸಿಗಳು ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಅತ್ಯಾಧುನಿಕ ವಿದ್ಯುನ್ಮಾನ ಉಪಕರಣಗಳ ಮೇಲೆ ಮತ್ತು ಫ್ಯಾಷನ್ನುಗಳ (ವೈಖರಿಗಳ) ಮೇಲೆ ಚೆಲ್ಲುತ್ತಾರೆ. ಈ ಎಲ್ಲ ಕೊಳ್ಳುಬಾಕತನವು ಅರ್ಥವ್ಯವಸ್ಥೆಯ ಪ್ರಚೋದಕಶಕ್ತಿಯಾಗಿದೆ.

     ಯಾವುದೇ ದಿನದ ಪತ್ರಿಕೆಯ ವ್ಯಾಪಾರ ವಿಭಾಗವನ್ನು ನೋಡಿ. ಉತ್ಪಾದನೆ, ಬೆಳೆವಣಿಗೆ, ಆದಾಯ ಮತ್ತು ನಷ್ಟಗಳು, ಪ್ರತಿರ್ಸ್ಪಗಳನ್ನು ಗೆಲ್ಲಲು ಸ್ಪರ್ಧೆ, ಬೇರೆ ಉದ್ದಿಮೆಗಳನ್ನು ವಶಪಡಿಸಿಕೊಳ್ಳುವುದು ಮುಂತಾದ ಸಂಗತಿಗಳೇ ನಿಮ್ಮ ಕಣ್ಣಿಗೆ ಬೀಳುತ್ತವೆ. ತೀವ್ರಬಯಕೆಯ ಕನಸೆಂದರೆ ಅಪರಿಮಿತ ಲಾಭಗಳಿಕೆಯ ಸಾಧ್ಯತೆ. ಅದರಲ್ಲಿ ಪ್ರತಿಯೊಬ್ಬನೂ ತನ್ನ ಪಾಡನ್ನು ತಾನು ನೋಡಿಕೊಳ್ಳುತ್ತಾನೆ ಮತ್ತು ಬಹುಶಃ ಉತ್ತಮ ವ್ಯಕ್ತಿ ಗೆಲ್ಲುತ್ತಾನೆ. ಸೋತವರ ಮೇಲೆ ಗೆದ್ದವರು ತಮ್ಮ ಶ್ರೇಷ್ಠತೆಯನ್ನು ಸ್ಥಾಪಿಸುವ ಸ್ಪರ್ಧೆಯು ಎಲ್ಲೆಲ್ಲಿಯೂ ಇದೆ. ಸ್ಪರ್ಧಾತ್ಮಕ ಕ್ರೀಡೆಗಳು ಜಗತ್ತಿನಾದ್ಯಂತ ಜನಪ್ರಿಯವಾಗಿವೆ. ಕ್ರಿಕೆಟ್, ಪುಟ್‌ಬಾಲ್, ಹಾಕಿ ಅಥವಾ ಟೆನ್ನಿಸ್ ತಂಡಗಳ ಆಟಗಾರರ ಸಾಮರ್ಥ್ಯಗಳ ಮೇಲೆ ರಾಷ್ಟ್ರೀಯ ಹೆಮ್ಮೆ ಅಥವಾ ಅವಮಾನ ಅವಲಂಬಿಸಿವೆ. ಸ್ಪರ್ಧಾಮನೋಭಾವದ ತಂದೆತಾಯಿಗಳು ಆಟಗಳಲ್ಲಿ ಮತ್ತು ಪರೀಕ್ಷೆಗಳಲ್ಲಿ ಇತರರಿಗಿಂತ ಹೆಚ್ಚಿನ ಸಾಧನೆಮಾಡುವಂತೆ ತಮ್ಮ ಮಕ್ಕಳಮೇಲೆ ಒತ್ತಡಹೇರುತ್ತಾ ಬಾಲ್ಯದ ಮುಗ್ಧತೆಯನ್ನೇ ಬಲಿಕೊಡುತ್ತಾರೆ. ಈ ರೀತಿ ಅವರು ಶ್ರೇಷ್ಠವಾದ ಶಾಲೆಗಳಿಗೆ ಪ್ರವೇಶ ಪಡೆಯುತ್ತಾರೆ. ಸ್ಪರ್ಧಾತ್ಮಕ ಕ್ರೀಡೆ ಮತ್ತು ಶಿಕ್ಷಣದಿಂದ ಬದ್ಧರಾದ ಪದವೀಧರರು ವ್ಯವಹಾರ ಕ್ಷೇತ್ರದಲ್ಲಿ ಮತ್ತು ಬದುಕಿನಲ್ಲಿ ಸ್ಪರ್ಧಾಳುಗಳಾಗುತ್ತಾರೆ.

ದುರದೃಷ್ಟವಶಾತ್ ಯಾವುದೇ ಪ್ರಮಾಣದ ಐಹಿಕ ಪ್ರಗತಿಯೊಂದೇ ಆತ್ಮವನ್ನು ಸಂತುಷ್ಟಿಗೊಳಿಸಲು ಸಾಕಾಗುವುದಿಲ್ಲ. ಇಂದ್ರಿಯಗಳು ತಮ್ಮ ಗಮ್ಯವಸ್ತುಗಳ ಸಂಪರ್ಕದಿಂದ ಪಡೆಯುವ ಸಂತೋಷವು ಮೊದಲು ಅಮೃತದಂತೆ ತೋರಬಹುದು. ಆದರೆ ಭಗವದ್ಗೀತೆಯು ನಮಗೆ ಬೋಸುವಂತೆ ಅಂತ್ಯದಲ್ಲಿ ಅದು ವಿಷವೇ ಆಗಿರುತ್ತದೆ.

ಅeನದ ಅರ್ಥವ್ಯವಸ್ಥೆ :

      ರಜೋಗುಣದಲ್ಲಿರುವ ಸ್ಪರ್ಧೆಯನ್ನು ಒಂದು ಮಟ್ಟಸವಾದ ಮೈದಾನದ ಹೋಲಿಕೆಯಲ್ಲಿ ನಿರೂಪಿಸಲಾಗಿದೆ. ತಮಸ್ಸಿನ ಪ್ರಭಾವದಿಂದಾಗಿ ಮೈದಾನವು ಒಂದು ಕಡೆಗೆ ಗಮನಾರ್ಹವಾಗಿ ಓಲುವಂತೆ ಅಥವಾ ಸಂಪೂರ್ಣವಾಗಿ ತಮ್ಮ ಕಡೆಗೇ ಓಲುವಂತೆ ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತದೆ. ಲಾಭದಾಸೆಯು ನಿರಂತರವೂ ನಿಷ್ಕರುಣವೂ ಆಗಿರುತ್ತದೆ. ಸಂಪತ್ತನ್ನು ಸಂಚಯ ಮಾಡಲು ಯಾವುದೇ ವಿಧಾನವನ್ನು, ವಿಶೇಷವಾಗಿ ನೀಚ ವಿಧಾನವನ್ನು ಬಳಸಿಕೊಳ್ಳಲಾಗುತ್ತದೆ. ತಮಸ್ಸಿನ ಎಲ್ಲ ಗುಣಗಳಿಗೂ ಅಲ್ಲಿ ಒಂದು ಮೌಲ್ಯಯುತವಾದ ಪಾತ್ರ ದೊರೆಯುತ್ತದೆ: ಸುಳ್ಳು ಹೇಳುವುದು, ವಂಚನೆ, ಕದಿಯುವುದು, ಒರಟುತನ, ಶೋಷಣೆ, ಬಲಪ್ರಯೋಗ ಮತ್ತು ಹಿಂಸೆ. ವೈಯಕ್ತಿಕ ಲಾಭವು ಅತ್ಯುಗ್ರವಾದ ಆತ್ಮರತಿಯ ಬಿಂದುವಿಗೆ ಬೆಳೆಯುತ್ತದೆ. ತನ್ನನ್ನು ಬಿಟ್ಟು ಬೇರೆ ಯಾರ ಬಗೆಗೂ ಚಿಂತಿಸಬೇಕಾಗಿಲ್ಲ ಎನ್ನುವ ಹಂತವನ್ನು ತಲಪುವವರೆಗೂ ಈ ಆತ್ಮರತಿ ಬೆಳೆಯುತ್ತದೆ.

ತಮಸ್ಸಿನ ಪ್ರಭಾವದಿಂದಾಗಿ ಅಕಾರಿಗಳಿಗೆ ಬಹಿರಂಗ ಭಕ್ಷೀಸು, ಲಂಚ ಮತ್ತು ಅನುಕೂಲ ಮಾಡಿಕೊಡಲು ನೀಡುವ ಹಣ – ಇವುಗಳೆಲ್ಲ ವ್ಯವಹಾರವು ವ್ಯಾಪಕ ಮಾರುಕಟ್ಟೆಗಳನ್ನು ಹಿಡಿಯಲು ಇರುವ ಸಾಧನಗಳು. ರಾಜಕೀಯ ಆಪ್ತಮಿತ್ರರಿಗೆ ಲಾಭದಾಯಕವಾದ ಗುತ್ತಿಗೆಗಳು, ಹಣದ ಉಡುಗೊರೆ ಅಥವಾ ಅನುಕೂಲಗಳನ್ನು ನೀಡಲಾಗುತ್ತದೆ. ದೇಶದ ಮುಖ್ಯಸ್ಥರೆನ್ನುವರು ಸರ್ಕಾರದ ಬೊಕ್ಕಸವನ್ನು ಲೂಟಿಹೊಡೆಯುತ್ತಾರೆ. ಪ್ರಜೆಗಳು ವಿದೇಶೀ ಬ್ಯಾಂಕಿನ ತಮ್ಮ ಖಾತೆಗಳಲ್ಲಿ ಶೋಷಣೆ ಎನ್ನುವುದೇ ನಿಯಮವಾಗಿದೆಯೇ ವಿನಾ ವಿನಾಯಿತಿ ಅಲ್ಲ, ಮತ್ತು ಆರ್ಥಿಕ ಅನುಕೂಲವನ್ನು ಎಲ್ಲೆಲ್ಲಿಂದ ಪಡೆಯಲು ಸಾಧ್ಯವೋ ಅಲ್ಲೆಲ್ಲ ಕಡೆಗಳಿಂದ ಪಡೆಯಲಾಗುತ್ತಿದೆ : ಪ್ರತಿರ್ಸ್ಪಗಳಿಂದ, ಸರಬರಾಜುದಾರರಿಂದ, ಕೊಳ್ಳುವವರಿಂದ ಮತ್ತು ಕಾರ್ಮಿಕರಿಂದ. ರಾಜಕೀಯ ಅಕ್ರಮ ಲಾಭಗಳು ಮತ್ತು ಲಂಚಗಳಿಂದ ಜನರಿಗೆ ಈಗ ಆಘಾತವೇ ಆಗುವುದಿಲ್ಲ ಮತ್ತು ದಿಗಿಲೂ ಆಗುವುದಿಲ್ಲ. ಅದು ವಾಡಿಕೆಯಾಗಿದೆ. ಮೇಲುಸ್ತುವಾರಿ, ಲೆಕ್ಕಾಚಾರ ಅಥವಾ ನ್ಯಾಯಿಕ ಅವಲಂಬನೆಯು ಸ್ವಲ್ಪಮಟ್ಟಿಗೆ ಅಥವಾ ಏನೇನೂ ಇಲ್ಲದೆ ಸರ್ಕಾರ ಮತ್ತು ಉದ್ಯಮ ನೇತಾರರು ಸಾರ್ವಜನಿಕರಿಂದ ತಮಗೆ ಸಾಧ್ಯವಾದಷ್ಟನ್ನು ಹೀರಿಕೊಳ್ಳುವುದು ಈಗ ನಿರೀಕ್ಷಿತ ಸಂಗತಿಯೇ ಆಗಿದೆ. ಬಹುಪಾಲು ಜನರು ಹತಾಶರಾಗಿ ಕೈಚೆಲ್ಲಿ ಕುಳಿತಿದ್ದಾರೆ. ಅವರು ಮತ ಚಲಾಯಿಸಿದರೆ ಅದು ಎರಡು ಕೇಡುಗಳಲ್ಲಿ ಕಡಮೆ ಮಟ್ಟದ ಕೇಡಿಗಾಗಿರುತ್ತದೆ. ಜನರಿಗೆ ಏನಾದರೂ ಅನುಕೂಲ ಸಿಕ್ಕಿತೆಂದರೆ ಅಷ್ಟೇ ಪುಣ್ಯ!

ಕಾಗದದ ಹಣದ ಮೌಲ್ಯವು ಒಂದು ಭ್ರಮೆ :

      ನಿಮ್ಮ ಪರ್ಸಿನಲ್ಲಿರುವ ಹಣವು ನಿಜವಾದದ್ದು ಮತ್ತು ಅದು ಬೆಲೆಬಾಳುವ ವಸ್ತುಗಳನ್ನು ಕೊಳ್ಳಬಲ್ಲದು. ಆದ್ದರಿಂದ ಸ್ವತಃ ಹಣಕ್ಕೇ ಬೆಲೆಯಿರಬೇಕೆಂದು ನೀವು ಈ ಶೀರ್ಷಿಕೆಯನ್ನು ವಿರೋಸಬಹುದು. ಆದರೆ ನಿಮ್ಮ ಸುಪರ್ದಿನಲ್ಲಿ ಇರುವುದೆಲ್ಲ ಕೇವಲ ಕೆಲವು ಕಾಗದದ ತುಂಡುಗಳು. ಅದರ ಮೇಲೆ ನಾನಾ ಬಗೆಯ ಅಕೃತವೆಂದು ತೋರುವ ವಿನ್ಯಾಸಗಳ ಕಲಾತ್ಮಕ ಶಾಯಿ ಮುದ್ರಣ. ನೀವು ಹಣವೆಂದು ಕರೆಯುವುದಕ್ಕೆ ವಾಸ್ತವಿಕವಾದ ಮೌಲ್ಯವೇನೂ ಇಲ್ಲ. ಅದಕ್ಕೆ ಏನಾದರೂ ಮೌಲ್ಯವಿದ್ದರೆ ಅದು ನೀವು ಮತ್ತು ಇತರರು ಅದರಲ್ಲಿ ಇರಿಸುವುದು ಅಷ್ಟೆ. ಕಾಗದದ ಹಣವು ಕೆಲಸ ಮಾಡುತ್ತಿದೆ ಮತ್ತು ಎಲ್ಲರೂ ಅದರ ಮೌಲ್ಯವನ್ನು ಒಪ್ಪಿಕೊಳ್ಳುವವರೆಗೆ ಮಾತ್ರ ಅದು ಉಳಿದಿರುತ್ತದೆ. ಸತ್ಯಸಂಗತಿಯೇನೆಂದರೆ ಜನರು ಕಾಗದದ ಹಣದಲ್ಲಿ ಆಸಕ್ತರಾಗಿದ್ದಾರೆ. ಏಕೆಂದರೆ ಅವರಿಗೆ ಏನಾದರೂ ಬೇಕೆಂದರೆ ಅದನ್ನು ದೊರಕಿಸಿಕೊಡುವ ಸಾಧ್ಯತೆಯ ಭರವಸೆಯನ್ನು ಅದು ಕೊಡುತ್ತದೆ. ಆದರೆ ನೀವು ಏನನ್ನು ಬಯಸುತ್ತೀರೋ ಅದನ್ನು ಹಣದಿಂದ ಪಡೆಯಲು ಸಾಧ್ಯವಾಗದೇ ಹೋಗಬಹುದು. ಏಕೆಂದರೆ ಕಾಗದದ ಹಣದ ಮೌಲ್ಯವು ಯಾವುದೇ ಸಮಯದಲ್ಲಿ ಬದಲಾಗಬಹುದು ಅಥವಾ ಸಂಪೂರ್ಣವಾಗಿ ಬೆಲೆಯನ್ನೇ ಕಳೆದುಕೊಳ್ಳಬಹುದು. ಮುಂದೆ ನಿಮಗೆ ಬೇಕಾದ ವಸ್ತುವನ್ನು ನೀವು ನಿರೀಕ್ಷಿಸುವ ಬೆಲೆಯಲ್ಲಿ ಪಡೆಯಲು ನಿಮ್ಮನ್ನು ಸಮರ್ಥರಾಗಿಸುವಂತಹ ಯಾವ ಸಂಪೂರ್ಣ ಖಾತರಿಯನ್ನೂ ಕಾಗದದ ಹಣವು ನೀಡುವುದಿಲ್ಲ. ಚಲಾವಣೆಯಲ್ಲಿರುವ ಹಣದ ಮೌಲ್ಯದಲ್ಲಾಗುವ ಏರುಪೇರು, ವೃತ್ತಪತ್ರಿಕೆಗಳ ಆರ್ಥಿಕ ಪುಟಗಳಲ್ಲಿ ದೈನಂದಿನ ಚರ್ಚೆಯ ವಿಷಯವಾಗಿದೆ.

ಒಂದಾನೊಂದು ಕಾಲದಲ್ಲಿ ಒಂದು ತುಂಡು ಬ್ರೆಡ್ಡಿನ ಬೆಲೆ ೦.೫ ರೂಪಾಯಿಯಾಗಿತ್ತು. ಇಂದು ಅದೇ ಬ್ರೆಡ್ಡಿನ ತುಂಡಿಗೆ ೨೫ ರೂಪಾಯಿ ಬೆಲೆ. ಒಂದು ತುಂಡು ಬ್ರೆಡ್ಡಿಗೆ ಯಾವಾಗಲೂ ನಿಶ್ಚಿತವಾದ ಮೌಲ್ಯವಿದೆ – ಅದೆಂದರೆ ಹಸಿದ ಹೊಟ್ಟೆಯನ್ನು ತುಂಬುವುದು. ಅಂದರೆ ಬ್ರೆಡ್ಡಿನ ಮೌಲ್ಯ ಈ ಎಲ್ಲ ವರ್ಷಗಳಲ್ಲಿ ಬದಲಾಗಿಲ್ಲ. ಬದಲಿಗೆ ರೂಪಾಯಿಯ ಮೌಲ್ಯ ಬದಲಾಗಿದೆ. ಈ ಉದಾಹರಣೆಯು ಜಿಂಬಾಬ್ವೆಗೆ ಹೋಲಿಸಿದರೆ ಇದು ಪೇಲವವಾಗಿ ಕಾಣುತ್ತದೆ. ಏಕೆಂದರೆ ಅಲ್ಲಿ ಅಕೃತ ಹಣದುಬ್ಬರದ ದರವು ೨೦೦೮ರ ಜನವರಿಯಲ್ಲಿ ೧೦೦,೫೮೦% ಅಷ್ಟಿತ್ತು! ಅಂತಹ ಪರಿಸ್ಥಿತಿಗಳಲ್ಲಿ ಒಂದು ಬರ್ಗರ್ ಬೆಲೆ ೧೫ ಲಕ್ಷ ಡಾಲರ್ ಅಷ್ಟಾಗಿತ್ತು, ಟ್ಯಾಕ್ಸಿಯಲ್ಲಿ ೧೦ ಕಿಲೋಮೀಟರ್ ಪ್ರಯಾಣ ಮಾಡಿದರೆ ೯,೦೦೦ ಕೋಟಿ ಡಾಲರ್ ತೆರಬೇಕಿತ್ತು. ೨೦೦೮ರಲ್ಲಿ ಮಕ್ಕಳ ಹೆಚ್ಚುವರಿ ಶಾಲಾ ಶುಲ್ಕ ೧೦,೦೦೦ ಕೋಟಿ ಜಿಂಬಾಬ್ವೆ ಡಾಲರ್ ಅಷ್ಟಾಗಿತ್ತು.

ಚಲಾವಣೆ ದುಡ್ಡಿನ ಮೌಲ್ಯದಲ್ಲಾಗುವ ಬದಲಾವಣೆಯು ಸರ್ಕಾರದ ನೀತಿಯನ್ನು ಅವಲಂಬಿಸಿರುತ್ತದೆ. ಏಕೆಂದರೆ ಹೆಚ್ಚು ಹೆಚ್ಚು ಹಣವನ್ನು ಮುದ್ರಣ ಮಾಡುವುದು ಸರ್ಕಾರ ಅಥವಾ ಚಲಾವಣೆ ನಾಣ್ಯದ ಬೆಲೆಯನ್ನು ತಗ್ಗಿಸುವುದು ಸರ್ಕಾರ. ಹಣದುಬ್ಬರಕ್ಕೆ ಅದೇ ಕಾರಣ. ಕಾಗದದ ಹಣದ ಮೌಲ್ಯವು ಕ್ಷಣಭಂಗುರವಾದುದರಿಂದ ಅದನ್ನು ಯುಕ್ತವಾದ ಸಂಪತ್ತಿನ ಸಂಗ್ರಹ ಎಂದು ಪರಿಗಣಿಸಲಾಗುವುದಿಲ್ಲ. ಗೋ ಅಥವಾ ಚಿನ್ನದಂತಹ ಇತರ ವಸ್ತುಗಳು ತಮ್ಮ ಮೌಲ್ಯವನ್ನು ಎಂದೂ ಬದಲಾಯಿಸಿಕೊಳ್ಳುವುದಿಲ್ಲ. ಏಕೆಂದರೆ ಅವುಗಳ ಬೆಲೆಯು ಜಗತ್ತಿನಾದ್ಯಂತ ಸದಾಕಾಲವೂ ಒಂದೇ ಆಗಿರುತ್ತದೆ.

ಆರ್ಥಿಕ ಕುಸಿತ ಹೇಗೆ ಸಂಭವಿಸುತ್ತದೆ? :

    ಯಾವುದೇ ಕಾರಣದಿಂದ ಬ್ಯಾಂಕುಗಳು ಹೊಸ ಸಾಲಗಳನ್ನು ನೀಡುವುದನ್ನು ನಿಲ್ಲಿಸಿ, ಒಪ್ಪಂದದ ಪ್ರಕಾರ ಹಳೆಯ ಸಾಲಗಳ ಮರುಪಾವತಿಯನ್ನು ಸ್ವೀಕರಿಸುವುದನ್ನು ಮುಂದುವರಿಸಿದರೆ ಹಣದ ಸರಬರಾಜು ಹೆಚ್ಚು ಹೆಚ್ಚಾಗಿ ಇಂಗಿಹೋಗುತ್ತದೆ. ಸಾಕಷ್ಟು ಹಣವಿಲ್ಲದೆ ಅರ್ಥವ್ಯವಸ್ಥೆಯು ತತ್ತರಿಸುತ್ತದೆ. ಈ ಸಮಸ್ಯೆಯು ಉಲ್ಬಣಗೊಂಡಂತೆ ಅದನ್ನು ತಾಂತ್ರಿಕವಾಗಿ ಆರ್ಥಿಕ ಕುಸಿತ ಅಥವಾ ಇಳಿತ ಎಂದು ಕರೆಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಕೆಲವರು ತಮ್ಮ ಕೆಲಸಗಳನ್ನು ಕಳೆದುಕೊಳ್ಳುತ್ತಾರೆ. ಅವರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಲಾಗುವುದಿಲ್ಲ. ಅವರು ಸಾಲ ತೆಗೆದುಕೊಳ್ಳುವಾಗ ಒತ್ತೆಯಾಗಿಟ್ಟ ವಸ್ತುಗಳನ್ನು, ಉದಾ: ಅವರ ಕಾರು ಅಥವಾ ಮನೆ, ಬ್ಯಾಂಕು ಜಪ್ತಿ ಮಾಡುತ್ತದೆ. ವ್ಯಾಪಾರದ ಚಕ್ರ ಎಂದು ಹೇಳಲಾಗುವ ಈ ವಿದ್ಯಮಾನವು ಮಾರುಕಟ್ಟೆಯ ಹುಚ್ಚಾಟಗಳಿಂದ ಸಂಭವಿಸುವುದಿಲ್ಲ. ಬದಲಿಗೆ  ಹಣದ ಸರಬರಾಜಿನ ವಿಸ್ತರಣೆ ಮತ್ತು ಸಂಕೋಚನದಿಂದ ನಿಯಂತ್ರಣಗೊಳ್ಳುತ್ತದೆ.

ನಮ್ಮ ಸಾಂಸ್ಕೃತಿಕ ಉಪಾಗೆ ಒಳಪಟ್ಟ ಅತ್ಯಂತ ಪ್ರಬಲವಾದ ಸಂಗತಿಯೆಂದರೆ ಅಕೃತ ಚಲಾವಣೆಯ ನಾಣ್ಯವಿಲ್ಲದೆ ನಾವು ಕೊಳ್ಳುವುದನ್ನಾಗಲಿ ಅಥವಾ ಮಾರುವುದನ್ನಾಗಲಿ ಮಾಡುವುದಿಲ್ಲ. ಜನರಿಗೆ ಇನ್ನೂ ಆವಶ್ಯಕತೆಗಳು ಇದ್ದರೂ, ಅವರು ಕೆಲಸ ಮಾಡಲು ಸಿದ್ಧರಾಗಿದ್ದರೂ ಇದು ಹೀಗೇ ಇರುತ್ತದೆ. ಉದಾಹರಣೆಗೆ, ೧೯೩೦ರ ಅಮೆರಿಕದ ಮಹಾನ್ ಆರ್ಥಿಕ ಕುಸಿತದ ಸಂದರ್ಭದಲ್ಲಿ ಫೆಡರಲ್ ರಿಸರ್ವ್ ಬ್ಯಾಂಕ್ ಮತ್ತು ಸದಸ್ಯ ಬ್ಯಾಂಕುಗಳು ಸಾಲವನ್ನು ಹ್ರಸ್ವಗೊಳಿಸಿದವು (ಹಣ ಸರಬರಾಜು). ಅದೇ ಆರ್ಥಿಕ ಕುಸಿತದ ನಿಜವಾದ ಕಾರಣವಾಗಿತ್ತು. ಹಣವಿಲ್ಲದೆ ಜನರು ಬೀದಿಗಳಲ್ಲಿ ಅಲೆಯುತ್ತಿದ್ದರು. ಸರಕುಗಳು ಕೊಳ್ಳುವವರಿಗಾಗಿ ಕಾಯುತ್ತಿದ್ದವು. ಆದರೆ ಹಣವನ್ನು ಯಾವುದೇ ರೀತಿಯಲ್ಲಿ ಅವಲಂಬಿಸದೆ ಒಂದು ಅರ್ಥವ್ಯವಸ್ಥೆಯನ್ನು ನಡೆಸಲು ಅನೇಕ ವಿಧಾನಗಳಿವೆ.

ನಿವಾರಣೋಪಾಯ :

ನಾವು ಈ ಜಗತ್ತಿನಲ್ಲಿ ಸಂತೋಷವಾಗಿ ಜೀವನ ಮಾಡಬೇಕೆಂದರೆ ದೇವರು ನಮಗೆ ಈಗಾಗಲೇ ನೀಡಿರುವ ಯೋಜನೆ ಮತ್ತು ವಿಧಾನಗಳ ಪ್ರಕಾರ ಜೀವನ ನಡೆಸಬೇಕು. ಇಲ್ಲಿ ಅತ್ಯಂತ ಸ್ಪಷ್ಟಗೊಳಿಸಬೇಕಾದ ಸಂಗತಿಯೆಂದರೆ ರಜೋಗುಣ ಮತ್ತು ತಮೋಗುಣಗಳಿಂದ ತೀವ್ರವಾದ ಪ್ರಭಾವಕ್ಕೆ ಒಳಗಾದ ಜನರ ಆರ್ಥಿಕ ಸಮಸ್ಯೆಗೆ ಯಾವ ನಿವಾರಣೋಪಾಯವೂ ಇಲ್ಲ. ವಿವಿಧ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಂಶಗಳು ಅಥವಾ ಸೂತ್ರಗಳನ್ನು ಕುಶಲವಾಗಿ ನಿರ್ವಹಿಸುವುದರಿಂದ ನಿವಾರಣೋಪಾಯವನ್ನು ಪಡೆಯಲಾಗುವುದಿಲ್ಲ.

ಆಹಾರ, ಬಟ್ಟೆ  ಮತ್ತು ವಸತಿ ಎಂಬ ಮೂಲಭೂತ ಆರ್ಥಿಕ ಪ್ರಶ್ನೆಯನ್ನು, ಸ್ವಲ್ಪ ಭೂಮಿ ಮತ್ತು ವ್ಯಕ್ತಿಯ ಮನೆಯ ಸುತ್ತಮುತ್ತ ಇರುವ ಸಂಪನ್ಮೂಲಗಳಿಂದ ಸುಲಭವಾಗಿ ನಿರ್ವಹಿಸಬಹುದು. ಜಗತ್ತಿನಾದ್ಯಂತ ಪಡೆದ ಅನುಭವದಿಂದ ಇದು ಜನ್ಮ ತಳೆದಿದೆ. ಶತಶತಮಾನಗಳಿಂದ ಹೀಗೇ ನಡೆದುಕೊಂಡು ಬಂದಿದೆ.

ಸತ್ತ್ವಗುಣದ ಅರ್ಥವ್ಯವಸ್ಥೆ :

     ಸತ್ತ್ವಗುಣದ ಪ್ರಭಾವದಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತಿರುವ ಒಂದು ಸಮಾಜದ ಅತ್ಯಂತ ಅವಶ್ಯವಾದ ಗುಣಗಳಲ್ಲಿ ಒಂದು ಎಂದರೆ ವಾಸ್ತವಿಕವಾಗಿ ಅದರಲ್ಲಿ ಲಾಭದ ಉದ್ದೇಶವಿರುವುದಿಲ್ಲ. ಹೀಗೆ ಇತರರನ್ನು ಅಥವಾ ಭೂಮಿಯನ್ನು ಶೋಷಣೆ ಮಾಡಬೇಕೆಂಬ ಉದ್ದೇಶ ಇದರಲ್ಲಿರುವುದಿಲ್ಲ. ವಸ್ತುಗಳ ತುರ್ತು ಕಾರ್ಯಭಾರ ಮತ್ತು ಉಪಯುಕ್ತತೆಗೆ ಅನುಗುಣವಾಗಿ ಅವುಗಳಿಗೆ ಬೆಲೆಕಟ್ಟಲಾಗುತ್ತದೆ, ಅವು ತರಬಹುದಾದ ಲಾಭಕ್ಕಾಗಿ ಅಲ್ಲ. ವ್ಯಕ್ತಿಯ ಪರಿಶ್ರಮವು ಸಮಾಜಕ್ಕೆ ಮೌಲ್ಯಯುತವಾದದ್ದು ಏನನ್ನೋ ಉತ್ಪಾದಿಸುತ್ತದೆ – ಅದು ರಾಷ್ಟ್ರ ರಕ್ಷಣೆಯ ಯುದ್ಧಕಲೆಯಾಗಿರಬಹುದು, ವಿದ್ಯಾರ್ಥಿಗಳಿಗೆ ಬೋಸುವು- ದಾಗಿರಬಹುದು, ಒಂದು ಬುಟ್ಟಿಯನ್ನು ಹೆಣೆಯುವುದಾಗಿರಬಹುದು ಅಥವಾ ಒಂದು ಉಡುಪನ್ನು ಹೊಲೆಯುವುದಾಗಿರಬಹುದು. ವೈಯಕ್ತಿಕ ಕೌಶಲಗಳು ಮತ್ತು ಸಹಜವಾದ ಪ್ರತಿಭೆಗಳನ್ನು ಬಳಸಿ ಪ್ರತಿಯೊಬ್ಬನೂ ಕೆಲಸದಲ್ಲಿ ನಿರತನಾಗಿರುತ್ತಾನೆ. ಅವರು ಪರಸ್ಪರ ಪ್ರಯೋಜನವಾಗುವ ರೀತಿಯಲ್ಲಿ ಸಮುದಾಯಕ್ಕೆ ಸ್ವಯಿಚ್ಛೆಯಿಂದ ಕೊಡುಗೆಯನ್ನು ನೀಡುತ್ತಾರೆ. ಸತ್ತ್ವಗುಣದಲ್ಲಿರುವವರು ಈ ಭೂಮಿಯಲ್ಲಿರುವ ಕೊಡುಗೆಗಳೆಲ್ಲ ಮನುಕುಲಕ್ಕೆ ದೇವರು ನೀಡಿದ ವರಗಳು ಎಂದು ಗುರುತಿಸುತ್ತಾರೆ. ಅವು ಸರ್ವರ ಕ್ಷಮಾಭಿವೃದ್ಧಿಗಾಗಿ ಉದ್ದಿಷ್ಟವಾದವು ಎಂದು ಕಂಡುಕೊಳ್ಳುತ್ತಾರೆ.

ಸಾತ್ತ್ವಿಕ ಅರ್ಥವ್ಯವಸ್ಥೆಯು ಮನುಕುಲಕ್ಕೆ ದೇವರು ನೀಡಿದ ನೈಸರ್ಗಿಕ ಜೀವನ ವಿಧಾನವನ್ನು ಕೂಡ ಬಳಸಿಕೊಳ್ಳುತ್ತದೆ. ಪ್ರಭುವಿನ ಏರ್ಪಾಡಿನಿಂದಾಗಿ ಕುಟುಂಬದ ಮೂಲಭೂತ ಆವಶ್ಯಕತೆಗಳನ್ನು – ಆಹಾರ, ವಸತಿ, ವಸ್ತ್ರ – ದೊರೆಕಿಸಿಕೊಳ್ಳುವುದು ಕಷ್ಟವೇನಲ್ಲ. ಜಗತ್ತಿನ ಬಹುತೇಕ ಪ್ರತಿಯೊಂದು ಸ್ಥಳದಲ್ಲಿಯೂ ಅವುಗಳನ್ನು ನೇರವಾಗಿ ಭೂಮಿಯಿಂದ ಪಡೆಯಬಹುದು. ಜೀವನದ ಈ ಆವಶ್ಯಕತೆಗಳನ್ನು ನೇರವಾಗಿ ಭೂಮಿಯಿಂದ ಪಡೆಯುವುದು, ಅದರಲ್ಲೂ ವಿಶೇಷವಾಗಿ ವ್ಯಕ್ತಿಯು ಸ್ವಂತ ಉಪಯೋಗಕ್ಕಾಗಿ ಪಡೆಯುವುದು ನೈಸರ್ಗಿಕ ಅರ್ಥವ್ಯವಸಯಾಗಿದೆ ಅಥವಾ ನೈಸರ್ಗಿಕ ಜೀವನವಿಧಾನವಾಗಿದೆ. ವ್ಯಕ್ತಿಯ ಪರಿಶ್ರಮದ ಉತ್ಪನ್ನವೇ ಉದ್ದೇಶಿತ ಗುರಿಯಾಗಿದೆ, ಅದರ ಕಡೆಗೆ ಸಾಗುವ ಸಾಧನವಾಗಿಲ್ಲ.

      ಸತ್ತ್ವಗುಣಕ್ಕೆ ಅನುಸಾರವಾಗಿ ಜೀವನ ನಡೆಸುವ ಸಮಾಜಗಳು ಪರಿಸರ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಸಮಸ್ತ ಜಗತ್ತೂ ಪ್ರಧಾನವಾಗಿ ಸತ್ತ್ವಗುಣದಲ್ಲಿ ಜೀವಿಸಿದಾಗ ಪರಿಸರ ಸಮಸ್ಯೆ ಇರಲಿಲ್ಲ. ಕೈಗಾರಿಕಾ ಕ್ರಾಂತಿಯ ಅನಂತರವಷ್ಟೇ ಅವು ತಲೆದೋರಿದವು – ಆಗ ತಮೋಗುಣ ಮತ್ತು ರಜೋಗುಣಗಳು ಪ್ರಧಾನ ಪಾತ್ರ ವಹಿಸಿದ್ದವು. ಸತ್ತ್ವಗುಣದಲ್ಲಿ ಸಹಜವಾಗಿಯೇ ಸಂತೋಷವಾಗಿರುವ ಜನರು ಹೆಚ್ಚಾಗುತ್ತಲೇ ಇರುವ ಹೊಸ ಹೊಸ ಅನಗತ್ಯ, ಅಷ್ಟೇಕೆ ಅನುಪಯುಕ್ತವಾದ ಇಂದ್ರಿಯ ತುಷ್ಟಿಯನ್ನು ಬಯಸುವುದಿಲ್ಲ. ಈ ಇಂದ್ರಿಯ ತುಷ್ಟಿಯು ಗುಲಾಮ ಕಾರ್ಖಾನೆಗಳು ಮತ್ತು ಜಾಗತಿಕ ಅರ್ಥ ವ್ಯವಸ್ಥೆಯನ್ನು ಸಮರ್ಥಿಸುತ್ತದೆ. ಆದ್ದರಿಂದ ಜಗತ್ತು ಮತ್ತು ಅದರ ಸಮಸ್ತ ಜೀವನಕ್ಕೆ ಬೆಲೆ ಕೊಡುವವರಿಗೆ ಇರುವ ಏಕಮಾತ್ರ ಆರ್ಥಿಕ ನಿವಾರಣೋಪಾಯವೆಂದರೆ ಸತ್ತ್ವಗುಣದ ಪ್ರಭಾವದಲ್ಲಿ ಪ್ರಧಾನವಾಗಿ ಕಾರ್ಯ ನಿರ್ವಹಿಸುತ್ತಿರುವ ಅರ್ಥವ್ಯವಸ್ಥೆ ಮತ್ತು ಸಾಮಾಜಿಕ ಏರ್ಪಾಡು.

ಪ್ರeಯ ವರ್ಧನೆ :

ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ, ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ.

      ಈಗ ನಾವು ಎದುರಿಸುತ್ತಿರುವ ಅನರ್ಥಗಳು ಮತ್ತು ಸಮಸ್ಯೆಗಳಿಗೆ ಹರೇಕೃಷ್ಣ ಮಹಾಮಂತ್ರದ ಜಪವು ರಾಮಬಾಣ. ಈ ಮಂತ್ರವನ್ನು ಜಪಿಸುವವನು ಅಷ್ಟೇ ಅಲ್ಲದೆ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಯೂ ಪ್ರಯೋಜನವನ್ನು ಪಡೆಯುತ್ತದೆ. ಬೇರೆಯವರು ಜಪಮಾಡುವುದರಿಂದಲೇ, ಹೀನ ಸ್ಥಿತಿಯಲ್ಲಿರುವವರು ಮತ್ತು ಪಾಪಿಷ್ಠರಾದ ಎಲ್ಲರೂ ಮತ್ತು ಎಲ್ಲ ರಾಕ್ಷಸ ಪ್ರವೃತ್ತಿಯವರೂ ಸೇರಿದಂತೆ, ಪ್ರತಿಯೊಬ್ಬರ ಪ್ರeಯನ್ನೂ ಉನ್ನತೀಕರಿಸಬಹುದು. ಆದ್ದರಿಂದ ಇದನ್ನು ಅತ್ಯಂತ ಉನ್ನತವಾದ ಕ್ಷೇಮಾಭಿವೃದ್ಧಿ ಚಟುವಟಿಕೆಯೆಂದು ಪರಿಗಣಿಸಲಾಗಿದೆ. ಹೀಗೆ ಹರೇಕೃಷ್ಣ ಮಹಾಮಂತ್ರದ ಜಪದಿಂದ ಪ್ರತಿಯೊಬ್ಬರನ್ನೂ ರಜೋಗುಣ ಮತ್ತು ತಮೋಗುಣದ ಪಾತಾಳದಿಂದ ಸತ್ತ್ವಗುಣಕ್ಕೆ ಮತ್ತು ಇನ್ನೂ ಆಚೆಗೆ ಎತ್ತರಿಸಬಹುದು.

ಉಪಸಂಹಾರ :

ಅಪೌರುಷೇಯ ಧರ್ಮಗ್ರಂಥಗಳಲ್ಲಿ ಪರಮ ಪ್ರಭುವನ್ನು ಸತ್-ಚಿದ್-ಆನಂದ-ವಿಗ್ರಹ ಎಂದು ಬಣ್ಣಿಸಲಾಗಿದೆ : ಸಂಪೂರ್ಣ eನವುಳ್ಳವನು, ಶಾಶ್ವತ ಆನಂದದಲ್ಲಿರುವವನು ಮತ್ತು ತನ್ನ ಅಸ್ತಿತ್ವದ ಬಗೆಗೆ ಪೂರ್ಣ ಅರಿವನ್ನುಳ್ಳವನು. ಜೀವಿಗಳು ಪರಮ ಪ್ರಭುವಿನ ಅತ್ಯಂತ ಚಿಕ್ಕ ಮಾದರಿಗಳು. ಹೀಗೆ ಆಗಿರುವ ಕಾರಣದಿಂದಾಗಿ ಈ ಐಹಿಕ ಜಗತ್ತಿನಲ್ಲಿ ಅತ್ಯುನ್ನತ ಮಟ್ಟದ ಆನಂದವನ್ನು ಅನುಭವಿಸಲು ಅವರು ಬಯಸುತ್ತಾರೆ. ಆದರೂ ಕೂಡ ಇಲ್ಲಿ ಪ್ರತಿಯೊಬ್ಬರೂ ಅಸುಖಿಯಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ ಐಹಿಕ ಚಟುವಟಿಕೆಗಳಿಂದ ನಾವು ಪಡೆಯುತ್ತಿರುವ ಸಂತೋಷಕ್ಕಿಂತ ನಮ್ಮ ಮನೋಧರ್ಮಕ್ಕೆ ಸೂಕ್ತವಾದ ಸಂತೋಷದ ಗುಣವು ಬೇರೆಯದೇ ಆಗಿದೆ. ನೀರಿನಿಂದ ತೆಗೆದ ಮೀನು ಭೂಮಿಯ ಮೇಲೆ ಯಾವ ಏರ್ಪಾಡುಗಳನ್ನು ಮಾಡಿದರೂ ಸಂತೋಷವಾಗಿರಲಾರದು. ಅದಕ್ಕೆ ನೀರನ್ನು ಒದಗಿಸಬೇಕು. ಅದೇ ರೀತಿಯಲ್ಲಿ ಚಿಕ್ಕ ರೂಪದಲ್ಲಿರುವ ಸತ್-ಚಿದ್-ಆನಂದ ಎಂಬ ಜೀವಿಯು ಈ ಐಹಿಕ ಜಗತ್ತಿನಲ್ಲಿ, ಮಾಯೆಗೆ ತುತ್ತಾದ ಅವನ ಮಿದುಳು ಏನೆಲ್ಲ ಯೋಜನೆಗಳನ್ನು ಮಾಡಿದರೂ, ನಿಜವಾಗಿಯೂ ಸಂತೋಷವಾಗಿ ಇರಲಾರನು. ಆದ್ದರಿಂದ ಅವನಿಗೆ ಸಾರಭೂತವಾಗಿ ಆಧ್ಯಾತ್ಮಿಕವಾಗಿರುವ ಬೇರೆಯದೇ ಬಗೆಯದಾದ ಸಂತೋಷವನ್ನು ಕೊಡಬೇಕು. ನಮ್ಮ ಆಕಾಂಕ್ಷೆಯು ಆಧ್ಯಾತ್ಮಿಕ ಆನಂದವನ್ನು ಆಸ್ವಾದಿಸುವ ಗುರಿಯನ್ನು ಹೊಂದಿರಬೇಕೇ ವಿನಾ ಈ ಕ್ಷಣಭಂಗುರವಾದ ಸಂತೋಷವನ್ನಲ್ಲ. ಪ್ರತಿಯೊಬ್ಬರೂ ಆಧ್ಯಾತ್ಮಿಕ ಆನಂದವನ್ನು ಪಡೆಯುವ ಅತ್ಯುತ್ತಮ ಮತ್ತು ಖಚಿತ ವಿಧಾನವನ್ನು ಭಕ್ತಿಪೂರ್ವಕ ಚಟುವಟಿಕೆಗಳ ಮೂಲಕ ಶ್ರೀ ಚೈತನ್ಯ ಮಹಾಪ್ರಭುಗಳು ಪ್ರತಿಪಾದಿಸಿದ್ದಾರೆ. ಹರೇಕೃಷ್ಣ ಮಂತ್ರವನ್ನು ಜಪಿಸುವ ಮೂಲಕ ಆರಂಭವಾಗುವ ಈ ಭಕ್ತಿಪೂರ್ವಕ ಚಟುವಟಿಕೆಗಳು ಜಗತ್ತಿನ ಮುಖಭಾವವನ್ನೇ ಬದಲಾಯಿಸಬಲ್ಲವು.
Leave a Reply

Your email address will not be published. Required fields are marked *