Warning: Parameter 2 to wp_hide_post_Public::query_posts_join() expected to be a reference, value given in /home/iskconbr/public_html/blog/wp-includes/class-wp-hook.php on line 298
ಶ್ರೀಲ ಪ್ರಭುಪಾದ ಉವಾಚ
Search
Sunday 20 September 2020
  • :
  • :
ಇತ್ತೀಚಿನ ಲೇಖನ

Warning: Parameter 2 to wp_hide_post_Public::query_posts_join() expected to be a reference, value given in /home/iskconbr/public_html/blog/wp-includes/class-wp-hook.php on line 298

ಶ್ರೀಲ ಪ್ರಭುಪಾದ ಉವಾಚ

(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಮನುಷ್ಯನು ಆರೋಗ್ಯದ ನಿಯಮಗಳನ್ನು ಅರಿಯದಿದ್ದರೆ ಯಾವ ಸೋಂಕು ಹೇಗೆ ತಗಲುತ್ತದೆಂದು ಅವನಿಗೇ ತಿಳಿಯುವುದಿಲ್ಲ. ಆದುದರಿಂದ, ಅಜ್ಞಾನದಿಂದ ಸೋಂಕು ತಗಲುತ್ತದೆ. ಮತ್ತು ನಾವು ರೋಗದಿಂದ ನರಳುತ್ತೇವೆ. ಅಪರಾಧಿಯು, “ನನಗೆ ಕಾನೂನು ಗೊತ್ತಿರಲಿಲ್ಲ” ಎಂದು ಹೇಳಬಹುದು. ಆದರೆ ಅವನು ಅಪರಾಧ ಮಾಡಿದರೆ ಅವನಿಗೆ ಕ್ಷಮೆ ದೊರೆಯುವುದಿಲ್ಲ.

– ಆತ್ಮ ಸಾಕ್ಷಾತ್ಕಾರ ವಿಜ್ಞಾನ, ಅಧ್ಯಾಯ 2

ಧಾರ್ಮಿಕ ತತ್ತ್ವಗಳು ಇಲ್ಲದಿದ್ದರೆ ಮನುಷ್ಯನಿಗೂ ನಾಯಿಗೂ ಏನು ವ್ಯತ್ಯಾಸ? ಮನುಷ್ಯನು ಧರ್ಮವನ್ನು ಅರ್ಥಮಾಡಿಕೊಳ್ಳಬಲ್ಲ. ಆದರೆ ನಾಯಿಗೆ ಅದು ಸಾಧ್ಯವಿಲ್ಲ. ಇದೇ ವ್ಯತ್ಯಾಸ. ಮಾನವ ಸಮಾಜವು ನಾಯಿ ಬೆಕ್ಕುಗಳ ಹಂತದಲ್ಲಿ ಉಳಿಯುವುದಾದರೆ ಶಾಂತಿಯುತವಾದ ಸಮಾಜವನ್ನು ನೀವು ಹೇಗೆ ನಿರೀಕ್ಷಿಸುವಿರಿ?

– ಆತ್ಮ ಸಾಕ್ಷಾತ್ಕಾರ ವಿಜ್ಞಾನ, ಅಧ್ಯಾಯ 6

ಕಾಮಾಲೆಯಿಂದ ನರಳುತ್ತಿರುವವನಿಗೆ ಕಲ್ಲುಸಕ್ಕರೆ ಕೊಟ್ಟರೆ ಬಹಳ ಕಹಿ ಎನ್ನುತ್ತಾನೆ. ಆದರೆ ಕಲ್ಲುಸಕ್ಕರೆ ಕಹಿಯೇ? ಅಲ್ಲ, ಅದು ಬಹಳ ಸಿಹಿ. ಅಲ್ಲದೆ ಕಾಮಾಲೆಗೆ ಸಕ್ಕರೆಯೇ ಔಷಧ. ಆಧುನಿಕ ವಿಜ್ಞಾನವು ಇದನ್ನು ಔಷಧವಾಗಿ ಕೊಡುತ್ತದೆ. ವೈದಿಕ ಸಾಹಿತ್ಯ ಕೂಡ ಇದನ್ನೇ ಹೇಳಿದೆ. ಆದ್ದರಿಂದ ನಾವು ಬಹಳಷ್ಟು ಕಲ್ಲುಸಕ್ಕರೆಯನ್ನು ತೆಗೆದುಕೊಂಡರೆ ಕಾಮಾಲೆ ವಾಸಿಯಾಗುತ್ತದೆ. ಹೀಗೆ ವಾಸಿಯಾದ ಮೇಲೆ “ಓಹೋ, ಇದು ಬಹಳ ಸಿಹಿಯಾಗಿದೆ” ಎನ್ನುತ್ತೇವೆ. ಆದ್ದರಿಂದ ಆಧುನಿಕ ದೈವರಹಿತ ನಾಗರಿಕತೆಯ ಕಾಮಾಲೆಯನ್ನು ಹರೇಕೃಷ್ಣ ಮಂತ್ರದ ಜಪದಿಂದ ಗುಣಪಡಿಸಬಹುದು. ಆರಂಭದಲ್ಲಿ ಅದು ಕಹಿಯಾಗಿ ತೋರಬಹುದು. ಆದರೆ ಪ್ರಗತಿಯನ್ನು ಸಾಧಿಸಿದಂತೆ ಅದು ಎಷ್ಟು ಹಿತಕರ ಎನ್ನುವುದು ಅರಿವಾಗುತ್ತದೆ.

– ಆತ್ಮ ಸಾಕ್ಷಾತ್ಕಾರ ವಿಜ್ಞಾನ, ಅಧ್ಯಾಯ 8




Leave a Reply

Your email address will not be published. Required fields are marked *