ಅಕ್ಷಯ ಪಾತ್ರವು ಸೌಲಭ್ಯ ವಂಚಿತ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ಮತ್ತು ಅವರ ಶಿಕ್ಷಣಕ್ಕೆ ನೆರವಾಗುವ ಪ್ರಯತ್ನವಾಗಿದೆ. ಅಕ್ಷಯ ಪಾತ್ರದ ಧ್ಯೇಯ ವಾಕ್ಯವು ಇಂತಿದೆ : ಹಸಿವಿನ ಕಾರಣ ಯಾವುದೇ ಮಗುವು ಶಿಕ್ಷಣದಿಂದ ವಂಚಿತವಾಗಬಾರದು. ಅಕ್ಷಯ ಪಾತ್ರ ಪ್ರತಿಷ್ಠಾನವು ಜೂನ್, ೨೦೦೦ದಲ್ಲಿ ಬೆಂಗಳೂರಿನ ಹೊರ ವಲಯದ ೧೫೦೦ ಮಕ್ಕಳಿಗೆ ಊಟ ಒದಗಿಸುವ ಕಾರ್ಯಕ್ರಮವನ್ನು ಆರಂಭಿಸಿತು.

ಇಂದು ಅಕ್ಷಯ ಪಾತ್ರ ಊಟವು ಪ್ರತಿ ದಿನ ೧೬ ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಮುಟ್ಟುತ್ತಿದೆ. ಅಕ್ಷಯ ಪಾತ್ರವು ಈಗ ಭಾರತದ ೧೨ ರಾಜ್ಯಗಳ ೩೩ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದು ವಿಶ್ವದಲ್ಲಿಯೇ ಎನ್‌ಜಿಓ ಒಂದು ನಡೆಸುವ ಅತಿ ದೊಡ್ಡ ಮಧ್ಯಾಹ್ನದ ಬಿಸಿ ಊಟದ ಕಾರ್ಯಕ್ರಮವಾಗಿದೆ. ೨೦೨೦ರ ವೇಳೆಗೆ ೫ ಲಕ್ಷ ಮಕ್ಕಳನ್ನು ಮುಟ್ಟುವುದು ಇದರ ಧ್ಯೇಯವಾಗಿದೆ.

ಸರಕಾರ ಮತ್ತು ಸರಕಾರದ ನೆರವಿನ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡಲು ಅಕ್ಷಯ ಪಾತ್ರ ಪ್ರತಿಷ್ಠಾನವು ಕೇಂದ್ರ ಮತ್ತು ಅನೇಕ ರಾಜ್ಯ ಸರಕಾರಗಳ ಜೊತೆ ಕಾರ್ಯ ನಿರ್ವಹಿಸುತ್ತಿದೆ.

ಕೆಳಗಿನ ಈ ಸ್ಥಳಗಳಲ್ಲಿ ಅಕ್ಷಯ ಪಾತ್ರ ಪ್ರತಿಷ್ಠಾನದ ಅಡುಗೆ ಮನೆಗಳಿವೆ :

ಆಂಧ್ರ ಪ್ರದೇಶ – ವಿಶಾಖಪಟ್ಟಣಂ, ನೆಲ್ಲೂರು, ಕಾಕಿನಾಡ, ಮಂಗಳಗಿರಿ.

ಅಸ್ಸಾಂ – ಗುವಾಹಟಿ

ಛತ್ತೀಸ್‌ಗಢ – ಭಿಲಾಯ್

ಗುಜರಾತ್ – ಗಾಂಧೀನಗರ, ಸೂರತ್, ವಡೋದರ, ಭಾನಗರ

ಕರ್ನಾಟಕ – ಬೆಂಗಳೂರು, ವಸಂತಪುರ (ಬೆಂಗಳೂರು ದಕ್ಷಿಣ), ಜಿಗಣಿ, ಮಂಗಳೂರು, ಮೈಸೂರು, ಬಳ್ಳಾರಿ, ಹುಬ್ಬಳ್ಳಿ

ಒಡಿಶಾ – ಪುರಿ, ಕಟಕ್, ರೂರ್ಕೆಲಾ, ನಯಾಗಢ.

ರಾಜಸ್ಥಾನ – ಜೈಪುರ, ಅಜ್ಮೀರ್, ನಾಥದ್ವಾರಾ, ಜೋಧ್‌ಪುರ, ಬಾರಾನ್

ಮಹಾರಾಷ್ಟ್ರ – ಠಾಣೆ, ನಾಗ್ಪುರ.

ತಮಿಳುನಾಡು – ಚೆನ್ನೈ

ತೆಲಂಗಾಣ – ಹೈದರಾಬಾದ್, ನರಸಿಂಗಿ

ತ್ರಿಪುರಾ – ಕಾಶೀರಾಂಪರ

ಉತ್ತರ ಪ್ರದೇಶ – ಲಖನೌ, ವೃಂದಾವನ

ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮವು ಭಾರತದಾದ್ಯಂತ ಸಕಾರಾತ್ಮಕ ಪ್ರಭಾವವನ್ನು ಕಂಡಿದೆ. ೨೦೦೬ರಲ್ಲಿ, ಎ.ಸಿ. ನೀಲ್ಸನ್ ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮದ ಪ್ರಭಾವವನ್ನು ಕಂಡುಕೊಳ್ಳಲು ಅಧ್ಯಯನವೊಂದನ್ನು ನಡೆಸಿತು. ಈ ಕಾರ್ಯಕ್ರಮವು ಮಕ್ಕಳ ಪೌಷ್ಟಿಕಾಂಶ ಸ್ಥಿತಿಯಲ್ಲಿ ಸುಧಾರಣೆ ಉಂಟುಮಾಡಿದ್ದಲ್ಲದೆ, ಶಾಲೆಗಳಲ್ಲಿ ಮಕ್ಕಳ ಸೇರ್ಪಡೆ ಮತ್ತು ಹಾಜರಾತಿಯನ್ನೂ ಹೆಚ್ಚಿಸಿದೆ ಎಂದು ಅಧ್ಯಯನವು ಕಂಡುಕೊಂಡಿತು. ಶಾಲೆ ಬಿಡುವ ಮಕ್ಕಳ ಸಂಖ್ಯೆ ಕೂಡ ಗಮನಾರ್ಹವಾಗಿ ಕಡಿಮೆಯಾಗಿದೆ. ತರಗತಿಗಳಲ್ಲಿ ವಿದ್ಯಾರ್ಥಿಗಳ ನಿರ್ವಹಣೆಯಲ್ಲಿಯೂ ಸುಧಾರಣೆಯಾಗಿದೆ : ಕಲಿಯುವುದರಲ್ಲಿ ಅವರ ಗಮನ ಹೆಚ್ಞಾಗಿ ಉತ್ತಮ ಶೈಕ್ಷಣಿಕ ಪ್ರಗತಿ ಕಂಡು ಬಂದಿದೆ.

೨೦೦೭ರಲ್ಲಿ, ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ಅಕ್ಷಯ ಪಾತ್ರ ಕಾರ್ಯರೂಪದ ಬಗೆಗೆ ಅಧ್ಯಯನ ನಡೆಸಿತು. ಖಚಿತತೆ ಮತ್ತು ಸಮಯ ನಿರ್ವಹಣೆ ಕುರಿತಂತೆ ಅಧ್ಯಯನ ವಿಷಯವಾಗಿ ತನ್ನ ಎಂಬಿಎ ಪಠ್ಯದಲ್ಲಿ ಸೇರಿಸಿತು.

ಆರ್ಥಿಕ ನಿರ್ವಹಣೆಗಾಗಿ ಭಾರತದ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯು ಅಕ್ಷಯ ಪಾತ್ರಗೆ ಗೋಲ್ಡ್ ಶೀಲ್ಡ್ ಪ್ರಶಸ್ತಿ ನೀಡಿ ಗೌರವಿಸಿದೆ.